ಕಡಬ: ನೂಜಿಬಾಳ್ತಿಲ ಗ್ರಾ.ಪಂ ವ್ಯಾಪ್ತಿಯ ಹಸಿ ಮೀನು ಮಾರುಕಟ್ಟೆ ದಾಖಲೆ ಮೊತ್ತಕ್ಕೆ ಏಲಂ..!

0

ಕಡಬ: ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಸಿ ಮೀನು ವರಿ ವಸೂಲಿ ಹಕ್ಕಿನ ಏಲಂ ಪ್ರಕ್ರಿಯೆ ಆ. 24ರಂದು ನಡೆದಿದ್ದು ದಾಖಲೆ ಮೊತ್ತಕ್ಕೆ ಏಲಂ ಆಗಿದೆ.

ಕಳೆದ ವರ್ಷ ಮೊಹಮ್ಮದ್ ಷರೀಫ್ ಎಂಬವರು ಗ್ರಾಮ ಪಂಚಾಯತ್ ವ್ಯಾಪ್ತಿಯ ಹಸಿ ಮೀನು ಮಾರಾಟದ ಹಕ್ಕನ್ನು ರೂ 1.12 ಲಕ್ಷಕ್ಕೆ ಖರೀದಿಸಿದ್ದರು. ಈ ಬಾರಿ ಏಲಂ ಹಕ್ಕು ಪಡೆಯಲು ಭಾರೀ ಪೈಪೋಟಿ ನಡೆದು ಕೊನೆಗೆ  ಹರಿಶ್ಚಂದ್ರ ಕನ್ವಾರೆ ಎಂಬವರು ಬರೋಬ್ಬರಿ 2.86 ಲಕ್ಷ ಬಿಡ್ ಕರೆದು ಏಲಂ ಹಕ್ಕನ್ನು ಪಡೆದಿದ್ದಾರೆ.

ಗ್ರಾಮಾಂತರ ಪ್ರದೇಶವಾಗಿರುವ ನೂಜಿಬಾಳ್ತಿಲ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಹಸಿ ಮೀನು ಮಾರಾಟದ ಹಕ್ಕು ಭಾರೀ ಮೊತ್ತಕ್ಕೆ ಏಲಂ ಆಗಿರುವುದು ಎಲ್ಲರನ್ನೂ ಆಶ್ಚರ್ಯಗೊಳಿಸಿದೆ.

LEAVE A REPLY

Please enter your comment!
Please enter your name here