ಈಶ್ವರಮಂಗಲ `ಡಿ ಫ್ಯಾಕ್ಟೋ ಮೆನ್ಸ್ ಹಬ್’ನಲ್ಲಿ ಲಕ್ಕಿ ಡ್ರಾ ವಿಜೇತರ ಆಯ್ಕೆ

0

ಪುತ್ತೂರು: ಈಶ್ವರಮಂಗಲದಲ್ಲಿ ಇತ್ತೀಚೆಗೆ ಶುಭಾರಂಭಗೊಂಡಿರುವ ಪುರುಷರ ಸಿದ್ದ ಉಡುಪುಗಳ ಮಳಿಗೆ ಹಾಗೂ ಪುರುಷರ ಡ್ರೆಸ್ ಹೊಲಿಗೆ ಮಳಿಗೆಯಾಗಿರುವ ಡಿ ಫ್ಯಾಕ್ಟೋ ಮೆನ್ಸ್ ಹಬ್ ಇದರ ಉದ್ಘಾಟನೆ ಪ್ರಯುಕ್ತ ರೂ.1500ಕ್ಕಿಂತ ಮೇಲ್ಪಟ್ಟು ಖರೀದಿ ಮಾಡುವ ಗ್ರಾಹಕರಿಗೆ ಏರ್ಪಡಿಸಿದ್ದ ಲಕ್ಕಿ ಕೂಪನ್ ಡ್ರಾ ಆ.15ರಂದು ನಡೆಯಿತು.

ಮೇನಾಲ ಮಧುರಾ ಇಂಟರ್‌ನ್ಯಾಶನಲ್ ಸ್ಕೂಲ್‌ನ ನಿರ್ದೇಶಕ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಡ್ರಾ ನೆರವೇರಿಸಿ ಡ್ರಾ ವಿಜೇತರಾದ ಮಹಮೂದ್ ಬೆಳ್ಳಿಚೆಡವು ಅವರಿಗೆ ಬಹುಮಾನವಾಗಿ ಗೋಲ್ಡ್ ಕಾಯಿನ್‌ನ್ನು ವಿತರಿಸಿದರು. ಹಿರಾ ಕಾಂಪ್ಲೆಕ್ಸ್ ಮಾಲಕ ಅಬ್ದುಲ್ ಖಾದರ್ ಹಾಜಿ, ನೆ.ಮುಡ್ನೂರು ಗ್ರಾ.ಪಂ ಸದಸ್ಯ ರಾಮ ಮೇನಾಲ ಉಪಸ್ಥಿತರಿದ್ದರು. ಡಿ ಫ್ಯಾಕ್ಟೋ ಮಳಿಗೆಯ ಮಾಲಕ ರಹ್ಮಾನ್ ಮೇನಾಲ ಹಾಗೂ ಸವಾದ್ ಯು.ಎಂ ಅವರು ಉದ್ಘಾಟನಾ ದಿನದಿಂದ ಇಂದಿನವರೆಗೂ ಉತ್ತಮ ಪ್ರೋತ್ಸಾಹಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.

LEAVE A REPLY

Please enter your comment!
Please enter your name here