ಪುತ್ತೂರು: ಒಳಮೊಗ್ರು ಗ್ರಾಮ ಪಂಚಾಯತ್‌ನ ಸದಸ್ಯರಾಗಿರುವ ಲತೀಫ್ ಟೈಲರ್‌ರವರ ಪತ್ನಿ ಶಾಹಿದ ಕೆ (38ವ)ರವರು ಅಲ್ಪಕಾಲದ ಅಸೌಖ್ಯದಿಂದಾಗಿ ಆ.17 ರಂದು ನಿಧನರಾದರು. ಮೃತರು ಪತಿ ಲತೀಫ್ ಟೈಲರ್, ಪುತ್ರ ತನ್ವೀರ್, ಪುತ್ರಿಯರಾದ ಫಾತಿಮತ್ ತಸ್ರೀಫಾ, ಫಾತಿಮತ್ ತಫ್ಸೀರಾ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಮನೆಗೆ ಹಲವು ಮಂದಿ ಗಣ್ಯರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.