ಇರ್ದೆ ದೇವಾಲಯದಲ್ಲಿ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ, ಧಾರ್ಮಿಕ ಪ್ರವಚನ

0

ನಿಡ್ಪಳ್ಳಿ: ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ವೃತ ಪೂಜಾ ಸಮಿತಿ ಮತ್ತು ಶ್ರೀ ವಿಷ್ಣು ಮೂರ್ತಿ ದೇವಾಲಯ ಗೋಪಾಲ ಕ್ಷೇತ್ರ ಇರ್ದೆ ಇದರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪ್ರಗತಿಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟ ದೂಮಡ್ಕ, ಪೇರಲ್ತಡ್ಕ, ಗುಮ್ಮಟೆಗದ್ದೆ, ಉಪ್ಪಳಿಗೆ, ಅಜ್ಜಿಕಲ್ಲು, ಅಜಲಡ್ಕ ಇವುಗಳ ಸಹಕಾರದೊಂದಿಗೆ ವೇದಮೂರ್ತಿ ಕಕ್ಕೂರು ಶ್ರೀ ರಾಧಾಕೃಷ್ಣ ಭಟ್ ಇವರ ನೇತೃತ್ವದಲ್ಲಿ 15ನೇ ವರ್ಷದ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ ಹಾಗೂ ಧಾರ್ಮಿಕ ಪ್ರವಚನ ಕಾರ್ಯಕ್ರಮ ಅ.25 ರಂದು ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯದಲ್ಲಿ ನಡೆಯಿತು.

ಬೆಳಿಗ್ಗೆ ಶ್ರೀಕೃಷ್ಣ ಮಹಿಳಾ ಭಜನಾ ತಂಡ ಗುಮ್ಮಟೆಗದ್ದೆ, ಶ್ರೀ ವಿಷ್ಣು ಮಹಿಳಾ ಭಜನಾ ತಂಡ ದೂಮಡ್ಕ, ಸಿದ್ದಿಧಾತ್ರಿ ಮಹಿಳಾ ಭಜನಾ ತಂಡ ಉಪ್ಪಳಿಗೆ ಇವರಿಂದ ಭಜನಾ ಸಂಕೀರ್ತನೆ ನಡೆಯಿತು. ನಂತರ ಶ್ರೀ ವರಮಹಾಲಕ್ಷ್ಮೀ ವೃತ ಪೂಜೆ ಪ್ರಾರಂಭವಾಗಿ ಮಧ್ಯಾಹ್ನ ಮಹಾಪೂಜೆ ನಡೆಯಿತು. ಪೂಜಾ ವಿದಿವಿಧಾನಗಳನ್ನು ನಡೆಸಿದ ಪುರೋಹಿತರಾದ ಲಕ್ಷ್ಮಿನಾರಾಯಣ ಭಟ್ ಕಕ್ಕೂರು ಇವರಿಂದ ಧಾರ್ಮಿಕ ಪ್ರವಚನ ನಡೆಯಿತು. ನಂತರ ಪೂಜಾ ಸಮಿತಿಯ ಕಾರ್ಯದರ್ಶಿ ಚೇತನಾ ಸತೀಶ್ ಅಜ್ಜಿಕಲ್ಲು ಕಳೆದ ವರ್ಷದ ಲೆಕ್ಕ ಪತ್ರ ಮಂಡಿಸಿದರು. ಯೋಜನೆಯ ಬೆಟ್ಟಂಪಾಡಿ ವಲಯ ಮೆಲ್ವೀಚಾರಕ ಚಂದ್ರಶೇಖರ ಕಾರ್ಯಕ್ರಮ ನಿರೂಪಿಸಿದರು. 

ನಂತರ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಿತು. ಪೂಜಾ ಸಮಿತಿಯ ಪದಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪ್ರಗತಿಬಂಧು ಸ್ವಸಹಾಯ ಸಂಘಗಳ 6 ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು, ಸೇವಾ ಪ್ರತಿನಿಧಿಗಳು ಸಹಕರಿಸಿದರು. ಊರ ಪರವೂರ ಭಕ್ತಾದಿಗಳು ಪಾಲ್ಗೊಂಡರು.ಸರಕಾರದ ಆದೇಶದಂತೆ ಧಾರ್ಮಿಕ ದತ್ತಿ ಇಲಾಖೆಯಿಂದ ನೀಡಿದ ಬಳೆ, ಕುಂಕುಮ ಮತ್ತು ನೂಲು ಇವುಗಳನ್ನು ಭಕ್ತಾದಿಗಳಿಗೆ ವಿತರಿಸಲಾಯಿತು.

LEAVE A REPLY

Please enter your comment!
Please enter your name here