ಪುತ್ತೂರು: ಮಾದಕ ದ್ರವ್ಯ ವ್ಯಸನ, ಪೋಸ್ಕೋ ಕಾಯಿದೆ ಮಾನವ ಕಳ್ಳ ಸಾಗಣೆ ಬಗ್ಗೆ ಮಾಹಿತಿ ಕಾರ್ಯಾಗಾರ ಪೆರ್ನೆ ವಿದ್ಯಾಲಯದಲ್ಲಿ ಕಾರ್ಯಕ್ರಮ ನಡೆಯಿತು .ಸಂಪನ್ಮೂಲ ವ್ಯಕ್ತಿಯಾಗಿ ಉಪ್ಪಿನಂಗಡಿ ಠಾಣಾ ಸಬ್ ಇನ್ಸ್ಪೆಕ್ಟರ್ ಓಮನಮ ಭಾಗವಹಿಸಿ ಸಮಾಜದ ಸ್ವಾಸ್ಥ್ಯ ಕಳೆಗುಂದಿರುವುದು ಕೆಲವೊಂದು ಬಾಹ್ಯಾ ಶಕ್ತಿಗಳಿಂದ ಹಾಗೂ ಬೆಳೆದು ಬರುವ ವಾತಾವರಣ ಪೂರಕವಾಗಿ ಪರಿಣಮಿಸುದರಿಂದ ಮಾನಸಿಕವಾಗಿ ದೈಹಿಕವಾಗಿ ಸಮತೋಲನ ಕಳಕೊಂಡಾಗ ಇಂತಹ ದುಶ್ಚಟಗಳಿಗೆ ಬಲಿಯಾಗುತ್ತಾರೆ ಎಂದು ವಿವರಣಾತ್ಮಕವಾಗಿ ಅನುಭವ ಹಂಚಿಕೊಂಡರು. ವಿದ್ಯಾಲಯದ ಪ್ರಾಂಶುಪಾಲ ಶೇಖರ್ ರೈ ಕೆ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ರೋಟರಿ ಬಂಟ್ವಾಳದ ಕಾರ್ಯದರ್ಶಿ ಸದಾಶಿವ ಬಾಳಿಗಾ , ರೊಟೇರಿಯನ್ ನಾರಾಯಣ ಹೆಗಡೆ ,ಪೊಲೀಸ್ ಇಲಾಖೆಯ ಸಿಬ್ಬಂದಿಗಳಾದ ಶಶಿ ಕಿರಣ್ ಹಾಗೂ ಕಾನ್ಸ್ಟೇಬಲ್ ವಾರಿಜ ಉಪಸ್ಥಿತರಿದ್ದರು. ಪ್ರೌಢ ಶಾಲೆ ವಿಭಾಗದ ಮುಖ್ಯ ಗುರು ಚಂದ್ರಹಾಸ ರೈ ಸ್ವಾಗತಿಸಿ, ವಿದ್ಯಾಲಯದ ಹಿಂದಿ ಉಪನ್ಯಾಸಕಿ ಇಂದಿರಾ ಕಾರ್ಯಕ್ರಮ ನಿರ್ವಹಿಸಿದರು. ರಾಜಕೀಯ ಶಾಸ್ತ್ರ ಉಪನ್ಯಾಸಕಿ ಶೈಲ ಎನ್ ಕಾರ್ಯಕ್ರಮಕ್ಕೆ ವಂದಿಸಿದರು