ಸವಣೂರು: ಹಿಂದೂ ಜಾಗರಣ ವೇದಿಕೆ ಸವಣೂರು ಇದರ ವತಿಯಿಂದ 25ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ರಕ್ಷಾ ಬಂಧನ ಕಾರ್ಯಕ್ರಮ ಆ.31ರಂದು ಸವಣೂರು ಗ್ರಾಮದ ಮುಗೇರು ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಸಂಜೆ 5 ರಿಂದ ಸತ್ಯನಾರಾಯಣ ಪೂಜೆ,ಮುಗೇರು ಶ್ರೀ ಮಹಾವಿಷ್ಣು ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ, ಸಂಜೆ 7ಕ್ಕೆ ಮಂಗಳಾರತಿ ಮತ್ತು ಪ್ರಸಾದ ವಿತರಣೆ, ರಕ್ಷಾ ಬಂಧನ ಕಾರ್ಯಕ್ರಮ ನಡೆಯಲಿದೆ. 7.30ಕ್ಕೆ ನಡೆಯುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಹಿಂದೂ ಜಾಗರಣ ವೇದಿಕೆಯ ಪುತ್ತೂರು ನಗರ ಘಟಕದ ಗೌರವಾಧ್ಯಕ್ಷ ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು ದೀಪ ಪ್ರಜ್ವಲನೆ ಮಾಡುವರು.
ಅಧ್ಯಕ್ಷತೆಯನ್ನು ಮುಗೇರು ದೇವಸ್ಥಾನದ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಕಿನಾರ ವಹಿಸುವರು.ದೇವರ ಗುಡ್ಡೆ ಶ್ರೀ ವೀರಾಂಜನೇಯ ಗೆಳೆಯರ ಬಳಗ ಸೇವಾ ಟ್ರಸ್ಟ್‌ನ ಸದಸ್ಯ ವೆಂಕಟೇಶ್ ಕೊಯಕ್ಕುಡೆ ದಿಕ್ಸೂಚಿ ಭಾಷಣ ಮಾಡುವರು.ಅತಿಥಿಗಳಾಗಿ ಸವಣೂರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಶಿವರಾಮ ಗೌಡ ಮೆದು, ಅಕ್ರಮ ಸಕ್ರಮ ಸಮಿತಿ ಸದಸ್ಯ ರಾಕೇಶ್ ರೈ ಕೆಡೆಂಜಿ, ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು,ಸವಣೂರು ಪ್ರಾ.ಕೃ.ಪ.ಸ.ಸಂಘದ ಉಪಾಧ್ಯಕ್ಷ ತಾರಾನಾಥ ಕಾಯರ್ಗ ,ಹಿಂ.ಜಾ.ವೇ.ಯ ಪುತ್ತೂರು ತಾಲೂಕು ಸಮಿತಿ ಸದಸ್ಯ ಸ್ವಸ್ತಿಕ್ ಮೇಗಿನಗುತ್ತು ಪಾಲ್ಗೊಳ್ಳುವರು ಎಂದು ಹಿಂ.ಜಾ.ವೇ.ಸವಣೂರು ಘಟಕದ ಗೌರವಾಧ್ಯಕ್ಷ ಗಿರಿಶಂಕರ ಸುಲಾಯ, ಅಧ್ಯಕ್ಷ ಶ್ರೀಧರ ಇಡ್ಯಾಡಿ ತಿಳಿಸಿದ್ದಾರೆ.