





ಹೆಸರಾಂತ ಇಳಕಲ್ ಸೀರೆಯ ಸಹಿತ ಫ್ಯಾಶನ್ ಪ್ರಿಯರ ಅಚ್ಚುಮೆಚ್ಚಿನ ಸಿದ್ಧ ಉಡುಪಿನ ಸಹಿತ ನೂರಾರು ಬಗೆಯ ಮಳಿಗೆಗಳು…


ಸುಮಾರು 70 ಕ್ಕೂ ಅಧಿಕ ಮಳಿಗೆಗಳನ್ನು ಅಚ್ಚುಕಟ್ಟಾಗಿ ಆಯೋಜನೆ ಮಾಡಿರುವ ಬೆನಕ ಇವೆಂಟ್ಸ್ ಸಂಸ್ಥೆ…





ಪುತ್ತೂರು: ಕಳೆದ 5 ವರ್ಷದಲ್ಲಿ ಬ್ರಹ್ಮಾವರದಲ್ಲಿ ಹಲಸಿನ ಮೇಳ ಆಯೋಜನೆ ಮೂಲಕ ಪ್ರಸಿದ್ದಿ ಪಡೆದಿರುವ ಬೆನಕ ಇವೆಂಟ್ಸ್ ಕುಂದಾಪುರ ಕಳೆದ ಕೆಲ ಸಮಯಗಳಿಂದ ತನ್ನ ಸೇವೆಯನ್ನು ಹೊರ ಜಿಲ್ಲೆಗಳಿಗೂ ವಿಸ್ತರಿಸಿ , ಮತ್ತಷ್ಟು ಪ್ರಸಿದ್ಧಿಯಾಗಿ ಸ್ವಾದಿಷ್ಟ ಭರಿತ ತಿನಿಸುಗಳ ತಯಾರಿಕೆಯಲ್ಲಿ ಭಟ್ಕಳ, ಸಾಗರ, ಕುಮಟಾ ಹಾಗೂ ಅಂಕೋಲಾದಲ್ಲೂ ಯಶಸ್ವಿಯಾಗಿ ಕಂಡಿದ್ದು, ಇದೀಗ
ಸ್ವಾದಿಷ್ಟ ಭರಿತ ಆಹಾರ ಮೇಳ ಮತ್ತು ಸ್ವದೇಶಿ ಮೇಳವನ್ನು 4 ದಿನಗಳ ಕಾಲ ಇಲ್ಲಿನ ಅರುಣ ಕಲಾಮಂದಿರದಲ್ಲಿ ಆಯೋಜನೆ ಮಾಡಿದ್ದು , ಅ.31ರಂದು ಮೇಳಕ್ಕೆ ಚಾಲನೆ ಸಿಕ್ಕಿದ್ದು, ಮೊದಲ ದಿನದಿಂದಲೇ ಶಾಪಿಂಗ್ ಪ್ರಿಯರು ಮಳಿಗೆಗೆ ಆಗಮಿಸಿ, ಮೆಚ್ಚಿನ ಸಾಮಾಗ್ರಿಗಳನ್ನು ಕೊಂಡುಕೊಳ್ಳೋ ಮೂಲಕ, ಸ್ವದೇಶಿ ಉತ್ಪನ್ನಗಳನ್ನು ಪ್ರೀತಿಸುವ ಜೊತೆಗೆ ಬೆಳೆಸುವ ಕಾರ್ಯ ಮಾಡಿದ್ದಾರೆ ಮಾತ್ರವಲ್ಲದೇ ಮೇಳಕ್ಕೆ ಪೂರ್ಣ ಸಹಕಾರ, ಬೆಂಬಲ ನೀಡಿದ್ದಾರೆ.

ಮಳಿಗೆಯಲ್ಲಿ ನೈಸರ್ಗಿಕ ಸೌಂದರ್ಯವರ್ಧಕಗಳು, ಖಾದಿ ಉತ್ಪನ್ನಗಳು, ನಿತ್ಯ ಬಳಕೆ ವಸ್ತುಗಳು, ಸಾವಯವ ಉತ್ಪನ್ನಗಳು, ಸಿರಿಧಾನ್ಯಗಳು, ಆಯುರ್ವೇದ ಉತ್ಪನ್ನಗಳು, ಫ್ಯಾನ್ಸಿ ಸೀರೆಗಳು, ರೆಡಿಮೇಡ್ ಬಟ್ಟೆಗಳು, ಇಳಕಲ್ ಸೀರೆಗಳು, ಮಕ್ಕಳ ಉಡುಪುಗಳು, ಹ್ಯಾಂಡ್ ಮೇಡ್ ಬ್ಲೌಸ್ ಗಳು, ಅಲಂಕಾರಿಕ ವಸ್ತುಗಳು, ಚನ್ನಪಟ್ಟಣದ ಬೊಂಬೆಗಳು, ಹಪ್ಪಳ ಸಂಡಿಗೆಗಳು,
ಹರ್ಬಲ್ ಹೇರ್ ಆಯಿಲ್, ಹೋಂ ಮೇಡ್ ಕ್ಯಾಂಡಿ, ಉಪ್ಪಿನಕಾಯಿ, ಐಸ್ ಕ್ರೀಂ, ಉತ್ತರ, ದಕ್ಷಿಣ ಭಾರತದ ಆಹಾರಗಳು, ಇಷ್ಟು ಮಾತ್ರವಲ್ಲದೆ ಹಲಸು ಮತ್ತು ಮಾವಿನ ಗಿಡಗಳು ಹೂವಿನ ಗಿಡಗಳು ತರಕಾರಿ ಗಿಡಗಳು, ತರಕಾರಿ ಬೀಜದ ಅಂಗಡಿ ಸೇರಿ ಸುಮಾರು 70 ಮಳಿಗೆಗಳು ಕಾರ್ಯನಿರ್ವಹಿಸುತ್ತಿದ್ದು ನ.3ರಂದು ಮೇಳ ಕೊನೆಯಾಗಲಿದೆಯೆಂದು ಆಯೋಜಕರು ಮಾಹಿತಿ ನೀಡಿದ್ದಾರೆ.











