ಪುತ್ತೂರು: ಇಲ್ಲಿನ ನೆಲ್ಲಿಕಟ್ಟೆ ಬರೆಕೆರೆ ಸಮುದಾಯ ಭವನ ಸಂಕೀರ್ಣದಲ್ಲಿ ಕಾರ್ಯಚರಿಸುತ್ತಿರುವ ಎಚ್ ಪಿ ಆರ್ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಆ್ಯಂಡ್ ಪ್ಯಾರಾಮೆಡಿಕಲ್ ಸೈನ್ಸ್ ಸಂಸ್ಥೆ ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ ಆ.23 ರಂದು ಪುತ್ತೂರು ಬಸ್ ನಿಲ್ದಾಣದ ಮುಂಭಾಗದಲ್ಲಿ ನಡೆಯಿತು.
ರಾಜ್ಯ ರಸ್ತೆ ಸಾರಿಗೆ ನಿಗಮ ಪುತ್ತೂರು ಘಟಕ ಇದರ ಮೇಲ್ವಿಚಾರಕ ಅಬ್ಬಾಸ್ ಕೆ ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ , ಹಾರೈಸಿದರು.
ಸಂಚಾರ ನಿರ್ವಾಹಕ ಶಾಂತಪ್ಪ ಪೂಜಾರಿ , ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಇವ್ನೀಸ್ ಆಗ್ನೇಸ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಸುಮಾರು 260 ಮಂದಿ ಬಿ.ಪಿ ,ಬ್ಲಡ್ ಗ್ರೂಪಿಂಗ್ ,ಶುಗರ್ ಟೆಸ್ಟ್ ಹಾಗೂ ತೂಕ ಪರಿಕ್ಷೆ ಮಾಡಿಕೊಳ್ಳೋ ಮೂಲಕ ಶಿಬಿರವೂ ಯಶಸ್ವಿಯಾಗಿ ನಡೆಯಿತು.