ಪ್ರಾಥಮಿಕ ವಲಯ; ಬಾಲಕರ ವಿಭಾಗ ಕಾವು ಪ್ರಥಮ, ಪಾಪೆಮಜಲು ದ್ವಿತೀಯ,
ಬಾಲಕಿಯರ ವಿಭಾಗ: ಪಾಪೆಮಜಲು ಪ್ರಥಮ, ಕಾವು ದ್ವಿತೀಯ
ಪ್ರೌಢ ಶಾಲಾ ವಿಭಾಗ : ಬಾಲಕರ ವಿಭಾಗ: ಇರ್ದೆ ಉಪ್ಪಳಿಗೆ ಪ್ರಥಮ ದ್ವಿತೀಯ; ಷಣ್ಮುಖ ದೇವ ಪೆರ್ಲಂಪಾಡಿ
ಬಾಲಕಿಯರ ವಿಭಾಗ: ಪಾಪೆಮಜಲು ಪ್ರಥಮ , ಗಜಾನನ ಈಶ್ವರಮಂಗಲ ದ್ವಿತೀಯ
ಪುತ್ತೂರು; ದ ಕ ಜಿ ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾವು ಇಲ್ಲಿ ನಡೆದ ಪುತ್ತೂರು ಗ್ರಾಮಾಂತರ ವಲಯ ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಬಾಲಕ ಬಾಲಕಿಯರ ವಾಲಿಬಾಲ್ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ವಿಜೇತ ತಂಡಗಳ ವಿವರ
ಪ್ರಾಥಮಿಕ ವಿಭಾಗ:
ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ ಕಾವು ಸರಕಾರಿ ಉ.ಹಿ ಪ್ರಾ ಶಾಲೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು ಆಲ್‌ರೌಂಡರ್ ಪ್ರಶಶ್ತಿಯನ್ನು ಕಿಸನ್ ರವರು ಪಡೆದುಕೊಂಡರು, ದ್ವಿತೀಯ ಸ್ಥಾನವನ್ನು ಸ ಹಿ ಪ್ರಾ ಶಾಲೆ ಪಾಪೆಮಜಲು ಪಡೆದುಕೊಂಡಿದ್ದು ನಿಖಿತ್ ಆಲ್‌ರೌಂಡರ್ ಪ್ರಶಸ್ತಿ ಪಡೆದುಕೊಂಡರು.ಬಾಲಕಿಯರ ವಿಭಾಗದಲ್ಲಿ ಪಾಪಮೆಜಲು ಸರಕಾರಿ ಹಿ ಪ್ರಾ ಶಾಲೆ ಪ್ರಥಮ ಸ್ಥಾನವನ್ನು ಪಡೆದುಕೊಂಡು ಆಕಾಂಕ್ಷಾ ಆಲ್‌ಡೌಂಡರ್ ಪ್ರಶಸ್ತಿ ಪಡೆದುಕೊಂಡಿದ್ದು, ಕಾವು ಸರಕಾರಿ ಉ ಹಿಪ್ರಾ ಶಾಲೆ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು ಪುಣ್ಯಶ್ರೀ ಆಲ್‌ರೌಂಡರ್ ಪ್ರಶಸ್ತಿ ಪಡೆದುಕೊಂಡರು.
ಪ್ರೌಢಶಾಲಾ ವಿಭಾಗ
ಬಾಲಕ ವಿಭಾಗದಲ್ಲಿ ಸರಕಾರಿ ಪ್ರೌಢ ಶಾಲೆ ಉಪ್ಪಳಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡು ನಿತೇಶ್ ಆಲ್‌ರೌಂಡರ್ ಪ್ರಶಶ್ತಿ ಪಡೆದುಕೊಂಡರು, ಷಣ್ಮುಖದೇವ ಪ್ರೌಢ ಶಾಲೆ ಪೆರ್ಲಂಪಾಡಿ ದವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು ಮನ್ವಿತ್ ಆಲ್‌ರೌಂಡರ್ ಪ್ರಶಸ್ತಿ ಪಡೆದುಕೊಂಡರು.
ಬಾಲಕಿಯರ ವಿಭಾಗದಲ್ಲಿ ಪಾಪೆಮಜಲು ಸರಕಾರಿ ಪ್ರೌಢ ಶಾಲೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು ಭೀಷ್ಮ ಆಲ್‌ರೌಂಡರ್ ಪ್ರಶಸ್ತಿ ಪಡೆದುಕೊಂಡರು. ಗಜಾನನ ಪ್ರೌಢ ಶಾಲೆ ಈಶ್ವರಮಂಗಲ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದು ಸೌಜನ್ಯಾ ಆಲ್‌ರೌಂಡರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಎಲ್ಲಾ ವಿಜೇತ ತಂಡಗಳಿಗೆ ಮತ್ತು ವೈಯಕ್ತಿಕ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಕಾವು ಸರಕಾರಿ ಶಾಲೆಯನ್ನು ದತ್ತು ಪಡೆದ ಕಾವು ಹೇಮನಾಥ್ ಶೆಟ್ಟಿ ಯವರು ಬಹುಮಾನವನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಸೀತಾರಾಮ ಗೌಡ ಮಿತ್ತಡ್ಕ, ಸಂಘದ ಕೋಶಾಧಿಕಾರಿ ಸುಧೀರ್ ರೈ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಸುಧಾಕರ್ ರೈ ಗಿಳಿಯಾಲು, ಪುತ್ತೂರು ಗ್ರಾಮಾಂತರ ವಲಯ ನೋಡಲ್ ಅಧಿಕಾರಿ ಸುಜಿಲಾ,ಗ್ರಾಮ ಪಂಚಾಯತ್ ಸದಸ್ಯರಾದ ಅಬ್ದುಲ್ ರಹಿಮಾನ್ ಕಾವು, ಎಸ್ ಡಿ ಎಂ ಸಿ ಅಧ್ಯಕ್ಷ ಯತೀಶ್ ಪೂಜಾರಿ, ಪುತ್ತೂರು ಕಾವು ಲಯನ್ಸ್ ಕ್ಲಬ್ ಕಾರ್ಯದರ್ಶಿ ದೇವಣ್ಣ ರೈ ಮುದರ ಪಳ್ಳ,ಕಾವು ಶಾಲಾ ಪ್ರಭಾರ ಮುಖ್ಯೋಪಾದ್ಯಾಯಿನಿ ಸವಿತಾ, ದೈಹಿಕ ಶಿಕ್ಷಕಿ ವಸಂತಿ, ಹಿರಿಯ ಶಿಕ್ಷಕ ಭಾಸ್ಕರ ಗೌಡ ಮತ್ತು ಎಲ್ಲಾ ಶಿಕ್ಷಕರು ಉಪಸ್ಥಿತರಿದ್ದರು.