ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆದ ಪ್ರತಿಷ್ಠಾ ವರ್ಧಂತಿ ಪ್ರಯುಕ್ತ ಸಂಜೆ ವಿದುಷಿ ಪವಿತ್ರಾ ರೂಪೇಶ್‌ರವರಿಂದ ದಾಸರ ಪದಗಳು ಕಾರ್ಯಕ್ರಮ ನಡೆಯಿತು. ಹಾರ್ಮೊನಿಯಂನಲ್ಲಿ ವಿಶ್ವನಾಥ ನಾಯಕ್, ತಬಲದಲ್ಲಿ ಸಾಯಿರಾಮ ರಾವ್ ಕೊಂಬೆಟ್ಟು, ರಿದಂ ಪ್ಯಾಡ್ ಸುಹಾಸ್ ಹೆಬ್ಬಾರ್, ತಾಳದಲ್ಲಿ ಜಯಂತ ಕೆ. ಉರ್ಲಾಂಡಿ ಹಾಗೂ ಜನನಿ ಅಜ್ಜಿಕಲ್ಲು ಸಹಕರಿಸಿದರು. ರಾತ್ರಿ ಮಹಾಪೂಜೆ ಪ್ರಸಾದ ವಿತರಣೆ ನಡೆಯಿತು. ಮಂದಿರದ ಅರ್ಚಕ ಹರಿಪ್ರಸನ್ನ ಸರೋಳಿತ್ತಾಯ, ಕೋಶಾಧಿಕಾರಿ ಎಚ್. ತಾರನಾಥ, ಉಪಾಧ್ಯಕ್ಷ ಗೋಪಾಲ ನೈಕ್, ಜತೆ ಕಾರ್ಯದರ್ಶಿ ಯಶವಂತ ಆಚಾರ್ಯ, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಿತ್ಯಕರಸೇವಕರ ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.


