ಚಿಕ್ಕಮುಡ್ನೂರು: 14ರ ವಯೋಮಾನದ ಪ್ರಾಥಮಿಕ ಶಾಲಾ ವಿಭಾಗದ ಬಾಲಕ-ಬಾಲಕಿಯರ ನಗರ ವಲಯ ಮಟ್ಟದ ಕಬಡ್ಡಿ ಪಂದ್ಯಾಟ

0

ಪುತ್ತೂರು: ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಛೇರಿ ಪುತ್ತೂರು ಇವರ ಸಹಯೋಗದೊಂದಿಗೆ ಚಿಕ್ಕಮುಡ್ನೂರು ದ.ಕ.ಜಿ.ಪಂ.ಹಿ.ಪ್ರಾ. ಶಾಲೆಯಲ್ಲಿ 2023-24ನೇ ಸಾಲಿನ 14ರ ವಯೋಮಾನದ ಪ್ರಾಥಮಿಕ ಶಾಲಾ ವಿಭಾಗದ ಬಾಲಕ-ಬಾಲಕಿಯರ ಪುತ್ತೂರು ನಗರ ವಲಯ ಮಟ್ಟದ ಕಬಡ್ಡಿ ಪಂದ್ಯಾಟವು ಆ.28ರಂದು ನಡೆಯಿತು.
ಕಬಡ್ಡಿ ಪಂದ್ಯಾಟದ ಉದ್ಘಾಟನೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಸ್ಮಿತಾ ನೆರವೇರಿಸಿ ಶುಭ ಹಾರೈಸಿದರು. ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುಂದರ ಗೌಡ ಇವರು ಪಂದ್ಯಾಟದ ಪೂರ್ವ ತಯಾರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಎಸ್.ಡಿ.ಎಂ.ಸಿ. ಅಧ್ಯಕ್ಷರಿಗೆ ಹೂ-ಗುಚ್ಚ ನೀಡಿ ಗೌರವಿಸಿದರು. ಸಂಪತ್ ಕುಮಾರ್ ಜೈನ್ ಶುಭ ಹಾರೈಸಿದರು. ಎಸ್ ಡಿಎಂಸಿ ಅಧ್ಯಕ್ಷರು ಅಧ್ಯಕ್ಷೀಯ ಮಾತುಗಳನ್ನಾಡಿದರು.
ಬನ್ನೂರು ಗ್ರಾಮ ಪಂಚಾಯತಿನ ನೂತನ ಅಧ್ಯಕ್ಷರಾಗಿರುವ ಸ್ಮಿತಾ, ಮಾಜಿ ಅಧ್ಯಕ್ಷ ಜಯ, ಸದಸ್ಯರಾದ ತಿಮ್ಮಪ್ಪ ಪೂಜಾರಿ, ರಾಘವೇಂದ್ರ ಎಸ್.ಡಿ.ಎಂ.ಸಿ. ಅಧ್ಯಕ್ಷ ಕೆ. ನಳಿನಿ ರಾಜೇಶ್ ಇವರ ಗೌರವ ಉಪಸ್ಥಿತಿಯಲ್ಲಿ ದಾನಿಗಳಾದ ಸಂಪತ್ ಕುಮಾರ್ ಜೈನ್, ಚಿದಾನಂದ ರೈ, ಹಿರಿಯ ವಿದ್ಯಾರ್ಥಿಗಳಾದ ನರೇಂದ್ರ ಪಡಿವಾಳ್, ದೈಹಿಕ ಶಿಕ್ಷಣ ಪರಿವೀಕ್ಷಕರಾದ ಸುಂದರ ಗೌಡ, ದೈಹಿಕ ಶಿಕ್ಷಣ ಶಿಕ್ಷಕರಾದ ಸ್ಟ್ಯಾನಿ ಪ್ರವೀಣ್ ಮಸ್ಕರೇನ್ಹಸ್, ಸಮೂಹ ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಅಶ್ರಫ್, ಶಾಲಾ ಮುಖ್ಯಗುರು ಪುಷ್ಪಾ ಕೆ. ಉಪಸ್ಥಿತರಿದ್ದರು.
ಶಾಲಾ ಮಕ್ಕಳು ಪ್ರಾರ್ಥಿಸಿದರು. ಶಾಲಾ ಮುಖ್ಯಗುರು ಪುಷ್ಪಾ ಕೆ. ಸ್ವಾಗತಿಸಿ, ಅತಿಥಿ ಶಿಕ್ಷಕಿ ಅಶ್ವಿನಿ ಧನ್ಯವಾದವಿತ್ತರು. ಸಂಪನ್ಮೂಲ ವ್ಯಕ್ತಿ ಮಹಮ್ಮದ್ ಅಶ್ರಫ್ ನಿರೂಪಿಸಿದರು. ಅತಿಥಿ ಶಿಕ್ಷಕಿ ಮೋಹಿನಿ ಗೌರವ ಶಿಕ್ಷಕಿ ವಸಂತಿ ಕಾರ್ಯಕ್ರಮದಲ್ಲಿ ಸಹಕರಿಸಿದರು. ಅಡುಗೆ ಸಿಬ್ಬಂದಿಗಳಾದ ಜಯಶ್ರೀ ಹಾಗೂ ಕಮಲ ಸಹಕರಿಸಿದರು.
ಸಮಾರೋಪ ಕಾರ್ಯಕ್ರಮದ ವೇದಿಕೆಯಲ್ಲಿ ಸ್ಮಿತಾ, ಜಯ, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶೀನಪ್ಪ ಕುಲಾಲ್, ತಿಮ್ಮಪ್ಪ ಪೂಜಾರಿ, ದಾನಿಗಳಾದ ಚಿದಾನಂದ ರೈ, ಅಣ್ಣಿ ಪೂಜಾರಿ, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಕೆ. ನಳಿನಿ ಉಪಾಧ್ಯಕ್ಷ ಬಾಲಕೃಷ್ಣ, ಮುಖ್ಯಗುರುಗಳು ಪುಷ್ಪಾ ಕೆ., ಮಕ್ಕಳನ್ನು ತರಬೇತಿಗೊಳಿಸಿದ ಮೋಕ್ಷಿತ್ ಹಾಗೂ ರೋಹಿತ್, ಅಶ್ವ ಫ್ರೆಂಡ್ಸ್‌ನ ಅಧ್ಯಕ್ಷ ಅಕ್ಷಯ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಂದ್ಯಾಟದ ಬಾಲಕರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಲ್ನಾಡು, ದ್ವಿತೀಯ ಸ್ಥಾನವನ್ನು ಸಂತ ಫಿಲೋಮಿನಾ ಶಾಲೆ ಪುತ್ತೂರು ಇವರು ಪಡೆದರು. ಬಾಲಕಿಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಲಿಟ್ಲ್ ಫ್ಲವರ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು, ದ್ವಿತೀಯ ಸ್ಥಾನವನ್ನು ಮೊರಾರ್ಜಿ ದೇಸಾಯಿ ವಸತಿ ಬಲ್ನಾಡು ಶಾಲೆಯ ವಿದ್ಯಾರ್ಥಿನಿಯರು ಪಡೆದರು.
ಬೆಳಗ್ಗಿನ ಉಪಾಹಾರಕ್ಕೆ ಇಡ್ಲಿಯನ್ನು ಸುರೇಂದ್ರ ಪೂಜಾರಿ ಅಡ್ಲಿಮಜಲ್ ಹಾಗೂ ಗಣೇಶ ಹೊಸಹೊಕ್ಲು, ಚಾ ಹಾಗೂ ಸಾಂಬಾರನ್ನು ಶಾಲಾ ಎಸ್ಡಿಎಂಸಿ ವತಿಯಿಂದ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಬನ್ನೂರು ಗ್ರಾಮ ಪಂಚಾಯತ್ ವತಿಯಿಂದ, ಪಾಯಸದ ವ್ಯವಸ್ಥೆಯನ್ನು ಶ್ರೀಧರ್ ಸೇರಿಗಾರ್ ಇವರ ಸ್ಮರಣಾರ್ಥ ಮನೆಯವರಿಂದ, ಮಜ್ಜಿಗೆ ಹಾಗೂ ಉಪ್ಪಿನಕಾಯಿಯನ್ನು ಪುತ್ತಿಲ ಪರಿವಾರ, ಸಾಯಂಕಾಲದ ಚಹಾ ಬಿಸ್ಕೆಟ್ ವ್ಯವಸ್ಥೆಯನ್ನು ಗಿರಿಜ ಅನಂತಿಮಾರು ಇವರುನೀಡಿ ಸಹಕರಿಸಿದರು. ವಿಜೇತರಿಗೆ ಟ್ರೋಫಿ ವ್ಯವಸ್ಥೆಯನ್ನು ಚಿದಾನಂದ ರೈವರು ನೀಡಿ ಸಹಕರಿಸಿರುತ್ತಾರೆ.
ಹೆಣ್ಣು ಮಕ್ಕಳ ಸಮವಸ್ತ್ರವನ್ನು ಗಣೇಶ್ ಕೌಕ್ರಾಡಿ ಹಾಗೂ ಗಂಡು ಮಕ್ಕಳ ಸಮವಸ್ತ್ರವನ್ನು ಅಶ್ವ ಫ್ರೆಂಡ್ಸ್ ವತಿಯಿಂದ ವಿತರಿಸಲಾಯಿತು. ಊರ ದಾನಿಗಳು, ಸಂಘ ಸಂಸ್ಥೆಗಳ ಅಧ್ಯಕ್ಷರು/ಸದಸ್ಯರು, ಹಿರಿಯ ವಿದ್ಯಾರ್ಥಿಗಳು ಅಶ್ವ ಫ್ರೆಂಡ್ಸ್ ಬಳಗ ಆರೋಗ್ಯ ಸಹಾಯಕಿ ಸಿ.ಹೆಚ್.ಓ., ಅಂಗನವಾಡಿ, ಆಶಾ ಕಾರ್ಯಕರ್ತೆ, ಎಸ್.ಡಿ.ಎಂ.ಸಿ. ಸರ್ವಸದಸ್ಯರು, ಪೋಷಕರು, ಊರವರು, ಶಾಲಾ ಶಿಕ್ಷಕ ವೃಂದ ಅಕ್ಷರ ದಾಸೋಹ ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here