ಸವಣೂರು : ಸರ್ವೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ನಡೆಯಲಿರುವ ಪ್ರಥಮ ವರ್ಷದ ಸಾರ್ವಜನಿಕ ಶ್ರೀಗಣೇಶೋತ್ಸವದ ಪೂರ್ವಭಾವಿಯಾಗಿ ವಿಗ್ರಹ ತಯಾರಿಗೆ ಮುಹೂರ್ತ ನೆರವೇರಿಸಲಾಯಿತು.
ಗಣೇಶ ಉತ್ಸವದ ಗಣಪತಿ ಪ್ರತಿಷ್ಠೆಯ ಪೂರ್ವಭಾವಿಯಾಗಿ ವಿಶ್ವಕರ್ಮ ಯೋಗೀಶ್ ಆಚಾರ್ಯ ರಿಂದ ಗಣಪತಿ ಪೀಠವನ್ನು ಸ್ವೀಕರಿಸಿ,ಗಣಪತಿ ಮೂರ್ತಿಯನ್ನು ತಯಾರಿಸುವ ಶಿಲ್ಪಿಗಳಾದ ಪರ್ಲಡ್ಕ ತಾರನಾಥ ಆಚಾರ್ಯ ಇವರ ನಿವಾಸದಲ್ಲಿ ಶಾಸ್ತ್ರೋಕ್ತವಾಗಿ ಗಣಪತಿ ಮೂರ್ತಿಗೆ ಮುಹೂರ್ತ ಮಾಡಲಾಯಿತು.
ಈ ಸಂದರ್ಭದಲ್ಲಿ ಗಣೇಶೋತ್ಸವ ಸಮಿತಿಯ ಗೌರವ ಸಂಚಾಲಕರಾದ ಆನಂದ ಪೂಜಾರಿ ಸರ್ವೆದೋಳಗುತ್ತು ,ಸಂಚಾಲಕರಾದ ಶಿವನಾಥ ರೈ ಮೇಗಿನ ಗುತ್ತು ,ಅಧ್ಯಕ್ಷರಾದ ವಿನಯ್ ಕುಮಾರ್ ರೈ ಸರ್ವೆ,ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಮಾಜಿ ಟ್ರಸ್ಟಿ ರಸಿಕ ರೈ ಮೇಗಿನ ಗುತ್ತು ಉಪಸ್ಥಿತರಿದ್ದರು. ಶ್ರೀ ಗಣೇಶೋತ್ಸವದ ಅಂಗವಾಗಿ ಸೆ.18ರಂದು ಗೌರಿ ಹಬ್ಬದಂದು ದೇವಸ್ಥಾನದಲ್ಲಿ ಸಂಜೆ ದುರ್ಗಾಪೂಜೆ ಅನ್ನ ಸಂತರ್ಪಣೆ ನಡೆಯಲಿದೆ.
ಸೆ.19 ರಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಪ್ರತಿಷ್ಠೆ ನಂತರ ಗಣ ಹೋಮ ಅನ್ನಸಂತರ್ಪಣೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಸಂಜೆ ಶೋಭಾ ಯಾತ್ರೆ ಹಾಗೂ ಸರ್ವೆ ಗೌರಿ ಹೊಳೆಯಲ್ಲಿ ಗಣಪತಿ ವಿಸರ್ಜನೆ ನಡೆಯಲಿದೆ