ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ವಿದ್ಯಾರ್ಥಿಗಳಿಗೆ ಹದಿಹರೆಯದ ಶಿಕ್ಷಣ ಕಾರ್ಯಗಾರ

0

ಪುತ್ತೂರು: ನೆಹರು ನಗರದ ವಿವೇಕಾನಂದ ಸೆಂಟ್ರಲ್ ಸ್ಕೂಲ್ ನಲ್ಲಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳ ಕಲಿಕೆಗೆ ಪೂರಕ ಎಂಬಂತೆ, ಆತ್ಮವಿಶ್ವಾಸ ಮತ್ತು ವ್ಯಕ್ತಿತ್ವ ವಿಕಸನಗೊಳಿಸುವ ನಿಟ್ಟಿನಲ್ಲಿ ಆರಂಭಗೊಂಡ “ಚೇತನ” – ತಜ್ಞರೊಂದಿಗೆ ಸಂವಹನ ಕಾರ್ಯಕ್ರಮದಲ್ಲಿ ಇದೇ ಆಗಸ್ಟ್ 19ರಂದು ಹದಿಹರೆಯದ ಆರೋಗ್ಯದ ಕುರಿತಾದ ಜಾಗೃತಿ ಎಂಬ ವಿಷಯದ ಕುರಿತು ಕಾರ್ಯಗಾರವನ್ನು ನಡೆಸಲಾಯಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಪುತ್ತೂರು ಸರಕಾರಿ ಆಸ್ಪತ್ರೆಯ ವೈದ್ಯರಾದ ಡಾ. ಯದುರಾಜ್ ಡಿ.ಕೆ ಹಾಗೂ ವೈದ್ಯಕೀಯ ಅಧೀಕ್ಷಕರು ಕಮ್ಯೂನಿಟಿ ವೈದ್ಯರು, ಸೆಂಟ್.ಜೋಸೆಫ್ ಆಸ್ಪತ್ರೆ, ಕಕ್ಕಿಂಜೆಯ ಡಾ. ಅನನ್ಯ ಲಕ್ಷ್ಮೀ, ಇವರು ಪರಿಣಾಮಕಾರಿಯಾಗಿ ಕಾರ್ಯಗಾರವನ್ನು ನಡೆಸಿದರು. ವಿದ್ಯಾರ್ಥಿ ವಿದ್ಯಾರ್ಥಿನಿಯರೂ ಸಕ್ರಿಯವಾಗಿ ಭಾಗವಹಿಸಿ ತಮ್ಮ ಗೊಂದಲ, ಸಂಶಯಗಳನ್ನು ತಜ್ಞರೊಡನೆ ಹಂಚಿಕೊಂಡು ಅವುಗಳ ನಿವಾರಣೋಪಾಯಗಳನ್ನು ಪಡೆದರು. ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಸದಸ್ಯೆಯರಾದ ಪ್ರೀತಿ ಶೆಣೈ ಮತ್ತು ಶಂಕರಿ ಶರ್ಮ ಹಾಗೂ ವಿದ್ಯಾರ್ಥಿಗಳೊಂದಿಗೆ ಶಾಲಾ ಪ್ರಾಂಶುಪಾಲೆ ಸಿಂಧೂ ವಿ.ಜಿ ಮತ್ತು ಉಪ ಪ್ರಾಂಶುಪಾಲೆ ಹೇಮಾವತಿ ಎಮ್.ಎಸ್ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here