ಅಂಬಿಕಾ ವಿದ್ಯಾಲಯ ಪ್ರಥಮ, ಬೆಳ್ತಂಗಡಿ ಸೈಂಟ್ ಮೇರಿಸ್ ಸ್ಕೂಲ್ ದ್ವಿತೀಯ
ಪುತ್ತೂರು: ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿ ಸ್ಥಾಪನೆಯಾದ 50ನೇ ವರ್ಷದ ಸವಿನೆಪಿಗಾಗಿ ಅಂತರ್ ಶಾಲಾ ಮಟ್ಟದ ಕ್ವಿಝ್ ಸ್ಪರ್ಧೆಯ ಗ್ರ್ಯಾಂಡ್ ಫಿನಾಲೆ`ಫೆಸ್ಟ” ಆ.27ರಂದು ಮರೀಲ್ ನಲ್ಲಿರುವ ಕ್ಯಾಂಪ್ಕೋ ಚಾಕಲೇಟ್ ಫ್ಯಾಕ್ಟರಿಯಲ್ಲಿ ನಡೆಯಿತು.
ಕಾಸರಗೋಡು, ದ.ಕ., ಉಡುಪಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 60 ಶಾಲೆಯ ತಲಾ ಇಬ್ಬರು ವಿದ್ಯಾರ್ಥಿಗಳನ್ನೊಳಗೊಂಡ ತಂಡ ಈ ಕ್ವಿಝ್ ಸ್ಪರ್ಧೆಯಲ್ಲಿ ಪಾಲ್ಗೊಂಡಿತ್ತು. ಪ್ರಥಮ ಬಹುಮಾನ ರೂ.25ಸಾವಿರವನ್ನು ಅಂಬಿಕಾ ವಿದ್ಯಾಲಯ ಬಪ್ಪಳಿಗೆ, ದ್ವಿತೀಯ ಬಹುಮಾನ ರೂ.15ಸಾವಿರವನ್ನು ಬೆಳ್ತಂಗಡಿಯ ಸೈಂಟ್ ಮೇರಿಸ್ ಸ್ಕೂಲ್ ಹಾಗೂ ಕಾಸರಗೋಡು ಬಿಎಂ ಶಾಲೆಯು ತೃತೀಯ ಬಹುಮಾನವಾಗಿ ರೂ.10ಸಾವಿವರನ್ನು ಪಡೆದುಕೊಂಡಿದೆ.
ಬೆಳಿಗ್ಗೆ ಸ್ಪರ್ಧೆಯನ್ನು ಕ್ಯಾಂಪ್ಕೋ ಸಂಸ್ಥೆಯ ಎಂ.ಡಿ ಕೃಷ್ಣಕುಮಾರ್ ಉದ್ಘಾಟಿಸಿದರು. ಬಳಿಕ ಸ್ಪರ್ಧಾ ಕಾರ್ಯಕ್ರಮ ಆರಂಭಗೊಂಡಿದ್ದು, ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪೇಪರ್ ಶೀಟ್ ಸ್ಥಳದಲ್ಲೇ ನೀಡಲಾಯಿತು. ಪ್ರಥಮ ಸುತ್ತಿನಲ್ಲಿ 20 ಪ್ರಶ್ನೆಗಳನ್ನು ಸ್ಕ್ರೀನ್ ಮೂಲಕ ಡಿಸ್‌ಪ್ಲೆ ಮಾಡಲಾಯಿತು. ವಿದ್ಯಾರ್ಥಿಗಳು ಉತ್ತರಿಸಿದರು. ಬಳಿಕ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಎರಡನೇ ಸುತ್ತಿಗೆ ಎಂಟು ಶಾಲೆ ಆಯ್ಕೆಯಾಗಿದ್ದು 16 ಮಂದಿ ಪಾಲ್ಗೊಂಡರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಅವರು ವಿಜೇತ ಶಾಲೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಇದೇ ಸಂದರ್ಭ ಅವರು ಕ್ಯಾಂಪ್ಕೋ ಚಾಕಲೇಟ್ ನ ಅಧಿಕೃತ ವಿತರಕರ ಸಭೆಯನ್ನು ಉದ್ಘಾಟಿಸಿದರು. ಕ್ಯಾಂಪ್ರೋ ಮ್ಯಾನೆಜಿಂಗ್ ಡೈರೆಕ್ಟರ್ ಎಚ್.ಎಂ.ಕೃಷ್ಣ ಕುಮಾರ್ ಶುಭ ಹಾರೈಸಿದರು. ನಿರ್ದೇಶಕರಾದ ರಾಘವೇಂದ್ರ ಭಟ್ ಕೆದಿಲ, ಕೃಷ್ಣಕುಮಾರ್ ಮಡ್ತಿಲ, ಮಹೇಶ್ ಚೌಟ, ಕ್ಯಾಂಪ್ಕೋ ಜಿ.ಎಮ್, ರೇಷ್ಮಾ ಮಲ್ಯ, ಎಜಿಎಂ ಉದಯ ಕುಮಾರ್ ರೈ, ಫ್ಯಾಕ್ಟರಿ ಡಿಜಿಎಮ್ ಶ್ಯಾಮ್ ಪ್ರಸಾದ್, ಎಸ್‌ಎಮ್ ಚಂದ್ರಹಾಸ ಎಂ.ಡಿ., ಮಾರ್ಕೆಟಿಂಗ್ ವಿಭಾಗದ ಜತ್ತಪ್ಪ, ಭವಾನಿ ಶಂಕರ್, ಸತೀಶ್ ಕುಲಾಲ್ ಉಪಸ್ಥಿತರಿದ್ದರು. ಭಟ್ಸ್ ಕಂಪೆನಿ ಮಂಗಳೂರು ಇದರ ಮಾರ್ಕೆಟಿಂಗ್ ವಿಭಾಗದ ಆಂಡ್ರಿಯಾ ಹಾಗೂ ನಿತಿನ್ ಕ್ವಿಝ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಕ್ವಿಝ್ ಸ್ಪರ್ಧೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿಗಳ ಹೆತ್ತವರಿಗೆ ಫ್ಯಾಕ್ಟರಿ ವೀಕ್ಷಣೆಗೆ ಅವಕಾಶ ಕಲ್ಪಿಸಲಾಯಿತು.