ಪುತ್ತೂರು: ಪದವಿ ಪೂರ್ವ ಶಿಕ್ಷಣ ಇಲಾಖೆ ದ.ಕ ಜಿಲ್ಲೆ ಮತ್ತು ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ವಿವೇಕಾನಂದ ಕಾಲೇಜು ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಫುಟ್ ಬಾಲ್ ಪಂದ್ಯಾಟವು ಜರಗಿದ್ದು ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜು ವಿನ್ನರ್ಸ್ ಆಗಿ ಹೊರಹೊಮ್ಮಿದೆ.
ವಿವೇಕಾನಂದ ಪದವಿ ಪೂರ್ವ ಕಾಲೇಜು ಹಾಗೂ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ನಡುವೆ ನಡೆದ ಫೈನಲ್ ಹೋರಾಟದಲ್ಲಿ ಪಂದ್ಯಾಟದ ಪ್ರಥಮಾರ್ಧದಲ್ಲಿ ಫಿಲೋಮಿನಾ ಕಾಲೇಜು ತಂಡ ಎರಡು ಗೋಲು(2-0)ಗಳನ್ನುದಾಖಲಿಸಿ ಮುನ್ನೆಡೆ ಸಾಧಿಸಿತ್ತು. ದ್ವಿತೀಯಾರ್ಧದ ವೇಳೆಯೂ ಫಿಲೋಮಿನಾ ಕಾಲೇಜು ತಂಡ ಮತ್ತೆರಡು ಗೋಲನ್ನು ದಾಖಲಿಸಿ ಗೋಲು ಸಂಖ್ಯೆಯನ್ನು 4-0 ಏರಿಸಿಕೊಂಡು ವಿಜಯಿಯಾಯಿತು. ಫೈನಲ್ ಪಂದ್ಯಾಟಕ್ಕೆ ಮೊದಲು ನಡೆದ ಸೆಮಿಫೈನಲಿನಲ್ಲಿ ಫಿಲೋಮಿನಾ ಪದವಿ ಪೂರ್ವ ಕಾಲೇಜು ತಂಡ ಅಂಬಿಕಾ ಪದವಿ ಪೂರ್ವ ಕಾಲೇಜು ತಂಡದ ವಿರುದ್ಧ 8-0 ಗೋಲುಗಳನ್ನು ಬಾರಿಸಿ ಫೈನಲಿಗೆ ಅರ್ಹತೆ ಪಡೆದಿತ್ತು.
ತಾಲೂಕು ಪಿಯು ಕೋಆರ್ಡಿನೇಟರ್ ಪುನೀತ್ ರವರು ವಿಜೇತರಿಗೆ ಬಹುಮಾನ ವಿತರಿಸಿದರು. ವಿವೇಕಾನಂದ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ರವಿಶಂಕರ್, ಡಾ|ಜ್ಯೋತಿ, ಯತೀಶ್ ಕುಮಾರ್, ಫಿಲೋಮಿನಾ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಲ್ಯಾಸ್ ಪಿಂಟೋ, ಫಿಲೋಮಿನಾ ಪದವಿ ಪೂರ್ವ ಕಾಲೇಜು ದೈಹಿಕ ಶಿಕ್ಷ ನಿರ್ದೇಶಕ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.
ತಂಡದ ಆಟಗಾರರಿವರು..
ತಂಡದಲ್ಲಿ ಇಬ್ರಾಹಿಂ ಸೆಝಿಲ್, ಮೊಹಮದ್ ಅಜ್ಮಾನ್, ಮೊಹಮದ್ ತವಾಫ್, ಯು.ಮೊಹಮದ್ ಫಾಸಿಹ್,ಮೊಹಮದ್ ರಶೀದ್, ಅಕ್ತರ್ ಖಾನ್, ವರುಣ್ ಎಚ್.ಎಂ(ದ್ವಿತೀಯ ಇಸಿಬಿಎ), ಅಬ್ದುಲ್ ರಾಝಿಕ್ ಕೆ, ಮೊಹಮದ್ ಶಫಿ, ಪಿ.ಮೊಹಮದ್ ಮುಭಾಶ್, ಅಬೂಬಕ್ಕರ್ ಸಿದ್ಧೀಕ್, ಅಬ್ದುಲ್ ರಾಝಿಕ್, ಅಬೂಬಕ್ಕರ್ ಸಿದ್ಧೀಕ್, ಮೊಹಮದ್ ಫಾಯಿಝ್(ದ್ವಿತೀಯ ಎಸ್.ಸಿ.ಬಿ.ಎ), ಅಬ್ದುಲ್ ರೆಹಮಾನ್(ಪ್ರಥಮ ಪಿಸಿಎಂಸಿ), ಅಬ್ದುಲ್ ಆರ್ಶಕ್(ದ್ವಿತೀಯ ಪಿಸಿಎಂಬಿ), ಕ್ರಿಷಾ ರೋಯಿಸ್ಟನ್(ದ್ವಿತೀಯ ಎಸ್.ಇ.ಬಿ.ಎ), ಝೊಹೈರ್ ಲತೀಫ್ ಸಿ.ಎ(ದ್ವಿತೀಯ ಪಿಸಿಎಂಸಿ)ರವರು ಭಾಗವಹಿಸಿದ್ದರು.