ಕಾಣಿಯೂರು: ಬೆಳಂದೂರು ಗ್ರಾ.ಪಂ.ವತಿಯಿಂದ ದ.ಕ.ಜಿ.ಪಂ., ಕಡಬ ತಾ.ಪಂ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಕರ್ನಾಟಕ ಸರಕಾರ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕಾರ್ಯಕ್ರಮ ಬೆಳಂದೂರು ಗ್ರಾ.ಪಂ. ಆವರಣದಲ್ಲಿ ಆ.30 ರಂದು ನಡೆಯಿತು. ಕಡಬ ತಾಲೂಕು ಪಶು ವೈದ್ಯಾಧಿಕಾರಿ ಡಾ. ಅಜಿತ್ ನೊಡೆಲ್ ಅಧಿಕಾರಿಯಾಗಿದ್ದರು.
ಕಾರ್ಯಕ್ರಮದಲ್ಲಿ ಬೆಳಂದೂರು ಗ್ರಾ.ಪಂ. ಅಧ್ಯಕ್ಷೆ ಪಾರ್ವತಿ ಮರಕ್ಕಡ, ಉಪಾಧ್ಯಕ್ಷ ಜಯಂತ ಅಬೀರ, ಸದಸ್ಯರಾದ ಲೋಹಿತಾಕ್ಷ ಕೆಡೆಂಜಿಕಟ್ಟ, ತೇಜಾಕ್ಷಿ ಕೊಡಂಗೆ, ವಿಠಲ ಗೌಡ ಅಗಳಿ, ಪ್ರವೀಣ್ ಕೆರೆನಾರು, ಮೋಹನ್ ಅಗಳಿ, ಉಮೇಶ್ವರಿ ಅಗಳಿ, ಗೌರಿ ಮಾದೋಡಿ, ಗೀತಾ ಕುವೆತ್ತೋಡಿ, ಹರಿಣಾಕ್ಷಿ ಬನಾರಿ, ಕುಸುಮಾ ಅಂಕಜಾಲು, ತಾರಾ ಅನ್ಯಾಡಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ನಾರಾಯಣ ಗೌಡ ಬೈತಡ್ಕ, ನಝೀರ್ ದೇವಸ್ಯ, ತಾ. ಪಂ ಮಾಜಿ ಉಪಾಧ್ಯಕ್ಷರಾದ ಶೀನಪ್ಪ ಗೌಡ ಬೈತಡ್ಕ, ಲಲಿತಾ ಈಶ್ವರ, ಸಂಪತ್ ಕುಮಾರ್ ರೈ ಪಾತಾಜೆ, ಪ್ರಭಾರ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾರಾಯಣ್, ಲೆಕ್ಕ ಸಹಾಯಕಿ ಸುನಂದ, ಸಿಬ್ಬಂದಿಗಳಾದ ಗೀತಾ, ಮಮತಾ, ಹರ್ಷಿತ್ ಕೂರ, ಸಂತೋಷ್, ಹಾಗೂ ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಸಂಜೀವಿನಿ ಒಕ್ಕೂಟದ ಸದಸ್ಯರು, ಫಲಾನುಭವಿಗಳು ಪಾಲ್ಗೊಂಡರು.