ವಿದ್ಯಾರಶ್ಮಿಯಲ್ಲಿ ಪೋಷಕರ ಸಭೆ

0

ಪುತ್ತೂರು: ಸವಣೂರಿನ ವಿದ್ಯಾರಶ್ಮಿ ವಿದ್ಯಾಲಯದಲ್ಲಿ 2023-24ನೆ ಸಾಲಿನ ಪೋಷಕರ ಸಭೆ ನಡೆಯಿತು. ಶಾಲಾ ಸಂಚಾಲಕ ಸವಣೂರು ಸೀತಾರಾಮ ರೈಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿ ಹಳ್ಳಿಯಲ್ಲಿ ಪಟ್ಟಣದ ಮಾದರಿಯ ಆಂಗ್ಲ ಶಿಕ್ಷಣವನ್ನು ನೀಡುವುದು ನನ್ನ ಉದ್ದೇಶ ಎಂದು ಹೇಳಿ ನಮ್ಮ ಶೈಕ್ಷಣಿಕ ವ್ಯವಸ್ಥೆಯಲ್ಲಿ ಯಾವುದೇ ತಿದ್ದುಪಡಿಗಳು ಬೇಕಾದಲ್ಲಿ ಅದನ್ನು ನಮಗೆ ತಿಳಿಯಪಡಿಸುವುದು ಪೋಷಕರಾದ ನಿಮ್ಮ ಜವಾಬ್ದಾರಿ ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಂಶುಪಾಲ ಸೀತಾರಾಮ ಕೇವಳ ಅವರು ಶಾಲೆಯಲ್ಲಿ ನೀಡುವ ಅಟಲ್ ಟಿಂಕರಿಂಗ್ ಲ್ಯಾಬ್ ಮತ್ತು ಎಂಬೈಬ್ ಎನಿಮೇಟೆಡ್ ಪಾಠಗಳ ವ್ಯವಸ್ಥೆಗಳ ಕುರಿತು ತಿಳಿಸಿದರು.


ಆಡಳಿತಾಧಿಕಾರಿ ಇಂಜಿನಿಯರ್ ಅಶ್ವಿನ್ ಎಲ್. ಶೆಟ್ಟಿ ಮತ್ತು ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾದ ಸುರೇಶ್ ರೈ ಸೂಡಿಮುಳ್ಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ರಸಾಯನಶಾಸ್ತ್ರ ಉಪನ್ಯಾಸಕಿ ಉಮಾವತಿ ಎಂ. ಸ್ವಾಗತ, ಉಪ ಪ್ರಾಂಶುಪಾಲೆ ಶಶಿಕಲಾ ಎಸ್. ಆಳ್ವ ವಂದನಾರ್ಪನೆ ಮತ್ತು ಶಿಕ್ಷಕಿ ಚೇತನಾ ಎಸ್. ನಿರೂಪಣೆಗಳಲ್ಲಿ ಸಹಕರಿಸಿದರು. 9ನೆ ತರಗತಿಯ ವೈಷ್ಣವಿ ಮತ್ತು ಬಳಗದವರು ಪ್ರಾರ್ಥನೆ ಮತ್ತು ಸಂವಿಧಾನ ಪೀಠಿಕೆಯ ವಾಚನಗಳನ್ನು ನಿರ್ವಹಿಸಿದರು.

LEAVE A REPLY

Please enter your comment!
Please enter your name here