ಪಾರದರ್ಶಕವಾಗಿ ನಡೆಯುವ ಡ್ರಾಗೆ ಮೆಚ್ಚುಗೆ ವ್ಯಕ್ತಪಡಿಸಿದ ಶಾಸಕ ಅಶೋಕ್ ಕುಮಾರ್ ರೈ
ಪುತ್ತೂರು: ಲಕ್ಕಿಡಿಪ್ಗಳನ್ನು ಹಲವರು ಮಾಡುತ್ತಾರೆ. ಆದರೆ ಅದು ಜನರಿಗೆ ಮುಟ್ಟುವುದು ಬಹಳ ಕಡಿಮೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಎಲ್ಲರನ್ನು ಕರೆದು ಗ್ರಾಹಕರಿಗೆ ಅದು ತಲುಪಬೇಕೆಂಬ ದೃಷ್ಟಿಯಿಂದ ಶೇಟ್ ಇಲೆಕ್ಟ್ರಾನಿಕ್ಸ್ನಲ್ಲಿ ಪಾರದರ್ಶಕವಾಗಿ ನಡೆಯುವ ಡ್ರಾ ಪ್ರಶಂಸನೀಯವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ಇಲ್ಲಿನ ಕೋರ್ಟು ರಸ್ತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗಡೆ ಪುತ್ತೂರು ಸೆಂಟರ್ನಲ್ಲಿ 20 ವರ್ಷಗಳಿಂದ ವ್ಯವಹರಿಸುತ್ತಿರುವ ಗೃಹೋಪಯೋಗಿ ವಸ್ತುಗಳ ಮಳಿಗೆ ಶೇಟ್ ಇಲೆಕ್ಟ್ರಾನಿಕ್ನಲ್ಲಿ ಅ.10ರಿಂದ ಅ.26ರವರೆಗೆ ನಡೆದ ಫ್ರೀಡಂ ಆಫರ್ ಸೇಲ್ನ ಬಂಪರ್ ಡ್ರಾವನ್ನು ಅವರು ಅದೃಷ್ಟ ಚೀಟಿ ಎತ್ತುವ ಮೂಲಕ ಬಂಪರ್ ಬಹುಮಾನವಾದ ಸ್ಕೂಟರ್ ವಿಜೇತರನ್ನು ಆಯ್ಕೆ ಮಾಡಿ ಮಾತನಾಡಿದರು. ಗ್ರಾಹಕರಿಗೆ ಒಳ್ಳೆಯ ರೀತಿಯಲ್ಲಿ ಸ್ಪರ್ಧಾತ್ಮಕ ದರವನ್ನು ಇಟ್ಟುಕೊಂಡು ಜೊತೆಯಲ್ಲಿ ಅವರಿಗೆ ಬರುವ ಲಾಭದ ಒಂದಂಶವನ್ನು ಗ್ರಾಹಕರಿಗೆ ನೀಡುವ ನಿಟ್ಟಿನಲ್ಲಿ ದೀರ್ಘಕಾಲದ ಸಂಬಂಧ ಬೆಳೆಯಬೇಕು.ಗ್ರಾಹಕರಿಗೂ ಗುಣಮಟ್ಟದ ವಸ್ತುಗಳು ಸಿಗಬೇಕೆಂಬ ಇಚ್ಚೆಯಂತೆ ಬಂಪರ್ ಬಹುಮಾನ ಕೊಡುವ ಉತ್ತಮ ಕಾರ್ಯ ಮಾಡುತ್ತಾ ಬಂದಿದ್ದಾರೆ. ಪುತ್ತೂರಿನ ಎಲ್ಲಾ ಗ್ರಾಹಕರಿಗೂ ಶೇಟ್ ಇಲೆಕ್ಟ್ರಾನಿಕ್ಸ್ನಿಂದ ಪಡೆದ ಬಹುಮಾನದಿಂದ ಒಳ್ಳೆಯದಾಗಲಿ ಮತ್ತು ಗ್ರಾಹಕರಿಗೆ ಇನ್ನಷ್ಟು ಒಳ್ಳೆಯ ಆಯೋಜನೆಯನ್ನು ಸಂಸ್ಥೆ ತರುವಂತಾಗಲಿ ಮತ್ತು ವ್ಯಾಪಾರವೂ ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಶಾಸಕರು ಶುಭಹಾರೈಸಿದರು.
ಗ್ರಾಹಕರಿಗೆ ತೃಪ್ತಿಯಾಗುವ ಗುಣಮಟ್ಟದ ಸೇವೆ:
ಶೇಟ್ ಇಲೆಕ್ಟ್ರಾನಿಕ್ಸ್ನ ಮಾಲಕ ರೂಪೇಶ್ ಶೇಟ್ ಸ್ವಾಗತಿಸಿ ಮಾತನಾಡಿ ಇದುವರೆಗೆ ಪುತ್ತೂರಿನಲ್ಲಿ 16 ದ್ವಿಚಕ್ರ ವಾಹನಗಳನ್ನು ಬಂಪರ್ ಡ್ರಾದಲ್ಲಿ ಗ್ರಾಹಕರಿಗೆ ಕೊಟ್ಟ ಹೆಗ್ಗಳಿಕೆ ಶೇಟ್ ಇಲೆಕ್ಟ್ರಾನಿಕ್ಸ್ನದ್ದು. ಬಂಪರ್ ಬಹುಮಾನವಾಗಿ ಕಾರನ್ನು ಗೆಲ್ಲುವ ಅವಕಾಶವೂ ಗ್ರಾಹಕರಿಗೆ ಒದಗಿ ಬಂದಿತ್ತು.ಗ್ರಾಹಕರಿಗೆ ಎಲ್ಲಾ ಕಂಪೆನಿಯ ಗೃಹೋಪಯೋಗಿ ವಸ್ತುಗಳು ವಿಶಾಲ ಶ್ರೇಣಿಯಲ್ಲಿ ಲಭ್ಯವಿದ್ದು ಶೂನ್ಯ ಬಡ್ಡಿದರದಲ್ಲಿ ಖರೀದಿಗೆ ಅವಕಾಶವಿರುತ್ತದೆ.ಒಟ್ಟಿನಲ್ಲಿ ಗ್ರಾಹಕರಿಗೆ ತೃಪ್ತಿಯಾಗುವ ಗುಣಮಟ್ಟದ ಸೇವೆ ನಮ್ಮ ಉದ್ದೇಶ ಎಂದರು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ದಿವಾಕರ್ ಕೆ.ಪಿ, ಅಕ್ಷಯ ವಿದ್ಯಾಸಂಸ್ಥೆಯ ಅಧ್ಯಕ್ಷ ಜಯಂತ ನಡುಬೈಲು, ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ.ರಾಜಾರಾಮ ಕೆ.ಬಿ.,ಯೂತ್ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ, ಶಿವರಾಮ ಆಳ್ವ, ನ್ಯಾಯವಾದಿ ಚಿದಾನಂದ ಬೈಲಾಡಿ, ನಿತಿನ್, ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಕೃಷಿ ಇಲಾಖೆಯ ಕೃಷ್ಣಪ್ರಸಾದ್ ಭಂಡಾರಿ, ರಾಧಿಕಾ ಇಲೆಕ್ಟ್ರಿಕಲ್ಸ್ನ ಮಾಲಕ ಕೃಷ್ಣ, ಸರ್ವೆಯರ್ ಮೋಹನ್, ವಿದುಷಿ ಪವಿತ್ರ ರೂಪೇಶ್ ಉಪಸ್ಥಿತರಿದ್ದರು.ಸಮೃದ್ಧಿ ಶೆಣೈ ಕಾರ್ಯಕ್ರಮ ನಿರೂಪಿಸಿದರು.
17 ದಿನ 35 ಬಹುಮಾನಗಳು…
ಪ್ರಖ್ಯಾತ ಕಂಪೆನಿಗಳ ಗೃಹೋಪಯೋಗಿ ವಸ್ತುಗಳ ಅಮೋಘ ಸಂಗ್ರಹದೊಂದಿಗೆ ಗ್ರಾಹಕರ ಖರೀದಿಗೆ ಬಹುಮಾನಗಳ ಸುರಿಮಳೆ ಆ.10ರಿಂದ ಪ್ರತಿದಿನವೂ ಡ್ರಾದ ಮೂಲಕ ನೀಡಲಾಗುತ್ತಿತ್ತು. ಮಳಿಗೆಯಲ್ಲಿ ಗ್ರಾಹಕರಿಗೆ ಪ್ರತಿ ರೂ.2000ದ ಖರೀದಿಗೆ 1 ಕೂಪನ್ ಪಡೆದು 35 ಬಹುಮಾನವನ್ನು ಗೆಲ್ಲುವ ಯೋಜನೆಯಲ್ಲಿ ಆ.10ರಂದು ಗ್ಯಾಸ್ ಸ್ಟೌವ್ ಮತ್ತು ಮಿಕ್ಸರ್ ಗ್ರೈಂಡರ್, ಆ.11 ಕ್ಕೆ ಎಲ್.ಇ.ಡಿ ಟಿವಿ ಮತ್ತು ಮಿಕ್ಸರ್ ಗ್ರೈಂಡರ್, ಆ.12ಕ್ಕೆ ಇಂಡಕ್ಸನ್ ಹೀಟರ್ ಮತ್ತು ರೆಫ್ರಿಜರೇಟರ್, ಆ.13ಕ್ಕೆ ಎಲ್.ಇ.ಡಿ ಟಿವಿ ಮತ್ತು ಮಿಕ್ಸರ್ ಗ್ರೈಂಡರ್, ಆ.14 ಕ್ಕೆ ಮೈಕ್ರೋ ಓವೆನ್ ಮತ್ತು ಮಿಕ್ಸರ್ ಗ್ರೈಂಡರ್, ಆ.15ಕ್ಕೆ ಗ್ಯಾಸ್ ಸ್ಟೌವ್ ಮತ್ತು ಮಿಕ್ಸಿ,ಆ.16ಕ್ಕೆ ಎಲ್.ಇ.ಡಿ ಟಿವಿ, ಮಿಕ್ಸಿ ಮತ್ತು ಇಂಡಕ್ಸನ್ ಹೀಟರ್, ಆ.17ಕ್ಕೆ ಗ್ಯಾಸ್ ಸ್ಟೌವ್ ಮತ್ತು ಮಿಕ್ಸಿ, ಆ.18ಕ್ಕೆ ಇಂಡಕ್ಸನ್ ಸ್ಟೌವ್ ಮತ್ತು ಮಿಕ್ಸಿ, ಆ.19ಕ್ಕೆ ಗ್ಯಾಸ್ ಸ್ಟೌವ್ ಮತ್ತು ಇಂಡಕ್ಸನ್ ಸ್ಟೌವ್, ಆ.20ಕ್ಕೆ ಮೈಕ್ರೋ ಓವೆನ್ ಮತ್ತು ಇಂಡಕ್ಸನ್ ಸ್ಟೌವ್, ಆ.21ಕ್ಕೆ ಇಂಡಕ್ಸನ್ ಸ್ಟೌವ್ ಮತ್ತು ಮಿಕ್ಸಿ, ಆ.22ಕ್ಕೆ ಗ್ಯಾಸ್ ಸ್ಟೌವ್ ಮತ್ತು ಇಂಡಕ್ಸನ್ ಸ್ಟೌವ್,ಆ.23ಕ್ಕೆ ಮೈಕ್ರೋ ಓವೆನ್ ಮತ್ತು ಇಂಡಕ್ಸನ್ ಸ್ಟೌವ್,ಆ.24ಕ್ಕೆ ರೆಫ್ರಿಜರೇಟರ್, ಇಂಡಕ್ಸನ್ ಸ್ಟೌವ್ ಮತ್ತು ಮಿಕ್ಸಿ, ಆ.25ಕ್ಕೆ ಎಲ್.ಇ.ಡಿ ಟಿವಿ ಮತ್ತು ಇಂಡಕ್ಸನ್ ಸ್ಟೌವ್,ಆ.26ಕ್ಕೆ ಬಂಪರ್ ಡ್ರಾ ನಡೆಯಿತು.ಟಿವಿಎಸ್ ಜುಪಿಟರ್ ಸ್ಕೂಟರ್ ಬಂಪರ್ ಬಹುಮಾನವಾಗಿದ್ದು ಬುಳೇರಿಕಟ್ಟೆಯ ಜನಾರ್ದನ ಅವರು ಬಹುಮಾನ ವಿಜೇತರಾಗಿದ್ದಾರೆ.
ರೂಪೇಶ್ ಶೇಟ್,
ಮಾಲಕರು ಶೇಟ್ ಇಲೆಕ್ಟ್ರಾನಿಕ್ಸ್ ಪುತ್ತೂರು