2.21 ಲಕ್ಷ ರೂ.,ನಿವ್ವಳ ಲಾಭ; ಶೇ.9 ಡಿವಿಡೆಂಡ್, ಲೀ.ಹಾಲಿಗೆ 73 ಪೈಸೆ ಬೋನಸ್ ಘೋಷಣೆ
ನೆಲ್ಯಾಡಿ: ಗೋಳಿತ್ತೊಟ್ಟು ಗ್ರಾಮದ ಶಾಂತಿನಗರ ಹಾಲು ಉತ್ಪಾದಕರ ಸಹಕಾರ ಸಂಘದ 2022-23ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಆ.24ರಂದು ಬೆಳಿಗ್ಗೆ ಸಂಘದ ವಠಾರದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪ್ರತಾಪಚಂದ್ರ ರೈ ಕುದ್ಮಾರುಗುತ್ತುರವರು ಮಾತನಾಡಿ, ಎರಡೂವರೇ ವರ್ಷದ ಹಿಂದೆ 183 ಲೀ.ಹಾಲು ಸಂಗ್ರಹಣೆಯೊAದಿಗೆ ಆರಂಭಗೊAಡ ಸಂಘದಲ್ಲಿ ಪ್ರತಿದಿನ 450 ಲೀ.ತನಕ ಹಾಲು ಸಂಗ್ರಹಣೆಯಾಗುತಿತ್ತು. ಪ್ರಸ್ತುತ 310 ಲೀ.ಹಾಲು ಸಂಗ್ರಹಣೆಯಾಗುತ್ತಿದೆ. ವರದಿ ವರ್ಷದಲ್ಲಿ 1,34,580.80 ಲೀ.ಹಾಲು ಖರೀದಿಸಿ 6,058.5 ಲೀ.ಹಾಲು ಸ್ಥಳೀಯವಾಗಿ ಮಾರಾಟ ಆಗಿದ್ದು 1,32,464 ಲೀ.ಹಾಲು ಒಕ್ಕೂಟಕ್ಕೆ ಕಳುಹಿಸಲಾಗಿದೆ. 1,180 ಚೀಲ ಪಶು ಆಹಾರ ಖರೀದಿಸಿ ಸದಸ್ಯರಿಗೆ ಮಾರಾಟ ಮಾಡಲಾಗಿದೆ. ಸಂಘವು ಒಟ್ಟು 2,21,341.40 ರೂ.,ನಿವ್ವಳ ಲಾಭಗಳಿಸಿದ್ದು ಲಾಭಾಂಶವನ್ನು ನಿಯಮಾನುಸಾರ ವಿಂಗಡನೆ ಮಾಡಲಾಗಿದ್ದು ಪ್ರತಿ ಲೀ.ಹಾಲಿಗೆ 73 ಪೈಸೆಯಂತೆ ಬೋನಸ್ ಹಾಗೂ ಶೇ.9 ರಷ್ಟು ಡಿವಿಡೆಂಡ್ ನೀಡಲಾಗುವುದು. ಮುಂದಿನ ದಿನಗಳಲ್ಲಿ ಸಂಘವು ಇನ್ನಷ್ಟೂ ಲಾಭಗಳಿಸಲು ಸದಸ್ಯರು ಸಹಕಾರ ನೀಡಬೇಕೆಂದು ಹೇಳಿದರು.
ದ.ಕ.ಹಾಲು ಒಕ್ಕೂಟ ಮಂಗಳೂರು ಇದರ ವಿಸ್ತರಣಾಧಿಕಾರಿ ಮಾಲತಿ ಪಿ.,ಅವರು, ಪಶುಆಹಾರ ಬಳಕೆ, ಸಂಘದಿಂದ ಹೈನುಗಾರರಿಗೆ ಸಿಗುವ ಸವಲತ್ತುಗಳ ಕುರಿತು ಮಾಹಿತಿ ನೀಡಿ, ಒಕ್ಕೂಟದಿಂದ ಸಿಗುವ ಸವಲತ್ತುಗಳನ್ನು ಹೈನುಗಾರರು ಪಡೆದುಕೊಳ್ಳುವಂತೆ ಹೇಳಿದರು. ಪಶುವೈದ್ಯಾಧಿಕಾರಿ ಡಾ.ಜಿತೇಂದ್ರ ಪ್ರಸಾದ್ ಅವರು ಪಶುಗಳಿಗೆ ಬರುವ ರೋಗ, ಅದರ ನಿಯಂತ್ರಣದ ಕುರಿತಂತೆ ಮಾಹಿತಿ ನೀಡಿದರು.
ಸಂಘದ ಉಪಾಧ್ಯಕ್ಷ ಜನಾರ್ದನ ಗೌಡ ಬರಮೇಲು, ನಿರ್ದೇಶಕರಾದ ವೇದಕುಮಾರ್ ಪುಳಾರ, ಬಾಲಕೃಷ್ಣ ಗೌಡ ಆರಕರೆ, ದೇಜಪ್ಪ ಗೌಡ ಬಾಂಕೋಡಿ, ಗುಮ್ಮಣ್ಣ ಗೌಡ ಡೆಂಬಳೆ,ಸೂರಪ್ಪ ಗೌಡ ಅನಾಲು, ಪುರುಷೋತ್ತಮ ಗುರುಂಪು, ಸದಾನಂದ ಪೂಜಾರಿ ಮುರಿಯೇಲು, ವಾಮನ ನಾಯ್ಕ ನೂಜೋಲು, ಚೋಮಯ್ಯ ಶಾಂತಿನಗರ, ನಂದಿನಿನಾರಾಯಣ ಪೂಜಾರಿ ಡೆಂಬಳೆ, ಸೀತಮ್ಮ ಶಾಂತಿನಗರ ವೇದಿಕೆಯಲ್ಲಿ ಉಪಸ್ಥಿತಿದ್ದರು. ಕಾರ್ಯದರ್ಶಿ ರಜತ್ ಕುಮಾರ್ ಶಾಂತಿನಗರ ಸ್ವಾಗತಿಸಿ ವರದಿ ಮಂಡಿಸಿದರು. ಸಂಘದ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಸಾಮಾನ್ಯ ಸಭೆಗೂ ಮೊದಲು ಸಂಘದ ನೂತನ ಕಟ್ಟಡದ ಉದ್ಘಾಟನೆ ನಡೆಯಿತು.