ತಾಲೂಕು ಮಟ್ಟದ ಬಾಡ್ಮಿಂಟನ್ ನಲ್ಲಿ ಸುದಾನ ಶಾಲೆಯ ಸಾನ್ವಿ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪುತ್ತೂರು: ಪುತ್ತೂರಿನ ಆಫೀಸರ್ಸ್ ಕ್ಲಬ್ ನಲ್ಲಿ ಆ.25ಕ್ಕೆ ನಡೆದ ತಾಲೂಕು ಮಟ್ಟದ ಪ್ರೌಢ ಶಾಲಾ ಬಾಲಕರ ವಿಭಾಗದ ಶಟಲ್ ಪಂದ್ಯಾಟದಲ್ಲಿ ಸುದಾನ ವಸತಿ ಶಾಲೆಯ ವಿದ್ಯಾರ್ಥಿಗಳಾದ ಅಕ್ಷಯ್ (10ನೇ), ಧನ್ವಿತ್ (10ನೇ), ಪ್ರತೋಷ್ (8ನೇ), ನಂದನ್ (10ನೇ), ಅಕ್ಷತ್ (10ನೇ) ರವರು ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಮತ್ತು 14 ವರ್ಷ ಪ್ರಾಯದ ಪ್ರಾಥಮಿಕ ಬಾಲಕಿಯರ ವಿಭಾಗದಲ್ಲಿ ಸುದಾನ ಶಾಲಾ ತಂಡದ ಮೋನಿಕಾ (7ನೇ), ಹನಾ ಫಾತಿಮಾ (7ನೇ), ಮಾನ್ವಿ (7ನೇ), ಚೈತ್ನಾ(7ನೇ) ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ. ಪ್ರಾಥಮಿಕ ಶಾಲಾ ಬಾಲಕಿಯರ ವೈಯಕ್ತಿಕ ವಿಭಾಗದಲ್ಲಿ ಸಾನ್ವಿ (8ನೇ) ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ವಿಜೇತರನ್ನು ಶಾಲಾ ಸಂಚಾಲಕ ವಿಜಯ ಹಾರ್ವಿನ್ ಮತ್ತು ಮುಖ್ಯ ಶಿಕ್ಷಕಿ ಶೋಭಾ ನಾಗರಾಜ್ ಅಭಿನಂದಿಸಿದ್ದಾರೆ. ಶಾಲಾ ದೈಹಿಕ ಶಿಕ್ಷಕರಾದ ಪುಷ್ಪರಾಜ್ ಮತ್ತು ನವೀನ್ ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.

LEAVE A REPLY

Please enter your comment!
Please enter your name here