ಐತ್ತೂರು: ಕೆಲಸಕ್ಕೆಂದು ಹೋದ ಮಹಿಳೆ ನಾಪತ್ತೆ

0

ಕಡಬ: ಕೆಲಸಕ್ಕೆಂದು ಮನೆಯಿಂದ ಹೋದ ಮಹಿಳೆಯೊಬ್ಬರು ನಾಪತ್ತೆಯಾದ ಘಟನೆ ಕಡಬ ಠಾಣಾ ವ್ಯಾಪ್ತಿಯ ಐತ್ತೂರು ಗ್ರಾಮದಲ್ಲಿ ನಡೆದಿದೆ. ಈ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಐತ್ತೂರು ಗ್ರಾಮದ ಓಟೆಕಜೆ ಸಿ ಆರ್ ಸಿ ಕಾಲೋನಿ ನಿವಾಸಿ ಮಂಜುಳಾ ಎಂಬವರು ಕಾಣೆಯಾಗಿರುವುದಾಗಿದೆ.

ಈ ಬಗ್ಗೆ ಮಹಿಳೆಯ ಪತಿ ಶಿವಕುಮಾರ್ ಅವರು ಠಾಣೆಗೆ ದೂರು ನೀಡಿದ್ದು ತಾನು ಬಿಳಿನೆಲೆಯ ರಬ್ಬರ್ ಕಾರ್ಖಾನೆಯಲ್ಲಿ ಚಾಲಕ ಕೆಲಸ ಮಾಡಿಕೊಂಡಿದ್ದು‌ ಪತ್ನಿ ಬಿಳಿನೆಲೆಯ ನೆಟ್ಟಣದಲ್ಲಿರುವ ಅಂಗಡಿಯೊಂದರಲ್ಲಿ ವಾಹನ ಇನ್ಸುರೆನ್ಸ್ ಏಜೆನ್ಸಿಯಾಗಿ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿಸಿದ್ದಾರೆ.ಆ. 25 ರಂದು ಮುಂಜಾನೆ ಪತಿ ಕೆಲಸಕ್ಕೆ ಹೋಗಿಬರುವುದಾಗಿ ಅತ್ತೆ-ಮಾವನವರಿಗೆ ಹೇಳಿ ಮನೆಯಿಂದ ಹೋಗಿದ್ದರು. ಬಳಿಕ ಹೆಂಡತಿಯ ದೂರವಾಣಿ ಸಂಖ್ಯೆ ಗೆ ಕರೆ ಮಾಡಿದಾಗ ಮೋಬೈಲ್ ಫೋನ್ ಸ್ವೀಚ್ ಆಪ್ ಆಗಿರುತ್ತದೆ. ಮನೆಯಲ್ಲಿ ಹಾಗೂ ಕೆಲಸ ಮಾಡುವ ಪ್ರದೇಶದಲ್ಲಿ ಪತ್ನಿ ಇರಲಿಲ್ಲ. ಎಂದು ದೂರಿನಲ್ಲಿ ತಿಳಿಸಲಾಗಿದೆ.ಈ ಬಗ್ಗೆ ಕಡಬ ಪೊಲೀಸ್‌‌ ಠಾಣಾ ಅ.ಕ್ರ 77/2023 ಕಲಂ:00MP (Women Missing) ಐಪಿಸಿ. ಯಂತೆ ಪ್ರಕರಣ ದಾಖಲಾಗಿದೆ

LEAVE A REPLY

Please enter your comment!
Please enter your name here