ಜಿಲ್ಲೆಯಾಧ್ಯಾತ ಇರುವ ಆರು ಘಟಕಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ: ಬಾಬು ಕೊಪ್ಪಳ
ವಿಟ್ಲ: ದ, ಕ ಜಿಲ್ಲಾ ಶಾಮಿಯಾನ ಮಾಲಕರ ಸಂಘ (ರಿ ) ಇದರ 6ನೇ ವಾರ್ಷಿಕ ಮಹಾಸಭೆ ಬಿಸಿರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಜಿಲ್ಲಾಧ್ಯಕ್ಷ ಬಾಬು ಕೆ ವಿಟ್ಲ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಂಘವು ಜಿಲ್ಲೆಯಾಧ್ಯಾತಹ 6 ಘಟಕಗಳನ್ನು ಒಳಗೊಂಡಿದೆ ಎಲ್ಲಾ ಘಟಕಗಳು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು.ಈಗಾಗಲೇ ಜಿಲ್ಲಾ ಸಂಫಕ್ಕೆ ನಿವೇಶನ ಖರೀದಿಯ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಬಲಪಡಿಸುವ ಜೊತೆಗೆ ಸದಸ್ಯರು ಬಲಯುತವಾಗಿ ಬೆಳೆಯಲು ಅವಕಾಶ ಕಲ್ಪಿಸುವ ಎಂದು ಭರವಸೆಯ ಮಾತುಗಳನ್ನಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರುಗಳಾದ ಶಿವಪ್ರಸಾದ್ ಹೆಗ್ಡೆ, ಅಬ್ದುಲ್ ಲತೀಫ್, ಬಂಟ್ವಾಳ ಘಟಕದ ಅಧ್ಯಕ್ಷ ಮ್ಯಾಕ್ಸಿಮ್ ಸಿಕ್ವೆರ, ಮಂಗಳೂರು ಘಟಕದ ಅಧ್ಯಕ್ಷ ಯುವರಾಜ್ ಮೂಡುಶೆಡ್ಡೆ, ಬೆಳ್ತಂಗಡಿ ಘಟಕದ ಅಧ್ಯಕ್ಷ ಪ್ರಭಾಕರ್ ಶೆಟ್ಟಿ, ಮೂಡಬಿದ್ರಿ ಘಟಕದ ಅಧ್ಯಕ್ಷ ಗಣಪತಿ ಪೈ, ವಿಟ್ಲ ಘಟಕದ ಅಧ್ಯಕ್ಷ ಚಂದ್ರಹಾಸ ಸುವರ್ಣ, ಕಡಬ ಘಟಕದ ಅಧ್ಯಕ್ಷ ಪ್ರಮೋದ್ ರೈ ಉಪಸ್ಥಿತರಿದ್ದರು.. ಸುಳ್ಯ ಘಟಕದ ಪದಾಧಿಕಾರಿಗಳನ್ನು ಗೌರವಿಸಲಾಯಿತು..
ಶಾಮಿಯಾನ ಕ್ಷೇತ್ರದಲ್ಲಿ ಸಾಧನೆ ಮಾಡಿದಂತಹ ಮೂಡಬಿದ್ರಿ ಘಟಕದಿಂದ ರಾಮಚಂದ್ರ ಭಟ್, ಮಂಗಳೂರು ಘಟಕದಿಂದ ದಿನೇಶ್ ಕುಮಾರ್, ಬಂಟ್ವಾಳ ಘಟಕದಿಂದ ಗಿರೀಶ್ ಕಾನಂತೂರು, ಬೆಳ್ತಂಗಡಿ ಘಟಕದಿಂದ ಜೋಸೆಫ್ ಕೆ. ಡಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.ಈ ಸಾಲಿನ ಮಿಲನೋತ್ಸವ ಕಾರ್ಯಕ್ರಮದ ಯಶಸ್ವಿಗೆ ಕಾರಣೀಕರ್ತರಾದ ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ ಮತ್ತು ಕಾರ್ಯಕ್ರಮದ ಸಂಚಾಲಕರು ಮನೋಹರ್ ಇವರನನ್ನು ಅಭಿನಂದಿಸಲಾಯಿತು.
ಕಡಬ ಘಟಕವನ್ನು ಈ ಸಂದರ್ಭದಲ್ಲಿ ಅಧಿಕೃತವಾಗಿ ಜಿಲ್ಲಾ ಸಂಘದೊಂದಿಗೆ ಸೇರಿಸಲಾಯಿತು.ಜಿಲ್ಲಾ ಕಾರ್ಯದರ್ಶಿ 2022-23 ನೇ ಸಾಲಿನ ವಾರ್ಷಿಕ ವರದಿ ಮಂಡಿಸಿದರು. ಜಿಲ್ಲಾ ಕೋಶಧಿಕಾರಿ ಬಾಲಕೃಷ್ಣ ಕದ್ರಿ ವಾರ್ಷಿಕ ಲೆಕ್ಕ ಪತ್ರ ಸಭೆಯ ಮುಂದಿಟ್ಟರು. ಇತ್ತೀಚೆಗೆ ಮೃತರಾದ ಸಂಘದ ಸದಸ್ಯ ಮೂಡಬಿದ್ರಿಯ ದಿ. ಗಣೇಶ್ ಕಾಮತ್ ರವರನ್ನು (G. K) ರವರನ್ನು ಸಭೆಯಲ್ಲಿ ನೆನೆಪಿಸಿಲಾಯಿತು.
ಜಿಲ್ಲಾ ಉಪಾಧ್ಯಕ್ಷ ಕ್ಲವೆರ್ ಡಿಸೋಜಾ ಸ್ವಾಗತಿಸಿ, ಜಿಲ್ಲಾ ಉಪಾಧ್ಯಕ್ಷ ಸುಭಾಶಚಂದ್ರ ಜೈನ್ ಧನ್ಯವಾದ ಸಲ್ಲಿಸಿದರು. ಶ್ರೀನಿವಾಸ್ ಪೂಜಾರಿ ಮೆಲ್ಕಾರ್ ಕಾರ್ಯಕ್ರಮ ನಿರೂಪಿಸಿದರು.