ಪುತ್ತೂರು:ಶಾಸಕರ ನೂತನ ಕಚೇರಿ ಮಿನಿವಿಧಾನಸೌಧದ ಬಳಿ ಇರುವ ಹಳೆಯ ಪುರಸಭಾ ಕಚೇರಿ ಕಟ್ಟಡದ ನವೀಕರಣಗೊಂಡ ನೂತನ ಕಚೇರಿಯಲ್ಲಿ ಪೂಜಾ ಕೈಂಕರ್ಯದೊಂದಿಗೆ ಆ.28ರಂದು ಬೆಳಿಗ್ಗೆ ಉದ್ಘಾಟನೆಗೊಂಡಿತು.ಗಣಪತಿಹೋಮದೊಂದಿಗೆ ಕಚೇರಿಯನ್ನು ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಶಾಸಕ ಅಶೋಕ್ ಕುಮಾರ್ ರೈ ದಂಪತಿ ಪೂಜಾ ಕಾರ್ಯದಲ್ಲಿ ಭಾಗವಹಿಸಿದ್ದು, ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಸಹಿತ ಅನೇಕ ನಾಯಕರು ಈ ಸಂದರ್ಭ ಉಪಸ್ಥಿತರಿದ್ದರು.
©