ಆಲಂಕಾರು ವಲಯ ಬಂಟರ ಸಂಘದ ಕಟ್ಟಡಕ್ಕೆ ಎಲ್ಲಾರು ಸಹಕಾರ ನೀಡಿ ವಲಯಾ ಬಂಟರ ಸಂಘದ ಅಧ್ಯಕ್ಷ ಸೇಶಪ್ಪ ರೈ .ಕೆ
ಆಲಂಕಾರು: ಆಲಂಕಾರು ವಲಯ ಬಂಟರ ಸಂಘದ ಅಶ್ರಯದಲ್ಲಿ ಬಂಟರ ಸಮಾವೇಶ,ವಿದ್ಯಾರ್ಥಿ ವೇತನ ವಿತರಣೆ, ವಿವಾಹ ವಾರ್ಷಿಕೋತ್ಸವದ ಸುವರ್ಣ ಸಂಭ್ರಮವನ್ನಾಚರಿಸಿದ ದಂಪತಿಗಳಿಗೆ ಗೌರವಾರ್ಪಣೆ ಹಾಗು ಕಲ್ಲಂಗಳಗುತ್ತು ವಾಸಪ್ಪ ಪೆರ್ಗಡೆ ಕೃಷಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಆ.27 ರಂದು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ದೀನ್ ದಯಾಳ್ ರೈತ ಸಭಾಭವನದಲ್ಲಿ ನಡೆಯಿತು.
ತಾ.ಪಂ ನಿವೃತ್ತ ವಿಸ್ತರಣಾಧಿಕಾರಿ ಜಗನ್ನಾಥ ರೈ ಅಂಬಾರವರು ಸಮಾವೇಶದ ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ ಬಂಟರು ಎಲ್ಲಾ ಸಮಾಜದವರನ್ನು ಪ್ರೀತಿಸುವವರು ಹಾಗು ಎಲ್ಲಾ ಕ್ಷೇತ್ರಗಳಿಗೂ ಅಪಾರ ಕೊಡುಗೆಯನ್ನು ನೀಡಿದವರು.ಆಲಂಕಾರು ವಲಯ ಬಂಟರ ಸಂಘದಿಂದ ಬಂಟರ ಸಮಾವೇಶ, ವಿದ್ಯಾರ್ಥಿ ವೇತನ ವಿತರಣೆ ,ಕೃಷಿ ಪ್ರಶಸ್ತಿ,ಸುವರ್ಣ ಸಂಭ್ರಮ ಆಚರಿಸಿ ದಂಪತಿಗಳಿಗೆ ಗೌರವರ್ಪಣೆಗಳು ಸಮಾಜದಲ್ಲಿ ತುಂಬಾ ಒಳ್ಳೆಯ ಕೆಲಸ ಕಾರ್ಯವಾಗಿದ್ದು ವಿದ್ಯಾರ್ಥಿಗಳು ವಿಧ್ಯಾಭ್ಯಾಸ ಜೀವನದಲ್ಲಿ ವಿದ್ಯೆಗೆ ಹೆಚ್ಚಿನ ಮಹತ್ವ ವನ್ನು ಕೊಟ್ಟು ಸಾಧನೆಯತ್ತ ಮುಂದವರಿಯಬೇಕು ಹಾಗು ಸಮಾಜಕ್ಕೆ,ಕುಟುಂಬಕ್ಕೆ ಕೀರ್ತಿಯನ್ನು ಬೆಳಗಿಸುವ ಕೆಲಸ ಕಾರ್ಯ ಮಾಡಬೇಕೆಂದರು. ಬೆಂಗಳೂರಿನ ಗುಪ್ತಚರ ಇಲಾಖೆಯ ಅಧಿಕಾರಿ ಗಣೇಶ್ ರೈ ಮಾತನಾಡಿ ಆಲಂಕಾರು ವಲಯ ಬಂಟರ ಸಂಘದಿಂದ ನಾನು ಕೂಡ ವಿದ್ಯಾರ್ಥಿ ವೇತನ ಪಡೆದುಕೊಂಡವ,ನಾವು ಬಂಟರು ಅನೇಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು,ವಿದ್ಯಾರ್ಥಿ ಜೀವನದಲ್ಲಿ ಸಾಧನೆ ಮಾಡಲು ಯಾವ ಕ್ಷೇತ್ರಗಳಲ್ಲಿ ನಮಗೆ ಅವಕಾಶ ಸಿಗುತ್ತದೆ. ಆ ಕ್ಷೇತ್ರಗಳಲ್ಲಿ ನಾವು ಮುಂದುವರಿಯಬೇಕು ಹಾಗು ಸಾಧನೆ ಮಾಡಬೇಕು ಹಾಗು ಕೆಟ್ಟ ಚಟಗಳಿಗೆ ಬಲಿಯಾಗಬಾರದು. ಸಾಮಾಜಿಕ ಜಾಲತಾಣ ವನ್ನು ಹಾಗು ಮಾಧ್ಯಮ ವನ್ನು ನಮ್ಮಒಳ್ಳೆಯತನಕ್ಕೆ ಉಪಯೋಗಮಾಡಬೇಕೆಂದರು.ಧನ್ವಂತರಿ ಕ್ಲಿನಿಕ್ ಉಪ್ಪಿನಂಗಡಿಯ ವೈದ್ಯರಾದ ಡಾ!.ನಿರಂಜನ ರೈ ಮಾತನಾಡಿ ಬಂಟರು ವಿಜಯನಗರ ಸಾಮ್ರಾಜ್ಯ ಕಾಲದಿಂದಲೂ ಅಳ್ವಿಕೆ ಮಾಡಿಕೊಂಡು ಬಂದವರು.ಬಂಟರಿಗೆ ತನ್ನದೇ ಆದ ಇತಿಹಾಸ ಇದೆ.ನಮ್ಮ ಇತಿಹಾಸ ವನ್ನು ಹಾಗು ಕಟ್ಟುಪಾಡುಗಳನ್ನು ಮುಂದಿನ ಜನಾಂಗದವರಿಗೆ ತಿಳಿಸುವ ಕೆಲಸ ಕಾರ್ಯವಾಗಬೇಕು ಹಾಗು ಸಂಘಟನೆಯನ್ನು ಬಲಿಷ್ಟ ಗೊಳಿಸಬೇಕೆಂದರು.
ಬಂಟರ ಯಾನೆ ನಾಡವರ ಮಾತೃಸಂಘ ಮಂಗಳೂರಿನ ಪುತ್ತೂರು ತಾಲೂಕು ಸಮಿತಿಯ ಸಂಚಾಲಕ ದಯಾನಂದರೈ ಮನವಳಿಕೆಯವರು ಬಂಟರ ಯಾನೆ ನಾಡವರ ಮಾತೃ ಸಂಘ ಮಂಗಳೂರು ಮಾಡುತ್ತಿರುವ ಸಮಾಜ ಮುಖಿ ಕೆಲಸ ಕಾರ್ಯಗಳ ಬಗ್ಗೆ ತಿಳಿಸಿ ಸುಮಾರು 23 ವರ್ಷಗಳ ಹಿಂದೆ ನಾವೆಲ್ಲ ಒಟ್ಟು ಸೇರಿ ಆಲಂಕಾರು ವಲಯ ಬಂಟರ ಸಂಘವನ್ನು ಸ್ಥಾಪನೆ ಮಾಡಿದ್ದು ಇದರ ಮೂಲಕ ಹಲವು ಸಮಾಜಮುಖಿ ಕೆಲಸ ಕಾರ್ಯಗಳು ನಡೆಯುತ್ತಿದೆ ಎಂದು ತಿಳಿಸಿ ಬಂಟರ ರಕ್ತದಲ್ಲಿಯೇ ನಾಯಕತ್ವ ಗುಣವಿದೆ.ಆಲಂಕಾರು ವಲಯ ಬಂಟರ ಸಂಘ ಒಳ್ಳೆಯ ಕೆಲಸ, ಕಾರ್ಯಗಳನ್ನು ನಿರ್ವಹಿಸುತ್ತಿರುವುದಕ್ಕೆ ಅಭಿನಂದನೆ ಸಲ್ಲಿಸಿದರು.
ವಿವಾಹ ವಾರ್ಷಿಕೋತ್ಸವದ ಸುವರ್ಣ ಸಂಭ್ರಮವನ್ನಾಚರಿಸಿದ ರಾಮಣ್ಣ ಶೆಟ್ಟಿ, ಜಗನ್ನಾಥ ಶೆಟ್ಟಿ ಕಾರೆಗುಡ್ಡೆ,ವಿಶ್ವನಾಥ ಶೆಟ್ಟಿ ದಂಪತಿಗಳನ್ನು ಸಭೆಯಲ್ಲಿ ಗೌರವಿಸಲಾಯಿತು. ಇದೇ ಸಂಧರ್ಭದಲ್ಲಿ ಕಲ್ಲಂಗಳಗುತ್ತು ವಾಸಪ್ಪ ಪೆರ್ಗಡೆ ಕೃಷಿ ಪ್ರಶಸ್ತಿಯನ್ನು ಕೃಷಿಕರಾದ ರಘನಾಥ ಚೌಟರವರಿಗೆ ಪ್ರದಾನ ಮಾಡಲಾಯಿತು ಹಾಗು ಕೊಯಿಲ ಗ್ರಾ.ಪಂ ಅಧ್ಯಕ್ಷರಾದ ಪುಷ್ಪಾಸುಭಾಸ್ ಶೆಟ್ಟಿ ಆರುವಾರ ರವರನ್ನು ಹಾಗು ವಿಶೇಷ ಸಾದನೆ ಮಾಡಿದ ಶ್ಲಾಘ್ಯ ಹಾಗು ತೇಜಸ್ ರೈಯವರನ್ನು ಸಭೆಯಲ್ಲಿ ಸನ್ಮಾನಿಸಲಾಯಿತು ಹಾಗು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ನೂತನ ವಾಗಿ ಆಯ್ಕೆಯಾದ ಆಲಂಕಾರು ವಲಯ ಬಂಟರ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಸಭೆಯಲ್ಲಿ ಪರಿಚಯಿಸಲಾಯಿತು.
ಸಭಾಧ್ಯಕ್ಷತೆ ವಹಿಸಿದ್ದ ಆಲಂಕಾರು ವಲಯ ಬಂಟರ ಸಂಘದ ಅಧ್ಯಕ್ಷ ಸೇಸಪ್ಪ ರೈ ಕೆ ಯವರು ಮಾತನಾಡಿ ಈ ಸಾರಿ ಸಮಾವೇಶದಲ್ಲಿ ನಮ್ಮಆರು ಗ್ರಾಮದ ಸದಸ್ಯರನ್ನೆ ಅತಿಥಿಗಳನ್ನಾಗಿ ಸಭೆಗೆ ಆಹ್ವಾನಿಸಿದ್ದೇವೆ.ಸಮಾವೇಶದಲ್ಲಿ ಪಾಲ್ಗೊಂಡ ಎಲ್ಲಾ ಬಂಟಬಾಂಧವರಿಗೆ ಅಭಿನಂದನೆ ಸಲ್ಲಿಸಿ ಆಲಂಕಾರು ವಲಯ ಬಂಟರ ಸಂಘದಲ್ಲಿ ನಿರ್ಮಾಣಗೊಳ್ಳಲಿರುವ ಸ್ವಂತ ಕಟ್ಟಡಕ್ಕೆ ಎಲ್ಲಾರು ಸಹಕಾರ ನೀಡುವಂತೆ ವಿನಂತಿಸಿದರು.
ಪುತ್ತೂರು ತಾಲೂಕು ಬಂಟರ ಸಂಘದ ನಿರ್ದೇಶಕರಾದ ರಾಧಾಕೃಷ್ಣ ರೈ ಪರಾರಿಗುತ್ತು, ಆರುವಾರ ಸುಭಾಸ್ ಕುಮಾರ್ ಶೆಟ್ಟಿ ಆಲಂಕಾರು ವಲಯ ಬಂಟರ ಸಂಘದ ಉಪಾಧ್ಯಕ್ಷರಾದ ರಾಮಮೋಹನ ರೈ ಸುರುಳಿ, ಪ್ರಭಾ ರಘುನಾಥ ಚೌಟ, ಸಂಘಟನಾ ಕಾರ್ಯದರ್ಶಿ ಚೆನ್ನಕೇಶವ ರೈ ಗುತ್ತುಪಾಲು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಆಲಂಕಾರು ವಲಯ ಬಂಟರ ಸಂಘದ ಕಾರ್ಯದರ್ಶಿ ಪ್ರಶಾಂತ ರೈ ಮನವಳಿಕೆ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪದಾಧಿಕಾರಿಗಳಾದ, ವಿಶ್ವನಾಥ ರೈ ಎರಿಂಟಾಡಿ, ಉಮೇಶ ರೈ ಬಲೆಂಪೋಡಿ, ಸುಭಾನ್ ರೈ ಮರುವಂತಿಲ,ವಿಠಲ ರೈ ಗುತ್ತುಪಾಲು,ರಘನಾಥ ಶೆಟ್ಟಿ ಕಲ್ಕಾಡಿ ಅತಿಥಿಗಳನ್ನು ಸ್ವಾಗತಿಸಿ, ದೀಕ್ಷಾ ಪ್ರವೀಣ್ ಅಳ್ವ ಪ್ರಾರ್ಥಿಸಿ, ಸನ್ಮಾನಿತರ ಪರಿಚಯವನ್ನು ಚೆನ್ನಕೇಶವ ರೈ ಗುತ್ತುಪಾಲು, ವಿದ್ಯಾರ್ಥಿ ವೇತನ ಪಟ್ಟಿಯನ್ನು ಕವನ್ ರೈ ಯವರು ವಾಚಿಸಿದರು.ಗುರುಕಿರಣ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಆಲಂಕಾರು ವಲಯ ಬಂಟರ ಸಂಘದ ಜೂತೆ ಕಾರ್ಯದರ್ಶಿ ಲೋಕನಾಥ ರೈ ಕೇಲ್ಕ,ರಾಮಕುಂಜ ವಂದಿಸಿದರು.ರವಿರಾಜ್ ರೈ ಗುತ್ತುಪಾಲು, ಪ್ರದೀಪ್ ರೈ ಮನವಳಿಕೆ ಸೇರಿದಂತೆ ಹಲವು ಮಂದಿ ಸಹಕರಿಸಿದರು.