ಸಾರ್ವಜನಿಕರ ಸೇವೆಗೆ ಕಚೇರಿಯಲ್ಲಿ ಸರ್ವ ವ್ಯವಸ್ಥೆ: ಅಶೋಕ್ ರೈ
ಪುತ್ತೂರು: ಪುತ್ತೂರು ಶಾಸಕರಾದ ಅಶೋಕ್ ರೈಯವರ ಕಚೇರಿ ಇಂದು ಉದ್ಘಾಟನೆಗೊಳ್ಳಲಿದೆ. ಶಾಸಕರಾಗಿ ನೂರು ದಿನದ ಬಳಿಕ ಶಾಕರ ಅಧಿಕೃತ ಕಚೇರಿ ಇಂದು ಉದ್ಘಾಟನೆಗೊಳ್ಳಲಿದ್ದು ರಾಜಕೀಯ ಗಣ್ಯರು ಭಾಗವಹಿಸಲಿದ್ದಾರೆ. ವಿಶಾಲವಾದ ಕಚೇರಿಯಲ್ಲಿ ಪಾರ್ಕಿಂಗ್ ವ್ಯವಸ್ಥೆ ಸೇರಿದಂತೆ ಶಾಸಕರನ್ನು ಭೇಟಿಯಾಗಲು ಅಥವಾ ಕಚೇರಿ ಭೇಟಿಗಗಿ ಬರುವ ಸಾರ್ವಜನಿಕರಿಗೆ ಎಲ್ಲಾ ಸೌಕರ್ಯಗಳನ್ನೊಳಗೊಂಡ ನೂತನ ಕಚೇರಿ ಆ.28 ಸೋಮವಾರದಿಂದ ಅಧಿಕೃತವಾಗಿ ಆರಂಭಗೊಳ್ಳಲಿದೆ.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್, ಮಾಜಿ ಸಚಿವ ಬಿ ರಮಾನಾಥ ರೈ ಸೇರಿದಂತೆ ಪ್ರಮುಖ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.
ಹಕ್ಕುಪತ್ರ ವಿತರಣೆ
ಕಚೇರಿ ಉದ್ಘಾಟನೆ ಬಳಿಕ ಸಾರ್ವಜನಿಕ ಸಮಾರಂಭ ನಡೆಯಲಿದ್ದು ಕಾರ್ಯಕ್ರಮದಲ್ಲಿ 94ಸಿಸಿ ಮತ್ತು 94 ಸಿ ಹಕ್ಕುಪತ್ರ ವಿತರಣಾ ಕಾರ್ಯಕ್ರಮ ನಡೆಯಲಿದೆ. ಕಳೆದ ಹಲವಾರು ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಅಲೆದಾಡುತ್ತಿರುವ 160 ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಕೆಲಸವನ್ನು ಶಾಸಕರು ಮಾಡಲಿದ್ದಾರೆ.
ಕಚೇರಿ ಎಲ್ಲಿದೆ?
ಶಾಸಕರ ನೂತನ ಕಚೇರಿ ಮಿನಿವಿಧಾನಸೌಧದ ಬಳಿ ಇರುವ ಹಳೆಯ ಪುರಸಭಾ ಕಚೇರಿ (ಪುಡಾಕಚೇರಿ) ಕಿಲ್ಲೆ ಮೈದಾನದಲ್ಲಿರುವ ಪುರಭವನದ ಹಿಂಭಾಗದಲ್ಲಿರುವ ಕಟ್ಟಡದಲ್ಲಿ ಶಾಸಕರ ಕಚೇರಿ ಇದೆ.
ಏನೆಲ್ಲಾ ವ್ಯವಸ್ಥೆಗಳಿದೆ?
ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಸಾರ್ವಜನಿಕರು ಶಾಸಕರನ್ನು ಭೇಟಿಯಾಗಲು ಇದೇ ಕಚೇರಿಗೆ ಬರಬಹುದು. ಕಚೇರಿಯಲ್ಲಿ ಸಾರ್ವಜನಿಕರಿಂದ ಎಲ್ಲಾ ರೀತಿಯ ಅರ್ಜಿಗಳನ್ನು ಸ್ವೀಕರಿಸಲು ಪ್ರತ್ಯೇಕ ಕೌಂಟರುಗಳನ್ನು ತೆರೆಯಲಾಗಿದೆ. ಯವುದೇ ಇಲಾಖೆಗಳಿಗೆ ಅರ್ಜಿ ಸಲ್ಲಿಸಲು ಅಥವಾ ಯಾವುದೆ ಇಲಾಖೆಯಲ್ಲಿ ಕೆಲಸ ಕಾರ್ಯಗಳು ನಡೆಯದೆ ಇದ್ದಲ್ಲಿ ಶಾಸಕರ ಕಚೇರಿಯಲ್ಲಿರುವ ಆಯಾ ಇಲಾಖೆಗೆ ಸಂಬಂಧಿಸಿದ ಸಿಬಂದಿಗಳನ್ನು ಭೇಟಿಯಾಗಿ ಮಾತನಾಡಬಹುದಾಗಿದೆ. ಕೆಲವೊಂದು ಸಮಸ್ಯೆಗಳಿಗೆ ಕಚೇರಿಯ ಸಿಬಂದಿಗಳೇ ಪರಿಹಾರ ಸೂಚಿಸುವ ಕೆಲಸವನ್ನು ಮಾಡಲಿದ್ದಾರೆ.ಒಟ್ಟಿನಲ್ಲಿ ಸಾರ್ವಜನಿಕರಿಗೆ ನೆರವಾಗುವ ರೀತಿಯಲ್ಲಿ ಕಚೇರಿ ಕೆಲಸ ಮಾಡಲಿದೆ.
ವಿಶಾಲ ಪಾರ್ಕಿಂಗ್ ವ್ಯವಸ್ಥೆ
ಕಚೇರಿಗೆ ಬರುವ ಸಾರ್ವಜನಿಕರಿಗೆ ನೆರವಾಗುವ ನಿಟ್ಟಿನಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಇದುವರೆಗೆ ಪುತ್ತೂರಿನ ಇತಿಹಾಸದಲ್ಲೇ ಮೊದಲ ಬಾರಿಗೆ ಪುತ್ತೂರಿನ ಶಾಸಕರೊಬ್ಬರು ಬೃಹತ್ ಕಚೇರಿಯನ್ನು ಆರಂಭಿಸಿ ಸಾರ್ವಜನಿಕರ ಸೇವೆಯನ್ನು ಪ್ರಾರಂಭ ಮಾಡಿರುವುದು ಇತಿಹಾಸವೇ ಸರಿ.
ನನ್ನ ಕ್ಷೇತ್ರದ ಮತಾದಾರ ಬಂಧುಗಳು ಶಾಸಕರನ್ನು ಭೇಟಿಯಾಗಲು ಹೊಸ ಕಚೇರಿಗೆ ಬರಬೇಕು. ಸಾರ್ವಜನಿಕರಿಗೆ ಅನುಕೂಲವಾಗಲೆಂದು ಮಿನಿ ವಿಧಾನಸೌಧದ ಬಳಿಯೇ ಹೊಸ ಕಚೇರಿಯನ್ನು ಆರಂಭಿಸಿದ್ದೇನೆ. ಕಚೇರಿಯಲ್ಲಿ ಸಾರ್ವಜನಿಕರ ಸೇವೆಗೆ ಸಿಬಂದಿಗಳನ್ನು ನೇಮಕ ಮಾಡಿದ್ದೇನೆ. ಯಾವುದೇ ಸಮಸ್ಯೆಗಳಿದ್ದರೂ, ತೊಂದರೆಗೊಳಗಾದವರು ಶಾಸಕರ ಕಚೇರಿಗೆ ಬಂದು ತಿಳಿಸಬಹುದು. ನೊಂದವರಿಗೆ ನೆರವು ನೀಡುವ ಕೆಲಸವೂ ಕಚೇರಿಯಿಂದ ನಡೆಯಲಿದೆ, ಯಾವುದೇ ಸರಕಾರಿ ಕಚೇರಿಯಲ್ಲಿ ನ್ಯಾಯ ಸಿಗದೇ ಇದ್ದಲ್ಲಿ ಶಾಸಕರ ಕಚೆರಿಗೆ ಬಂದು ದೂರು ಕೊಡಬಹುದು ಅಥವಾ ಮನವಿಯನ್ನು ಮಾಡಿ ಪರಿಹಾರ ಕಂಡುಕೊಳ್ಳಬಹುದು. ನನ್ನ ಕ್ಷೇತ್ರದ ಪ್ರತೀಯೊಬ್ಬ ಪ್ರಜೆಗೂ ನನ್ನ ಕಚೇರಿಯ ಬಾಗಿಲು ತೆರೆದುಕೊಂಡೇ ಇರುತ್ತದೆ.
ಅಶೋಕ್ ಕುಮಾರ್ ರೈ, ಶಾಸಕರು, ಪುತ್ತೂರು