ವಾಲಿಬಾಲ್ – ಸುದಾನ ವಸತಿ ಶಾಲೆಯ ಪ್ರಾಥಮಿಕ ಬಾಲಕರ ವಿಭಾಗ ಮಟ್ಟಕ್ಕೆ

0

ಪುತ್ತೂರು: ಕಬಕದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಪ್ರಾಥಮಿಕ ವಿಭಾಗದ ಪುತ್ತೂರು ನಗರ ವಲಯ ಮಟ್ಟದ ವಾಲಿಬಾಲ್ ಸ್ಪರ್ಧೆಯಲ್ಲಿ, ಪುತ್ತೂರಿನ ಸುದಾನದ ವಸತಿ ಶಾಲೆಯ ಪ್ರಾಥಮಿಕ ಬಾಲಕರ ವಿಭಾಗದ ವಿದ್ಯಾರ್ಥಿಗಳ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಮುಂದೆ ತಾಲೂಕು ಮಟ್ಟದಲ್ಲಿ ನಡೆಯಲಿರುವ ಸ್ಪರ್ಧೆಗೆ ಆಯ್ಕೆಯಾಗಿರುವ ತಂಡದಲ್ಲಿ ಅಝಮಲ್ (7ನೇ), ಇಬ್ರಾಹಿಂ ಫಾಶಿಲ್ (7ನೇ), ಸಮ್ಹಿ (7ನೇ), ಸ್ನೇಹಾನಂದನ್ (7ನೇ), ಅಯನ್ (6ನೇ), ಸಂಭ್ರಮ್ (6ನೇ), ಸೃಜನ್ (6ನೇ), ಸೋಹನ್ (6ನೇ), ಜಸ್ಮಿತ್ (6ನೇ), ಫಹಾದ್ (6ನೇ), ಆರ್‍ಯಮನ್ ಈಡಿಗ (7ನೇ), ಮತ್ತು ಶಮಿಲ್ (6ನೇ) ಇದ್ದು ಶಾಲಾ ಸಂಚಾಲಕರಾದ ರೆ. ವಿಜಯ ಹಾರ್ವಿನ್ ಮತ್ತು ಮುಖ್ಯಶಿಕ್ಷಕಿ ಶೋಭಾ ನಾಗರಾಜ್ ರವರು ಶುಭ ಹಾರೈಸಿದ್ದಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಕರು ತರಬೇತಿಯನ್ನು ನೀಡಿದ್ದರು.

LEAVE A REPLY

Please enter your comment!
Please enter your name here