ಈಶ್ವರಮಂಗಲ: ವಲಯದ ಈಶ್ವರಮಂಗಲ ಘಟ ಸಮಿತಿಯ ತಿಂಗಳ ಸಭೆಯು ಅನುಗ್ರಹ ಹಾಲ್ ನಲ್ಲಿ ನಡೆಯಿತು. ಘಟ ಸಮಿತಿಯ ಅಧ್ಯಕ್ಷ ತಾರಾನಾಥ ನೂಜಿ ಬೈಲು ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸವಿತಾ ರೈ ಮಾತನಾಡಿ ಸಂಘದಲ್ಲಿ ಉತ್ತಮ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ನಾವು ಕ್ರಿಯಾಶೀಲರಾಗಲು ಸಾಧ್ಯವಾಗುತ್ತದೆ. ಈಶ್ವರ ಮಂಗಲ ತುಂಬಾ ಒಳ್ಳೆಯ ಘಟ ಸಮಿತಿ . ಈಶ್ವರಮಂಗಲದಲ್ಲಿ ಆಗಸ್ಟ್ 25 ರಂದು ಹತ್ತನೇ ವರ್ಷದ ವರಮಹಾಲಕ್ಷ್ಮಿ ಪೂಜೆಯ ಕಾರ್ಯಕ್ರಮಕ್ಕೆ ಪರಮ ಪೂಜ್ಯರಾದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಭಾಗವಹಿಸಲಿದ್ದು ತಮಗೆಲ್ಲರಿಗೂ ಆಶೀರ್ವಚನ ನೀಡಲಿದ್ದಾರೆ ಈ ಒಂದು ಪುಣ್ಯ ಕಾರ್ಯದಲ್ಲಿ ತಾವೆಲ್ಲರೂ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಕಳೆದ 10 ವರ್ಷಗಳಿಂದ ಗ್ರಾಮವಿಕಾಸ ಯೋಜನೆಯಲ್ಲಿ ಘಟ ಸಮಿತಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ನೆಟ್ಟಣಿಗೆ ಮೂಡ್ನೂರು ಗ್ರಾಮ ಪಂಚಾಯಿತಿನಲ್ಲಿ ಹಣ ಸಂಗ್ರಹಕರಾಗಿ 33 ವರ್ಷ ಸೇವೆ ಸಲ್ಲಿಸಿ ಕಳೆದ ಮೂರು ತಿಂಗಳಿಂದ ವೃತ್ತಿಪರ ಜೀವನಕ್ಕೆ ನಿವೃತ್ತಿ ಘೋಷಿಸಿದಮಲ್ಲೇಶ್ ಘಟ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಸಭೆಯಲ್ಲಿ ಪುತ್ತೂರು ತಾಲೂಕು ಮೇಲ್ವಿಚಾರಕಿ ಸವಿತಾ ರೈ ನೆಲ್ಲಿತಡ್ಕ. ಈಶ್ವರ ಮಂಗಲ ವಲಯ ಸಂಯೋಜಕಿ ಮಹಿತಾ ರೈ ನಡು ಬೈಲು ,ಸೇವಾ ದೀಕ್ಷಿತರಾದ ಭಾಗ್ಯಶ್ರೀ ಪುಲಿ ಮಾರಾಡ್ಕ. ಪದಾಧಿಕಾರಿಗಳಾ ಸುಮತಿ. ಶಾರದಾ ಮತ್ತು ಮಲ್ಲೇಶ ಕೆಮ್ಮತಡ್ಕ ಉಪಸ್ಥಿತರಿದ್ದರು.
ಚಂದ್ರಶೇಖರ ಸ್ವಾಗತಿಸಿ, ಸುಮತಿ ಕಾರ್ಯಕ್ರಮ ನಿರೂಪಿಸಿದರು.