ಕೊಯಿಲ: ಆತೂರು ಶ್ರೀ ಸದಾಶಿವ ಸಭಾಭವನದಲ್ಲಿ ಕಾರ್ಯಕ್ರಮಗಳ ಶುಭಾರಂಭ, ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ , ಧಾರ್ಮಿಕ ಸಭೆ

0

ಕಡಬ: ನಮ್ಮ ಹಿರಿಯರು ಧರ್ಮಾಧರಿತ ಜೀವನ ಪದ್ದತಿಯನ್ನು ಅಳವಡಿಸಿಕೊಂಡು ದೇವರ ಮೇಲೆ ಅಪಾರ ನಂಬಿಕೆಯಿಟ್ಟುಕೊಂಡಿದ್ದರು. ಬದಲಾದ ಕಾಲಘಟ್ಟದಲ್ಲಿ ಧಾರ್ಮಿಕ ಆಚರಣೆಯಲ್ಲಿ ನಂಬಿಕೆ ಕಳೆದುಕೊಳ್ಳುವ ಹಂತಕ್ಕೆ ತಲುಪಿದ್ದೇವೆ. ನಮ್ಮ ಮಕ್ಕಳನ್ನು ಶ್ರದ್ದಾ ಕೇಂದ್ರಗಳಿಗೆ ಕರೆದೊಯ್ಯವುದು, ಧಾರ್ಮಿಕ ಆಚರಣೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡುವ ಕರ್ತವ್ಯ ಹಿರಿಯ ಮೇಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಹೇಳಿದರು.


ಅವರು ಕೊಯಿಲ ಗ್ರಾಮದ ಆತೂರು ಶ್ರೀ ಸದಾಶಿವ ದೇವಸ್ಥಾನದ ನಿರ್ಮಾಣ ಹಂತದ ಸಭಾಭವನದಲ್ಲಿ ಕಾರ್ಯಕ್ರಮಗಳ ಶುಭಾರಂಭ ಹಾಗು ಸಾಮೂಹಿಕ ಶ್ರೀ ವರಮಹಾಲಕ್ಮೀ ಪೂಜೆ ಯ ಸಭಾಕಾರ್ಯಕ್ರಮದಲ್ಲಿ ಧಾರ್ಮಿಕ ಭಾಷಣ ಮಾಡಿದರು.


ಹಿಂದೂ ಸಮಾಜದ ಸಂಸ್ಕಾರವನ್ನು ಜಗತ್ತೆ ಮೆಚ್ಚಿಕೊಂಡಿದೆ. ಹಿಂದು ಧರ್ಮ ಎಲ್ಲರಿಗೂ ಒಳಿತಾಗಲಿ ಎಂದು ಇಡೀ ಜಗತ್ತಿಗೆ ಮಾರ್ಗದರ್ಶನ ನೀಡಿದ ಜೀವನ ಕ್ರಮವಾಗಿದೆ. ರಾಷ್ಟ ಸಮಾಜ ಕಟ್ಟುವ ನಿಟ್ಟಿನಲ್ಲಿ ಸಂಘಟಿತರಾಗಿ ಯೋಚನೆ ಮಾಡಬೇಕಿದೆ. ಹಿಂದೂ ಧರ್ಮ, ಸಂಸ್ಕೃತಿ ಸಂರಕ್ಷಣೆಯ ದೃಷ್ಟಿಯಿಂದ ನಾವೆಲ್ಲರೂ ಸಂಘಟಿತರಾಗಬೇಕಿದೆ. ಶ್ರದ್ಧಾಕೇಂದ್ರಗಳ ಅಭಿವೃದ್ಧಿಯಿಂದ ಧರ್ಮ ಜಾಗೃತಿ, ಸಾಮೂಹಿಕ ಆರಾಧನೆಗಳಿಂದ ದೇವರು, ದೇಶ, ಧರ್ಮ, ಸಂಸ್ಕೃತಿ ಉದ್ದೀಪನಗೊಳಿಸೊಣ, ನಾವೆಲ್ಲರೂ ಒಟ್ಟಾಗಿ ಬದುಕು ಕಟ್ಟಿಕೊಳ್ಳೋಣ ಎಂದರು.


ಮಾಲತಿ ಅಮೈ ಕಲಾಯಿಗುತ್ತು ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ವ್ಯವಸ್ಥಾಪನ ಸಮಿತಿ ನಿಕಟಪೂರ್ವಅಧ್ಯಕ್ಷ ಸುನಿತ್ ರಾಜ್ ಶೆಟ್ಟಿ ಬಂತೆಜಾಲು, ಅಭಿವೃದ್ದಿ ಸಮಿತಿ ಅಧ್ಯಕ್ಷ ಶೀನಪ್ಪ ಗೌಡ , ಉದ್ಯಮಿ ಕೇಶವ ಅಮೈ ಕಲಾಯಿಗುತ್ತು ಶುಭಹಾರೈಸಿದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಯದುಶ್ರೀ ಆನೆಗುಂಡಿ ಪ್ರಸ್ತಾವಿಸಿದರು. ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಭವಾನಿಶಂಕರ ಪರಂಗಾಜೆ ಸ್ವಾಗತಿಸಿದರು. ವ್ಯವಸ್ಥಾಪನ ಸಮಿತಿ ಸದಸ್ಯ ಮುರಳಿಕೃಷ್ಣ ವಂದಿಸಿದರು. ಉಪನ್ಯಾಸಕ ಚೇತನ್ ಆನೆಗುಂಡಿ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮುನ್ನ ಸಾರ್ವಜನಿಕ ವರಮಹಾಲಕ್ಷಿö್ಮ ಪೂಜೆ ನಡೆಯಿತು. ದೇವಸ್ಥಾನ ಪವಿತ್ರಪಾಣಿ ವೆಂಕಟ್ರಮಣ ಕುದ್ರೆತ್ತಾಯರವರು ವೈದಿಕ ಕಾರ್ಯ ನಡೆಸಿದರು.

LEAVE A REPLY

Please enter your comment!
Please enter your name here