ಪುಣಚ ಗ್ರಾ.ಪಂ ವತಿಯಿಂದ ಮಾಜಿ ಅಧ್ಯಕ್ಷ ಉಪಾಧ್ಯಕ್ಷರಿಗೆ ಅಭಿನಂದನೆ

0

ಪುಣಚ : ಪುಣಚ ಗ್ರಾಮ ಪಂಚಾಯತ್ ಹಿಂದಿನ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿದ ಮಾಜಿ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ಹಾಗೂ ಉಪಾಧ್ಯಕ್ಷೆ ಪ್ರತಿಭಾ ಜಗನ್ನಾಥ್ ರವರನ್ನು ಪುಣಚ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಕಾರ್ಯದರ್ಶಿ, ಹಾಗೂ ಸಿಬ್ಬಂದಿ ವರ್ಗದವರಿಂದ ಆ.22ರಂದು ಪುಣಚ ಗ್ರಾ.ಪಂ ಪಂಚಾಯತ್ ಸಭಾಂಗಣದಲ್ಲಿ ಗೌರವ ಪೂರ್ವಕವಾಗಿ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಗ್ರಾ.ಪಂ ನೂತನ ಅಧ್ಯಕ್ಷೆ ಬೇಬಿ ಪಟ್ಟಿಕಲ್ಲು ಉಪಾಧ್ಯಕ್ಷ ಮಹೇಶ್ ಶೆಟ್ಟಿ ಬೈಲುಗುತ್ತು, ಹಾಗೂ ಸದಸ್ಯರು ಮಾತನಾಡಿ ಶುಭ ಹಾರೈಸಿದರು. ಕಾರ್ಯಕ್ರಮ ನಿಯೋಜನೆಗೊಳಿಸಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ರವಿ, ಸಿಬ್ಬಂದಿಗಳಾದ ಪಾರ್ವತಿ, ಮಮತಾ, ಸತ್ಯಪ್ರಕಾಶ್, ಉಸ್ಮಾನ್, ರೇಷ್ಮಾ, ಅಭಿಷೇಕ್, ಮುರಳಿದರ, ಗ್ರಂಥ ಪಾಲಕಿ ಜಯಲಕ್ಷ್ಮಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here