ಪುತ್ತೂರು: ಮುಖ್ಯರಸ್ತೆಯಲ್ಲಿರುವ ನ್ಯೂ ಮಾನಕ ಜ್ಯುವೆಲ್ಲರ‍್ಸ್‌ನ ಬಂಗಾರದಂತಹ ಗ್ರಾಹಕರಿಗೆ ದೀಪಾವಳಿ ಪ್ರಯುಕ್ತ ಚಿನ್ನ ಹಾಗೂ ಬೆಳ್ಳಿ ಆಭರಣಗಳ ಮೇಲೆ ವಿಶೇಷ ಆಫರ್ ಘೋಷಿಸಿದೆ.
ಎಂಎಸ್ ಕಾಂಪ್ಲೆಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಚಿನ್ನದ ಮಳಿಗೆಯಲ್ಲಿ ಚಿನ್ನಭಾರಣ ಖರೀದಿ ಮೇಲೆ ಪ್ರತಿ ಗ್ರಾಂಗೆ 450 ರೂಪಾಯಿ ಕಡಿತದ ಆಫರ್ ನೀಡಲಾಗುತ್ತಿದೆ. ಅಲ್ಲದೆ, ಪ್ರತಿ ಕೆಜಿ ಬೆಳ್ಳಿ ಖರೀದಿಸಿದರೆ 5೦೦೦ ರೂ. ಉಳಿತಾಯ ಮಾಡಬಹುದಾಗಿದೆ.

ಈ ಆಫರ್ ಅಕ್ಟೋಬರ್ 21ರಂದು ಪ್ರಾರಂಭವಾಗಿದ್ದು, ಅಕ್ಟೋಬರ್ 22ರಂದು ಮುಕ್ತಾಯಗೊಳ್ಳಲಿದೆ. ಚಿನ್ನದ ನಾಣ್ಯ, ಸ್ಕೀಂ ಕಾರ್ಡ್ ಹಾಗೂ ಆಫರ್ ಮೊದಲೇ ಬುಕ್ಕಿಂಗ್ ಮಾಡಿದವರಿಗೆ ಈ ಕೊಡುಗೆ ಅನ್ವಯವಾಗುವುದಿಲ್ಲ.