ವಿದ್ಯಾಭಾರತಿ ಜಿಲ್ಲಾಮಟ್ಟದ ಗಣಿತ ವಿಜ್ಞಾನ ಮೇಳದಲ್ಲಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಗೆ ಹಲವು ಪ್ರಶಸ್ತಿ

0

ಪುತ್ತೂರು : ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ವಿದ್ಯಾಭಾರತಿ ಜಿಲ್ಲಾ ಮಟ್ಟದ ಗಣಿತ ವಿಜ್ಞಾನ ಹಾಗೂ ಸಂಸ್ಕೃತಿ ಜ್ಞಾನ ಪರಿಚಯ ಸ್ಪರ್ಧಾಮೇಳದಲ್ಲಿ ಬೆಟ್ಟoಪಾಡಿ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿರುತ್ತಾರೆ.


ಶಿಶುವರ್ಗದಲ್ಲಿ ಸಾರಿಗೆ ಆಧಾರಿತ ಪ್ರತಿರೂಪ ಮಾದರಿ ತಯಾರಿಕೆಯಲ್ಲಿ ಶಿವಪ್ರಸಾದ್ ಶೆಟ್ಟಿ ಕಾಟುಕುಕ್ಕೆ ಹಾಗೂ ಪವಿತ್ರ ಇವರ ಪುತ್ರಿ ಕುಮಾರಿ ಇಹಾನಿ ಶೆಟ್ಟಿ 4ನೇ ತರಗತಿ ದ್ವಿತೀಯ ಸ್ಥಾನ, ಬಾಲ ವರ್ಗದಲ್ಲಿ ತ್ಯಾಜ್ಯ ವಸ್ತು ನಿರ್ವಹಣೆ ಆಧಾರಿತ ಪ್ರತಿರೂಪ ಮಾದರಿ ತಯಾರಿಕೆಯಲ್ಲಿ ದಿನೇಶ್ ಮರಡಿತ್ತಾಯ ಗುಮ್ಮಟಗದ್ದೆ ಹಾಗೂ ಸಂಧ್ಯಾ ಇವರ ಪುತ್ರ ಹೃಷಿಕೇಶ 6ನೇ ತರಗತಿ ತೃತೀಯ ಸ್ಥಾನ, ಕಿಶೋರವರ್ಗದ -ಚಲನೆ ಆಧಾರಿತ ಪ್ರತಿರೂಪ ತಯಾರಿಕೆಯಲ್ಲಿ ಶಿವರಾಮ ರೈ ಪಂಬತಡ್ಕ ಹಾಗೂ ಹಿಮಲಾಕ್ಷಿ ರೈ ಇವರ ಪುತ್ರಿ ಹಂಶಿತಾ 9ನೇ ತರಗತಿ ತೃತೀಯ ಸ್ಥಾನ, ಖಾದ್ಯ ವಸ್ತು ಸಂರಕ್ಷಣ ಆಧಾರಿತ ಪ್ರತಿರೂಪ ಮಾದರಿ ತಯಾರಿಕೆಯಲ್ಲಿ ಪ್ರವೀಣ್ ಶೆಟ್ಟಿ ಸೂರಂಬೈಲು ಹಾಗೂ ಪ್ರತಿಭಾ ಶೆಟ್ಟಿ ಅವರ ಪುತ್ರಿ ತನ್ವಿ ಶೆಟ್ಟಿ 9ನೇ ತರಗತಿ ದ್ವಿತೀಯ ಸ್ಥಾನ, ನವೀಕರಿಸಬಹುದಾದ ಸಂಪನ್ಮೂಲಗಳ ಆಧಾರಿತ ಪ್ರತಿರೂಪ ತಯಾರಿಕೆಯಲ್ಲಿ ಅಕ್ಷತಾ ಹಾಗೂ ಗೋಪಾಲಕೃಷ್ಣ ಭಟ್ ಇವರ ಪುತ್ರಿ ಅನ್ವಿತ 9ನೇ ತರಗತಿ ಪ್ರಥಮ ಸ್ಥಾನ, ಶಿಶುವರ್ಗದ ಮಾಪನ ಹಾಗೂ ನಾಣ್ಯಗಳಿಗೆ ಸಂಬಂಧಿಸಿದ ಪ್ರದರ್ಶನ ಮತ್ತು ಜಾಮಿತಿಯ ಆಕೃತಿಗಳ ಗುಣ ಧರ್ಮಗಳ ಆಧಾರಿತ ಪ್ರದರ್ಶನದಲ್ಲಿ ಅಜಿತ್ ರೈ ನುಳಿಯಾಲು ಹಾಗೂ ಶರ್ಮಿಳ ದಂಪತಿಯ ಪುತ್ರಿ ಆದಿತಿ ರೈ 4ನೇ ತರಗತಿ ತೃತೀಯ ಸ್ಥಾನ, ಬಾಲ ವರ್ಗದ ಸಮ ಬಹುಜಾಕೃತಿಗಳ ಗುಣ ಧರ್ಮಗಳ ಮೇಲೆ ಆಧರಿಸಿದ ಪ್ರದರ್ಶನದಲ್ಲಿ ರವಿಶಂಕರ ರೈ ಹಾಗೂ ವಿಜಯಲಕ್ಷ್ಮಿ ರೈ ಕೋಟೆ ಇವರ ಪುತ್ರಿ ಧನ್ವಿರೈ 9ನೇ ತರಗತಿ ದ್ವಿತೀಯ ಸ್ಥಾನ, ಕಿಶೋರ ವರ್ಗದ ತ್ರಿಕೋನಮಿತಿ ಆಧಾರಿತ ಪ್ರತಿರೂಪ ತಯಾರಿಕೆಯಲ್ಲಿ ಚಿದಾನಂದ ರೈ ಗುಮ್ಮಟಗದ್ದೆ ಹಾಗೂ ಭಾರತಿ ಇವರ ಪುತ್ರಿ ಹರ್ಷ 10ನೇ ತರಗತಿ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರಿಗೆ ಶಿಕ್ಷಕರಾದ ಸಂಧ್ಯಾ, ಕೃತಿಕ, ಪ್ರೀತಿಕ, ಪ್ರವೀಣಕುಮಾರಿ, ವಿಪಿನ್ ಮಾರ್ಗದರ್ಶನ ನೀಡಿರುತ್ತಾರೆ ಎಂದು ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ರಂಗನಾಥ ರೈ ಗುತ್ತು ಹಾಗೂ ಮುಖ್ಯ ಗುರು ರಾಜೇಶ್ ಎನ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here