ಪುಣಚ: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ದ ಚಂದ್ರಯಾನ-3 ವಿಕ್ರಂ ಲ್ಯಾಂಡರ್ ಯಶಸ್ವಿಯಾದ ಹಿನ್ನೆಲೆಯಲ್ಲಿ ಆ.22 ರಂದು ಪುಣಚ ಪರಿಯಾಲ್ತಡ್ಕದಲ್ಲಿ ಹರ್ಷಾಚರಣೆ ನಡೆಯಿತು.
ಪುಣಚ ಗ್ರಾ. ಪಂ. ಮಾಜಿ ಅಧ್ಯಕ್ಷ ರಾಮಕೃಷ್ಣ ಬಳಂತಿಮೊಗರು ಮಾತನಾಡಿ, ಇಸ್ರೋ ಸಂಸ್ಥೆಯ ವಿಜ್ಞಾನಿಗಳ ಹಲವಾರು ವರ್ಷಗಳ ಅವಿರತ ಶ್ರಮ ಇಂದು ಐತಿಹಾಸಿಕ ಸಾಧನೆ ಮಾಡಿದೆ. ಜಗತ್ತಿನ ಪ್ರತಿಯೊಂದು ದೇಶವು ಭಾರತವನ್ನು ನೋಡುವ ಮತ್ತು ಭಾರತದ ಪ್ರತಿಯೊಬ್ಬರು ಹೆಮ್ಮೆ ಪಡೆಯುವುದರ ಮೂಲಕ ಭಾರತ ಮತ್ತೊಮ್ಮೆ ವಿಶ್ವಗುರು ಎಂಬುದನ್ನು ಸಾಬೀತು ಪಡೆದುಕೊಂಡಿರುವುದು ಸಂತಸದ ವಿಷಯವಾಗಿದೆ ಎಂದರು.
ಪುಣಚ ಗ್ರಾ. ಪಂ.ಅಧ್ಯಕ್ಷೆ, ಉಪಾಧ್ಯಕ್ಷ, ಸದಸ್ಯರು, ಸೊಸೈಟಿ ನಿರ್ದೇಶಕರು, ವಿವಿಧ ಕ್ಷೇತ್ರದ ಮುಖಂಡರು, ಊರಿನ ಗಣ್ಯರು, ಮಹಿಳೆಯರು, ಮಕ್ಕಳು ಭಾಗವಹಿಸಿದರು.
ಪುಣಚ ಮಹಿಷಮರ್ದಿನಿ ಸಿಂಗಾರಿ ಮೇಳ ತಂಡದ ಸದಸ್ಯರ ಚೆಂಡವಾದನ ಮೆರವಣಿಗೆಗೆ ಶೋಭೆ ನೀಡಿತ್ತು. ವಿವೇಕಾನಂದ ತಾಂತ್ರಿಕ ವಿದ್ಯಾಸಂಸ್ಥೆಯ ಪ್ರಾಧ್ಯಾಪಕ ಅಜಯ್ ಶಾಸ್ತ್ರಿ ಧನ್ಯವಾದ ಸಮರ್ಪಿಸಿದರು.