ಉಪ್ಪಿನಂಗಡಿ: ಕೋಳಿ ಅಂಗಡಿಯಿಂದ ಕಳವು

0

ಉಪ್ಪಿನಂಗಡಿ: ಇಲ್ಲಿನ ಹೊಸ ಬಸ್ ನಿಲ್ದಾಣದ ಸಮೀಪ ಇರುವ ಕೋಳಿ ಮಾಂಸ ಮಾರಾಟ ಮಳಿಗೆಗಳಿಗೆ ಕಳ್ಳನೋರ್ವ ನುಗ್ಗಿ ನಗದು ಹಣವನ್ನು ಕದ್ದೊಯ್ದ ಘಟನೆ ಮಂಗಳವಾರ ರಾತ್ರಿ ಸಂಭವಿಸಿದೆ.


ಶೈಲೇಶ್ ಗಾಣಿಗ ಹಾಗೂ ನಿತೀನ್ ಸುವರ್ಣ ಎಂಬವರ ಕೋಳಿ ಮಾಂಸ ಮಾರಾಟ ಅಂಗಡಿಗೆ ನುಗ್ಗಿದ ತರುಣ ಕಳ್ಳನೋರ್ವ ಶೈಲೇಶ್ ಅಂಗಡಿಯೊಳಗಿದ್ದ 1000 ರೂ. ಹಾಗೂ ನಿತೀನ್ ಸುವರ್ಣರವರ ಅಂಗಡಿಯಿಂದ 10,000 ರೂ.ವನ್ನು ಎಗರಿಸಿದ್ದಾನೆ. ಈ ದೃಶ್ಯ ಸಿಸಿ ಕ್ಯಾಮರಾದ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಉಪ್ಪಿನಂಗಡಿ ಪೊಲೀಸರು ಸ್ಥಳಕ್ಕೆ ಧಾವಿಸಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here