ಪುತ್ತೂರು: ಶಿಕ್ಷಣ ಇಲಾಖೆ ಪುತ್ತೂರು ಮತ್ತು ಸಂತ ಫಿಲೋಮಿನ ಪ್ರೌಢ ಶಾಲೆ, ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ತಾಲೂಕು ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಆ.24 ಆಫಿಸರ್ಸ್ ಕ್ಲಬ್ ದರ್ಬೆಯಲ್ಲಿ ನಡೆಯಿತು.
ಈ ಪಂದ್ಯಾಟದಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ 14ರ ವಯೋಮಾನದ ಆದ್ಯತ್.ಆರ್(6ನೇ), ಇಶಾನ್..ಕೆ(7ನೇ), ಜಶ್.ಎಚ್.ಬಿ(6ನೇ), ಹಿತನ್ ಕುಮಾರ್ (7ನೇ), ಲತನ್.ಟಿ.ಎಸ್ (7ನೇ) ತರಗತಿಯ ಬಾಲಕರ ತಂಡ ಪ್ರಥಮ ಸ್ಥಾನ ಗಳಿಸಿ, ಸೆ.11ರಂದು ಮಂಗಳೂರಿನ ಫಾದರ್ ಮುಲ್ಲರ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ ಎಂದು ಶಾಲಾ ಮುಖ್ಯೋಪಾಧ್ಯಾಯರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.