ಚಂದ್ರಯಾನ-3 ಯಶಸ್ವಿ:ಪುತ್ತೂರಿನ ಹಲವೆಡೆ ಹರ್ಷಾಚರಣೆ

0

ಪುತ್ತೂರು:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಮೂರನೇ ಚಂದ್ರಯಾನ-3ರ ವಿಕ್ರಮ್ ಲ್ಯಾಂಡರ್ ಆ.23ರಂದು ಸಂಜೆ ಸುಮಾರು 6.04ಕ್ಕೆ ಚಂದ್ರನ ಮೇಲ್ಮೈಯಲ್ಲಿ ಯಶಸ್ವಿಯಾಗಿ ಇಳಿಯುವ ಮೂಲಕ ಭಾರತ ಐತಿಹಾಸಿಕ ಸಾಧನೆ ಮಾಡಿದೆ.ಭಾರತೀಯ ಬಾಹ್ಯಾಕಾಶ ವಿಜ್ಞಾನದ ಮುನ್ನಡೆಯ ಪ್ರತೀಕ, ದೇಶದ ಹೆಮ್ಮೆಯ ಇಸ್ರೋದ ಚಂದ್ರಯಾನ ಸರಣಿಯ ಮೂರನೇ ಯಾನದ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವ ಮೇಲ್ಮೈನಲ್ಲಿ ಇಳಿದಿದೆ.ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸಿದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.


ಈ ಕೌತುಕದ ಕ್ಷಣವನ್ನು ಕಣ್ತುಂಬಿಕೊಳ್ಳುವುದಕ್ಕೆ ಭಾರತೀಯರು ಮಾತ್ರವಲ್ಲ ಇಡೀ ವಿಶ್ವವೇ ಬೆರಗುಗಣ್ಣಿನಿಂದ, ಕುತೂಹಲದಿಂದ ಎದುರು ನೋಡುತ್ತಿತ್ತು.ಎಲ್‌ವಿಎಂ ಮಾರ್ಕ್-3 ರಾಕೆಟ್ 2023ರ ಜುಲೈ 14ರಂದು ಉಡಾವಣೆಗೊಂಡಿತ್ತು.ಭೂಮಿಯಿಂದ 3.84 ಲಕ್ಷ ಕಿ.ಮೀ.ದೂರ ಇರುವ ಚಂದ್ರನ ಸಮೀಪಕ್ಕೆ ತೆರಳಲು ವಿಕ್ರಮ್ ಲ್ಯಾಂಡರ್ 45 ದಿನಗಳ ಪ್ರಯಾಣ ಮಾಡಿದೆ.ಲ್ಯಾಂಡರ್ ಮತ್ತು ರೋವರ್ ಚಂದ್ರನ ಒಂದು ದಿನದ (14 ಭೂಮಿಯ ದಿನಗಳು) ಮಿಷನ್ ಜೀವನವನ್ನು ಹೊಂದಿದ್ದು, ಈ ಸಮಯದಲ್ಲಿ ಅದು ಆನ್-ಸೈಟ್ ಪ್ರಯೋಗಗಳನ್ನು ನಡೆಸುತ್ತದೆ.


ಚಂದ್ರಯಾನ -3 ಯಶಸ್ಸು: ವಿವಿಧೆಡೆ ಹರ್ಷಾಚರಣೆ:
ಚಂದ್ರಯಾನ 3ರ ಯಶಸ್ಸನ್ನು ಪುತ್ತೂರಿನ ವಿವಿಧ ಕಡೆ ವಿವಿಧ ರೀತಿಯಲ್ಲಿ ಹರ್ಷಾಚರಣೆ ಮಾಡಿದರು. ಕೆಲವು ಕಡೆ ಸಿಹಿ ತಿಂಡಿ ಹಂಚಿದ್ದು, ಇನ್ನು ಕೆಲವು ಕಡೆ ಪಟಾಕಿ ಸಿಡಿಸಿ ಹರ್ಷಾಚರಣೆ ವ್ಯಕ್ತಪಡಿಸಿದ್ದಾರೆ.


ಪುತ್ತೂರು ಬಿಜೆಪಿ ಕಚೇರಿಯ ಮುಂದೆ ರಾಷ್ಟ್ರಧ್ವಜ ಹಿಡಿದು ಹರ್ಷ ವ್ಯಕ್ತಪಡಿಸಲಾಯಿತು.ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರಳೆ, ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿ ಯುವರಾಜ್ ಪೆರಿಯತ್ತೋಡಿ, ಪುಡಾ ಮಾಜಿ ಅಧ್ಯಕ್ಷ ಭಾಮಿ ಅಶೋಕ್ ಶೆಣೈ, ಗ್ರಾಮಾಂತರ ಮಂಡಲ ಉಪಾಧ್ಯಕ್ಷ ಹರಿಪ್ರಸಾದ್ ಯಾದವ್, ನಗರಸಭಾ ಸದಸ್ಯೆ ವಿದ್ಯಾಗೌರಿ, ಜಿಲ್ಲಾ ಸಮಿತಿ ಸದಸ್ಯರಾದ ಚಂದ್ರಶೇಖರ ರಾವ್ ಬಪ್ಪಳಿಗೆ, ನಗರ ಮಂಡಲ ಕಾರ್ಯದರ್ಶಿ ಶಿವಕುಮಾರ್, ಮಾಜಿ ಪುರಸಭಾ ಅಧ್ಯಕ್ಷ ರಾಜೇಶ್ ಬನ್ನೂರು, ಕೊಡಿಪ್ಪಾಡಿ ಶಕ್ತಿ ಕೇಂದ್ರ ಪ್ರಮುಖ್ ಅಭಿಜಿತ್ ಕೊಡಿಪ್ಪಾಡಿ, ಯುವಮೋರ್ಛಾ ನಗರ ಅಧ್ಯಕ್ಷ ಸಚಿನ್ ಶೆಣೈ, ಯುವಮೋರ್ಛಾ ಪ್ರಮುಖರಾದ ಕಿರಣ್ ಶಂಕರ್ ಮಲ್ಯ, ನಗರ ಎಸ್.ಟಿ ಮೋರ್ಛಾ ಅಧ್ಯಕ್ಷ ಅಶೋಕ್ ನಾಯ್ಕ್, ಯುವ ಮೋರ್ಛಾ ಪ್ರಮುಖ್ ಶಶಿಧರ್ ನಾಯಕ್, ಬಜರಂಗದಳ ಪ್ರಮುಖರಾದ ಶ್ರೀಧರ್ , ಜಗದೀಶ್, ಜೀವನ್, ಹರ್ಷಿತ್, ಕೇಶವ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು.


ಬೊಳುವಾರು ಆಂಜನೇಯ ವೃತ್ತದಲ್ಲಿ ಸಂಭ್ರಮಾಚರಣೆ: ಬೊಳುವಾರು ಆಂಜನೇಯ ವೃತ್ತದಲ್ಲಿ ದೇಶಭಕ್ತ ನಾಗರಿಕರು ಪಟಾಕಿ ಸಿಡಿಸಿ ಸಿಹಿ ಹಂಚಿ, ಸಂಭ್ರಮಿಸಿದರು.ನಗರಸಭಾ ಸದಸ್ಯ ಬಿಜೆಪಿ ನಗರ ಮಂಡಲ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ನಗರಸಭಾ ಸದಸ್ಯ ಸಂತೋಷ್ ಕುಮಾರ್ ಬೊಳುವಾರು, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಡಾ.ಕೃಷ್ಣಪ್ರಸನ್ನ, ನಗರಸಭೆ ಮಾಜಿ ಉಪಾಧ್ಯಕ್ಷ ವಿಶ್ವನಾಥ ಗೌಡ ಬನ್ನೂರು, ಬಜರಂಗದಳದ ಗೋ ರಕ್ಷಾ ಪ್ರಮುಖ್ ಚೇತನ್, ನವೀನ್, ನೀಲಂತ್ ಕುಮಾರ್, ಗಣೇಶ್ ಬಾಳಿಗ, ದಯಾಕರ್, ನವೀನ್ ಪಡಿವಾಳ್, ತಾರನಾಥ ಬನ್ನೂರು, ಕರುಣಾಕರ್, ಸುಮೇಶ್, ಶರತ್, ಯಾದವ್, ರಮೇಶ್, ಗಣೇಶ್,ಸಂಪತ್, ರಾಧಾಕೃಷ್ಣ, ಸುಧಾಮ ಮೊದಲಾದವರು ಉಪಸ್ಥಿತರಿದ್ದರು.
ಬಸ್‌ನಿಲ್ದಾಣದ ಬಳಿ ಹರ್ಷಾಚರಣೆ: ಪುತ್ತೂರು ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿಯಲ್ಲಿ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಪರಿವಾರ ಸಂಘಟನೆಗಳು ಪಟಾಕಿ ಸಿಡಿಸಿ ಹರ್ಷ ವ್ಯಕ್ತಪಡಿಸಿದರು.ಹಿಂದು ಜಾಗರಣ ವೇದಿಕೆ ನಗರ ಸಂಚಾಲಕ ದಿನೇಶ್ ಪಂಜಿಗ ಸಹಿತ ಹಲವಾರು ಮಂದಿ ಪ್ರಮುಖರು ಉಪಸ್ಥಿತರಿದ್ದರು.ಬನ್ನೂರು ಅಯೋಧ್ಯಾನಗರ ಶ್ರೀ ಶಿವಪಾರ್ವತಿ ಮಂದಿರ ಬಳಿಯೂ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು.


ಕುಂಬ್ರದಲ್ಲಿ ಹರ್ಷಾಚರಣೆ: ಭಾರತದ ಇಸ್ರೋ ವಿಜ್ಞಾನ ಸಂಸ್ಥೆಯು ನಡೆಸಿದ ಚಂದ್ರಯಾನ 3 ಯಶಸ್ವಿಯಾದ ಹಿನ್ನೆಲೆಯಲ್ಲಿ ಕುಂಬ್ರದಲ್ಲಿ ಬಿಜೆಪಿ ವತಿಯಿಂದ ಪಟಾಕಿ ಸಿಡಿಸಿ , ಭಾರತ ಮಾತೆಗೆ , ದೇಶದ ಪ್ರಧಾನಿ ನರೇಂದ್ರ ಮೋದಿ ಯವರಿಗೆ ಮತ್ತು ಇಸ್ರೋ ವಿಜ್ಞಾನಿಗಳಿಗೆ ಜೈಕಾರ ಹಾಕಿ ಹರ್ಷಾಚರಿಸಲಾಯಿತ್ತು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ , ಜಿಲ್ಲಾ ಎಸ್.ಟಿ ಮೋರ್ಛ ಪ್ರ.ಕಾ ಹರೀಶ್ ಬಿಜತ್ರೆ , ಪುತ್ತೂರು ಗ್ರಾ.ಮಂ.ಪ್ರ.ಕಾರ್ಯದರ್ಶಿ ನಿತೀಶ್ ಕುಮಾರ್ ಶಾಂತಿವನ , ಪುತ್ತೂರು ಬಿಜೆಪಿ ಯುವ ಮೋರ್ಛ ಪ್ರ.ಕಾ ರತನ್ ರೈ , ಒಳಮೊಗ್ರು ಶಕ್ತಿಕೇಂದ್ರ ಸಂಚಾಲಕ ರಾಜೇಶ್ ರೈ ಪರ್ಪುಂಜ , ಕೆದಂಬಾಡಿ ಶಕ್ತಿಕೇಂದ್ರ ಸಂಚಾಲಕ ನಾರಾಯಣ ಪೂಜಾರಿ ಕುರಿಕ್ಕಾರ , ಗ್ರಾ.ಪಂ. ಸದಸ್ಯ ಮಹೇಶ್ ರೈ ಕೇರಿ ಪ್ರಮುಖರಾದ ರಾಧಾಕೃಷ್ಣ ಶೆಟ್ಟಿ ಕಲ್ಲಡ್ಕ , ಪುರಂದರ ಶೆಟ್ಟಿ ಮುಡಾಲ , ಶಿವರಾಮ ಗೌಡ ಬೊಳ್ಳಾಡಿ , ಪ್ರವೀಣ್ ಪಲ್ಲತ್ತಾರು , ಮಾಧವ ರೈ ಕುಂಬ್ರ , ಶ್ರೀನಿವಾಸ ನಾಯ್ಕ ಮುಡಾಲ , ಜಯರಾಮ ಆಚಾರ್ಯ , ರಿತೇಶ್ ರೈ ಕುಂಬ್ರ , ಪ್ರದೀಪ್ ಮಜ್ಜಾರಡ್ಕ , ಆನಂದ ರೈ ಡಿಂಬ್ರಿ , ಮೋಹನ್ ಮಾಡಾವು , ಅನಿಲ್ ಸೇರ್ತಾಜೆ , ಸಂತೋಷ್ ರೈ ಕುಂಬ್ರ , ಚಿರಾಗ್ ರೈ ಮುಂಡಾಳ , ಮೇಘರಾಜ್ ಮುಡಾಲ , ಅಶೋಕ ಕುಮಾರ್ ಬಡಕ್ಕೋಡಿ , ಗಂಗಾಧರ ಶಾಂತಿವನ , ಜಯ ಮೇಸ್ತ್ರಿ , ರಾಘವೇಂದ್ರ ಭಟ್ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here