ಪುತ್ತೂರು: ರೋಟರಿ ಕ್ಲಬ್ ಪುತ್ತೂರು , ರೋಟರ್ಯಾಕ್ಟ್ ಕ್ಲಬ್ ಹಾಗೂ ಬೊಳುವಾರು ಪ್ರಗತಿ ಪಾರಾ ಮೆಡಿಕಲ್ ಕಾಲೇಜು ಇವುಗಳ ಸಹಯೋಗದಲ್ಲಿ , ಇಲ್ಲಿನ ಮಂಜಲ್ಪಡ್ಪು ಬಿ .ಇ . ಎಂ ಅನುದಾನಿತ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ರಕ್ತ ವರ್ಗೀಕರಣ ಶಿಬಿರವನ್ನು ಆಯೋಜನೆ ಮಾಡಲಾಯಿತು.
ರೋಟರಿ ಕ್ಲಬ್ ಅಧ್ಯಕ್ಷ ರೋ. ಜೈರಾಜ್ ಭಂಡಾರಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ,ಹಾರೈಸಿದರು.ಪ್ರಗತಿ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಪ್ರೀತಾ ಹೆಗ್ಡೆ, ಎಸ್.ಡಿ.ಎಂ.ಸಿ. ಅಧ್ಯಕ್ಷ ಪ್ರಶಾಂತ್ ಮುರ ಹಾಗೂ ಶಾಲಾ ಮುಖ್ಯ ಗುರು ಶಿವಾನಂದ ವೇದಿಕೆಯಲ್ಲಿ ಹಾಜರಿದ್ದರು. ಆ ಬಳಿಕ ಮಕ್ಕಳ ರಕ್ತ ವರ್ಗೀಕರಣ ಕಾರ್ಯ ನೆರವೇರಿತು.
ಉಪನ್ಯಾಸಕಿಯಾರಾದ ರೇಷ್ಮಾ, ದೀಕ್ಷಾ , ರೋಟರಾಕ್ಟ್ ಕ್ಲಬ್ ಹಾಗೂ ಪ್ರಗತಿ ಪಾರಾ ಮೆಡಿಕಲ್ ಕಾಲೇಜು ಅಧ್ಯಕ್ಷೆ ಧರಿತ್ರಿ ಹಾಗೂ ಪದಾಧಿಕಾರಿಗಳು ಮತ್ತು ಶಿಕ್ಷಕರು ಸಹಕಾರ ನೀಡಿದರು.