ನಾರಾಯಣ ಗುರುಗಳು ವಿಶ್ವ ಕಂಡ ಶ್ರೇಷ್ಠ ಮಾನತಾವಾದಿ- ಕಮಲೇಶ್
ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರುಗಳು ವಿಶ್ವಕಂಡ ಶ್ರೇಷ್ಠ ದಾರ್ಶನಿಕ, ಚಿಂತಕ, ಮಾನತಾವಾದಿಯಾಗಿದ್ದಾರೆ ಎಂದು ಮುಂಡೂರು ಗ್ರಾ.ಪಂ ಸದಸ್ಯ ಕಮಲೇಶ್ ಎಸ್.ವಿ ಮುಂಡೂರುರವರು ಹೇಳಿದರು. ಅವರು ಪುತ್ತೂರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 169ನೇ ಜನ್ಮದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡುತ್ತಿದ್ದರು.
ಭಾರತದ ಸಂವಿಧಾನದಲ್ಲಿ ಹಿಂದುಳಿದವರಿಗೆ ದಲಿತ ವರ್ಗದವರಿಗೆ, ಅಸ್ಪೃಶ್ಯರಿಗೆ, ಮಹಿಳೆಯರಿಗೆ ಉತ್ತಮ ಸ್ಥಾನಮಾನ ಸಿಗಬೇಕಾದರೆ ಅದು ನಾರಾಯಣ ಗುರುಗಳ ತತ್ವ ಚಿಂತನೆಗಳ ಪ್ರಭಾವವಾಗಿದೆ ಎಂದು ಅವರು ಹೇಳಿದರು. ನಾರಾಯಣ ಗುರುಗಳ ತತ್ವ ಸಿದ್ಧಾಂತಗಳನ್ನು ಕಾಂಗ್ರೆಸ್ ಪಕ್ಷವು ಅದನ್ನು ಅಳವಡಿಸಿಕೊಂಡು ಬಂದಿದ್ದು ಅವರ ಸುಧೀರ್ಘ ಇತಿಹಾಸದ ಬಗ್ಗೆ ಮಾತನಾಡಲು ಯಾರಿಗಾದರೂ ನೈತಿಕತೆ ಇದ್ದರೆ ಅದು ಕಾಂಗ್ರೆಸ್ ಪಕ್ಷಕ್ಕೆ ಮಾತ್ರವಾಗಿದೆ ಎಂದು ಅವರು ಹೇಳಿದರು.
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ್ ರೈ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ಬಳಿಕ ಮಾತನಾಡಿದ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂಬ ಸಂದೇಶಗಳನ್ನು ಸಾರಿದ ಮಹಾನ್ ಚೇತನ. ಅವರ ತತ್ವ ಸಿದ್ಧಾಂತಗಳನ್ನು ನಾವು ಯಾವಾಗಲೂ ನೆನೆಸಿಕೊಂಡು ಕಾರ್ಯ ಪ್ರವೃತ್ತರಾಗಬೇಕಾಗಿದೆ. ನಾರಾಯಣ ಗುರುಗಳು ಸಮಾಜದ ಕಟ್ಟಕಡೆಯ ಮನುಷ್ಯನನ್ನು ಕೂಡ ಉದ್ಧಾರ ಮಾಡುವ ಚಿಂತನೆ ನಮಗೆಲ್ಲ ಪ್ರೇರಣೆಯಾಗಿದೆ ಎಂದು ಹೇಳಿದರು.
ಅತಿಥಿಯಾಗಿ ಆಗಮಿಸಿದ ಪುತ್ತೂರು ಬಿಲ್ಲವ ಸಮಿತಿಯ ಮಾಜಿ ಅಧ್ಯಕ್ಷ ವಿಜಯಕುಮಾರ್ ಸೊರಕೆ ಅವರು ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಚಿಂತನೆಗಳ ಮೂಲಕ ಜನರ ಮನ ಪರಿವರ್ತನೆಯನ್ನು ಮಾಡಿದ ಮಹಾನ್ ವ್ಯಕ್ತಿಯಾಗಿದ್ದಾರೆ. ಅವರ ಆದರ್ಶ ತತ್ವಗಳು ನಮಗೆ ಸದಾ ದಾರಿದೀಪವಾಗಿದೆ ಎಂದು ಹೇಳಿದರು.
ದಕ ಜಿಲ್ಲಾ ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಜೋಕಿಮ್ ಡಿಸೋಜಾ ರವರು ಮಾತನಾಡಿ ನಾರಾಯಣ ಗುರುಗಳ ಚಿಂತನೆ ಮತ್ತು ಬೋಧನೆಗಳಲ್ಲಿ ವಿಶ್ವದ ಸರ್ವ ಧರ್ಮದ ತಿರುಳು ಅಡಕವಾಗಿದೆ ಎಂದವರು ಹೇಳಿದರು.
ಪುತ್ತೂರು ಯುವ ಕಾಂಗ್ರೆಸ್ನ ಅಧ್ಯಕ್ಷ ಪ್ರಸಾದ್ ಪಾಣಜೆ ರವರು ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳು ತಮ್ಮ ಹೋರಾಟದ ಮೂಲಕ ಸಮಾಜ ಸುಧಾರಣೆಯನ್ನು ಮಾಡಿದ ಮಹಾನ್ಗುರು ಅವರ ಆದರ್ಶಗಳು ಇಂದಿಗೂ ಪ್ರಸ್ತುತವಾಗಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪುತ್ತೂರು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ವಿ ಎಚ್ ಎ ಶಕೂರ್ ಹಾಜಿ, ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ವತ್ತಾರ ಅಮಲರಾಮಚಂದ್ರ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ವೇದನಾಥ ಸುವರ್ಣ, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮೋನಪ್ಪ ಪೂಜಾರಿ ಕೆರೆಮಾರು, ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ ಬೊಳ್ಳಾಡಿ ಅಶೋಕ್ ಪೂಜಾರಿ, ಕಾಂಗ್ರೆಸ್ ಜಾಲತಾಣದ ಅಧ್ಯಕ್ಷ ಸಿದ್ದಿಕ್ ಸುಲ್ತಾನ್, ಬ್ಲಾಕ್ ಕಾರ್ಯದರ್ಶಿಗಳಾದ ಸೀರಿಲ್ ರೋಡ್ರಿಗಸ್, ದಿನೇಶ್ ಪಿವಿ, ಅಬೀಬ್ ಕಣ್ಣೂರು, ಒಳಮೊಗ್ರು ಪಂಚಾಯತಿ ಸದಸ್ಯ ಚಿತ್ರ ಬಿ, ಬ್ಲಾಕ್ ಕಾಂಗ್ರೆಸ್ ಮಹಿಳಾ ಕಾರ್ಯದರ್ಶಿ ಸೀತಾ ಭಟ್, ಕೃಷ್ಣಪ್ಪ ಪೂಜಾರಿ ಬೊಳ್ಳಿಂಬಳ, ಕೇಶವ ಸುವರ್ಣ ಮೇರ್ಲ, ಕರ್ನಾಟಕ ಕಾಂಗ್ರೆಸ್ ಮಹಿಳಾ ಕಾರ್ಯದರ್ಶಿ ಸಾಹಿರಾ ಜುಬೇರ್ ಸಹಿತ ಮೊದಲಾದವರು ಆಗಮಿಸಿದ್ದರು. ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ವಿಶಾಲಾಕ್ಷಿ ಬನ್ನೂರು ಸ್ವಾಗತಿಸಿ, ಕಲಾವಿದ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿದರು. ಹರೀಶ್ ಕುಮಾರ್ ನಿಡ್ಪಳ್ಳಿ ಕಾರ್ಯಕ್ರಮ ನಿರ್ವಹಿಸಿದರು.