ಮಂಗಳೂರು ಉತ್ತರ ಇನ್ನರವೀಲ್ ಕ್ಲಬ್ ನಿಂದ ಆಟಿದ ಮದಿಪು ಕಾರ್ಯಕ್ರಮ

0

ಪುತ್ತೂರು:ಮಂಗಳೂರು ಉತ್ತರ ಇನ್ನರವೀಲ್ ಕ್ಲಬ್ ನಿಂದ ಆಟಿದ ಮದಿಪು ಕಾರ್ಯಕ್ರಮ ರೋಟರಿ ಬಾಲ ಭವನದಲ್ಲಿ ಆಯೋಜಿಸಲಾಗಿತ್ತು.ಆಟಿದ ಮದಿಪು ಕಾರ್ಯಕ್ರಮದ ಕುರಿತು ಮಾತನಾಡಿದ ಇನ್ನರ್ ವೀಲ್ ಅಧ್ಯಕ್ಷೆ ಗೀತಾ ರೈ ಆಟಿ ತಿಂಗಳಿನ ವಿಶೇಷತೆ, ಆಟಿ ತಿಂಗಳ ತಿನಿಸುಗಳ ಕುರಿತು ತಿಳಿಸಿದರು.ಕಾರ್ಯದರ್ಶಿ ಡಾ.ಭಾರತೀ ಪ್ರಕಾಶ್ ವರದಿ ವಾಚನ ಮಾಡಿ, ಕೋಶಾಧಿಕಾರಿ ಶೋಭಾ ಭಟ್ ಲೆಕ್ಕಾಚಾರ ಮಂಡಿಸಿದರು. ಪಿ.ಡಿ.ಸಿ.ಡಾ. ಮಾಲಿನಿ ಹೆಬ್ಬಾರ್, ಮಿತ್ರ ಪ್ರಭು, ಶಮೀಮ್ ಕುನಿಲ್ ಹಾಗೂ ಚಿತ್ರಾ ರಾವ್ ರವರು ಸದಸ್ಯರಿಗೆ ಕ್ಲಬ್ ನ ಮುಂದಿನ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಕ್ಲಬ್ ನ ಎಡಿಟರ್ ಶಿವಾನಿ ಬಾಳಿಗ ತಿಂಗಳ ಬುಲೆಟಿನ್ ಉದ್ಘಾಟನೆ ಮಾಡಿದರು. ಛಾಯಾ ಕಾಮತ್ ಪ್ರಾರ್ಥಿಸಿ, ಉಪಾಧಕ್ಷೆ ಸವಿತಾ ಶೆಟ್ಟಿ ವಂದಿಸಿದರು.

LEAVE A REPLY

Please enter your comment!
Please enter your name here