ಪಡೀಲ್ ನಲ್ಲಿ ಸ್ಕೂಟರ್ ಪಲ್ಟಿ – ಸವಾರನಿಗೆ ತೀವ್ರ ಗಾಯ

0

ಪುತ್ತೂರು: ಪುತ್ತೂರು ಪಡೀಲ್ ನಲ್ಲಿ ಸ್ಕೂಟರ್ ವೊಂದು ಚಾಲಕನ ಹತೋಟಿ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಆ.30 ರ ರಾತ್ರಿ ನಡೆದಿದೆ. ಅಪಘಾತದಿಂದ ಸವಾರ ತೀವ್ರ ಗಾಯಗೊಂಡಿದ್ದಾರೆ.

ಕೆಮ್ಮಾಯಿಯಲ್ಲಿ ಗೋದ್ರೆಜ್ ಪ್ಯಾಕ್ಟರಿ ಹೊಂದಿರುವ ಚಿಕ್ಕಮುಡ್ನೂರು ಕಟ್ಟೆಮಜಲು ನಿವಾಸಿ ಸ್ಕೂಟರ್ ಸವಾರ ರಾಜು ಗೌಡ ಒಕ್ಕಲಿಗ (60ವ) ಅಪಘಾತದಿಂದ ಗಾಯಗೊಂಡವರಾಗಿದ್ದು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ರಾಜು ಗೌಡ ಅವರು ರಾತ್ರಿ ಪುತ್ತೂರಿನಿಂದ ಮನೆ ಕಡೆಗೆ ಸ್ಕೂಟರ್ ನಲ್ಲಿ ಹೋಗುತ್ತಿದ್ದ ವೇಳೆ ಪಡೀಲ್ ಚಾಮುಂಡೇಶ್ವರಿ ಗ್ಯಾರೇಜ್ ಬಳಿ ಡಿವೈಡರ್ ಗೆ ಅವರ ಸ್ಕೂಟರ್ ಡಿಕ್ಕಿಯಾಗಿ ಪಲ್ಟಿಯಾಗಿದೆ.

ಡಿಕ್ಕಿಯ ರಭಸಕ್ಕೆ ತೀವ್ರ ಗಾಯಗೊಂಡ ಅವರನ್ನು ಮಂಗಳೂರು ಪಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆ.31 ರಂದು ಅವರನ್ನು ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here