ಪುತ್ತೂರು; ಪಡುವನ್ನೂರು ಗ್ರಾಮದ ಸುಳ್ಯಪದವು ದೇವಸ್ಯ ಎಂಬಲ್ಲಿ ಕೇರಳವನ್ನು ಸಂಪರ್ಕಿಸುವ ಸೇತುವೆ ಸಿಥಿಲಗೊಂಡಿದ್ದು ಇಲ್ಲಿ ಹೊಸ ಸೇತುವೆಯನ್ನು ನಿರ್ಮಾಣ ಮಾಡುವಂತೆ ಆಗ್ರಹಿಸಿ ಸ್ಥಳೀಯ ಗ್ರಾಮಸ್ಥರು ಶಾಸಕರಾದ ಅಶೋಕ್ ರೈ ಯವರಿಗೆ ಮನವಿ ಮಾಡಿದರು.
ಜನಾರ್ಧನ ಪೂಜಾರಿಯವರು ಸಂಸದರಾಗಿದ್ದ ಸಂದರ್ಭದಲ್ಲಿ ನಿರ್ಮಾಣವಾಗಿದ್ದ ಈ ಸೇತುವೆ ಇದೀಗ ಸಂಪೂರ್ಣ ಶಿಥಿಲಗೊಂಡಿದೆ. ಈ ರಸ್ತೆಯ ಮೂಲಕ ದಿನವೊಂದಕ್ಕೆ ನೂರಾರು ವಾಹನಗಳು ಸಂಚರಿಸುತ್ತಿದ್ದು ಶಿಥಿಲಗೊಂಡ ಸೇತುವೆಯು ಅಪಾಯಕಾರಿಯಾಗಿದೆ. ಕೇರಳಕ್ಕೆ ತೆರಳುವ ವಾಹನಗಳು ಈ ರಸ್ತೆಯ ಮೂಲಕ ಹೆಚ್ಚಾಗಿ ಓಡಾಟವನ್ನು ನಡೆಸುತ್ತಿದ್ದು ಕರ್ನಾಟಕ ವ್ಯಾಪ್ತಿಗೆ ಸೇರಿದ ಈ ಸೇತುವೆಯನ್ನು ದುರಸ್ಥಿ ಅಥವಾ ಇಲ್ಲಿ ಹೊಸ ಸೇತುವೆಯನ್ನು ನಿರ್ಮಾಣ ಮಾಡುವಂತೆ ಗ್ರಾಮಸ್ಥರು ಶಾಸಕರನ್ನು ಮನವಿಯಲ್ಲಿ ಅಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ಗ್ರಾಪಂ ಸದಸ್ಯರುಗಳಾದ ರವಿರಾಜ್ ರೈ ಸಜಂಕಾಡಿ, ಬಡಗನ್ನೂರು ಗ್ರಾಪಂ ಮಾಜಿ ಅಧ್ಯಕ್ಷೆ ಶ್ರೀಮತಿ, ರಾಕೇಶ್ ರೈ ಕುದ್ಕಾಡಿ, ಕರೀಂ ಪಿಲಿಕ್ಕುಡೆ, ಅನ್ವರ್ ಪಾಲೆಕೊಚ್ಚಿ, ವಾಮನ ಮೂಲ್ಯ, ಅಬ್ದುಲ್ ಖಾದರ್ ಮಾಜಿ ಗ್ರಾಪಂ ಸದಸ್ಯ ಗುರುಪ್ರಸಾದ್, ಪ್ರಕಾಶ್ ರೈ ಕೊಯಿಲ, ಆಬಿದ್ ಬಡಗನ್ನೂರು ಮತ್ತಿತರರು ಉಪಸ್ತಿತರಿದ್ದರು.