ಅರಿಯಡ್ಕ ಗ್ರಾ.ಪಂ ಜಮಾಬಂದಿ ಸಭೆ

0

ಅರಿಯಡ್ಕ: ಅರಿಯಡ್ಕ ಗ್ರಾಮ ಪಂಚಾಯತ್ 2022-2023 ನೇ ಸಾಲಿನ ಜಮಾಬಂದಿ ಆ.18 ರಂದು ಪಂಚಾಯತ್ ಅಧ್ಯಕ್ಷ ಸಂತೋಷ್ ಮಣಿಯಾಣಿ ಕುತ್ಯಾಡಿಯವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.


ಸಭೆಯಲ್ಲಿ ಗ್ರಾಮ ಪಂಚಾಯತ್ ಲೆಕ್ಕ ಪತ್ರಗಳ ದಾಖಲೆ ಮತ್ತು ಹಿಂದಿನ ವರ್ಷ ನಿರ್ವಹಿಸಿದ ಕಾಮಗಾರಿಗಳ ತಪಾಸಣೆ ನಡೆಸಲಾಯಿತು.ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕರಾದ ಹರಿಪ್ರಸಾದ್ ಎಂ, ಮಾರ್ಗದರ್ಶಿ ಅಧಿಕಾರಿಗಳಾಗಿ ಭಾಗವಹಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು.


ವೇದಿಕೆಯಲ್ಲಿ ಪಂಚಾಯತ್ ಉಪಾಧ್ಯಕ್ಷರಾದ ಮೀನಾಕ್ಷಿ ಪಾಪೆಮಜಲು,ಪಿ.ಡಿ.ಓ ಪದ್ಮಾ ಕುಮಾರಿ ಉಪಸ್ಥಿತರಿದ್ದರು.
ಸಭೆಯಲ್ಲಿ ಪಂಚಾಯತ್ ಸದಸ್ಯರಾದ ಸೌಮ್ಯಾ ಬಾಲಸುಬ್ರಹ್ಮಣ್ಯ,ಹರೀಶ್ ರೈ ಜಾರುತ್ತಾರು, ಜಯಂತಿ ಪಟ್ಟು ಮೂಲೆ,ಸಲ್ಮಾ ಕಾವು, ಪ್ರವೀಣ ಅಮ್ಚಿನಡ್ಕ, ರಾಜೇಶ್ ತ್ಯಾಗರಾಜೆ, ಸಾರ್ವಜನಿಕರು ಹಾಗೂ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.ಪಂಚಾಯತ್ ಕಾರ್ಯದರ್ಶಿ ಶಿವರಾಮ ಮೂಲ್ಯ ಸ್ವಾಗತಿಸಿ, ಸಿಬ್ಬಂದಿ ಪ್ರಭಾಕರ ವಂದಿಸಿದರು.

LEAVE A REPLY

Please enter your comment!
Please enter your name here