ಕಾಣಿಯೂರು ಕಣ್ವರ್ಷಿ ಮಹಿಳಾ ಮಂಡಲದಿಂದ ಶ್ರೀ ವರಮಹಾಲಕ್ಷ್ಮೀ ಪೂಜೆ

0

ಕಾಣಿಯೂರು: ಕಾಣಿಯೂರು ಕಣ್ವರ್ಷಿ ಮಹಿಳಾ ಮಂಡಲದ ವತಿಯಿಂದ 7ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಕಾಣಿಯೂರು ಶ್ರೀ ಲಕ್ಷ್ಮೀ
ನರಸಿಂಹ ಭಜನಾ ಮಂದಿರದಲ್ಲಿ ಆ 25ರಂದು ನಡೆಯಿತು.

ಅರ್ಚಕ ಚಿದಾನಂದ ಉಪಾಧ್ಯಾಯ ಕಲ್ಪಡ ಪೂಜಾ ವಿಧಿ, ವಿಧಾನ ನೆರವೇರಿಸಿದರು. ಬೆಳಿಗ್ಗೆ ಪೂಜೆ ಪ್ರಾರಂಭಗೊಂಡು, ಮಧ್ಯಾಹ್ನ ಮಹಾಪೂಜೆ , ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಕಾಣಿಯೂರು ಕಣ್ವರ್ಷಿ ಮಹಿಳಾ ಮಂಡಲದ ಅಧ್ಯಕ್ಷೆ ಮಮತಾ ಲೋಕೇಶ್ ಅಗಳಿ, ಗೌರವಾಧ್ಯಕ್ಷೆ ರೋಹಿಣಿ ಅಬೀರ, ಕಾರ್ಯದರ್ಶಿ ನಾಗವೇಣಿ ಬೆದ್ರಾಜೆ ಹಾಗೂ ಪದಾಧಿಕಾರಿಗಳು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here