ನೆಲ್ಯಾಡಿ: ಎಫ್ ಮ್ಯಾಕ್ ಗ್ರೂಪ್ಸ್‌ನವರ ಎಫ್‌ಮ್ಯಾಕ್ ಪಿಕ್ ವಿನ್ ಲಕ್ಕಿ ಸ್ಕೀಮ್ ಯೋಜನೆ ಸೆ.೨ರಂದು ನೆಲ್ಯಾಡಿ ದುರ್ಗಾಶ್ರೀ ಟವರ್‍ಸ್‌ನಲ್ಲಿ ಶುಭಾರಂಭಗೊಂಡಿತ್ತು. ನೆಲ್ಯಾಡಿ ವರ್ತಕ ಸಂಘದ ಅಧ್ಯಕ್ಷ ರಫೀಕ್ ಸೀಗಲ್‌ರವರು ಕಚೇರಿ ಉದ್ಘಾಟಿಸಿದರು. ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ನೆಲ್ಯಾಡಿ ಪೇಟೆ ವೇಗವಾಗಿ ಬೆಳೆಯುತ್ತಿದೆ. ಹೊಸ ಉದ್ದಿಮೆಗಳೂ ಪೇಟೆಯ ಬೆಳವಣಿಗೆಗೆ ಪೂರಕವಾಗಲಿದೆ. ಈ ನಿಟ್ಟಿನಲ್ಲಿ ನೆಲ್ಯಾಡಿಯಲ್ಲಿ ಆರಂಭಗೊಂಡಿರುವ ಎಫ್ ಮ್ಯಾಕ್ ಸ್ಕೀಮ್ ನೆಲ್ಯಾಡಿಯ ಜನರ ಆಶೀರ್ವಾದದೊಂದಿಗೆ ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದರು.
ಅತಿಥಿಯಾಗಿದ್ದ ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಸಲಾಂ ಬಿಲಾಲ್‌ರವರು ಮಾತನಾಡಿ, ದೊಡ್ಡ ಪಟ್ಟಣಗಳಿಗೆ ಸೀಮಿತವಾಗಿದ್ದ ಲಕ್ಕಿ ಸ್ಕೀಮ್ ಈಗ ನೆಲ್ಯಾಡಿಯಲ್ಲಿಯೂ ಆರಂಭಗೊಂಡಿರುವುದು ಹೆಮ್ಮೆಯ ವಿಚಾರವಾಗಿದೆ. ಇದು ರಾಜ್ಯದಾದ್ಯಂತ ಪಸರಿಸಲಿ ಎಂದರು. ಇನ್ನೋರ್ವ ಅತಿಥಿ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಡಾ.ಸದಾನಂದ ಕುಂದರ್‌ರವರು ಮಾತನಾಡಿ, ಎಫ್‌ಮ್ಯಾಕ್ ಗ್ರೂಪ್ಸ್ ಹಮ್ಮಿಕೊಂಡಿರುವ ಲಕ್ಕಿ ಸ್ಕೀಮ್‌ನಲ್ಲಿ ಅಲ್ಪಾವಧಿಯಲ್ಲಿ ದೊಡ್ಡ ಮೊತ್ತದ ಬಹುಮಾನ ಗೆಲ್ಲುವ ಅವಕಾಶವಿದೆ. ಇದೊಂದು ಸಂತೋಷದ ವಿಚಾರವಾಗಿದೆ. ಎಲ್ಲರಿಗೂ ಸರಕಾರಿ ಉದ್ಯೋಗ ಸಿಗಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಸ್ವ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗುವುದರೊಂದಿಗೆ ಇತರರಿಗೂ ಉದ್ಯೋಗ ಸಿಗುವುದರೊಂದಿಗೆ ಊರಿನ ಅಭಿವೃದ್ಧಿಯೂ ಆಗಲಿದೆ. ನೆಲ್ಯಾಡಿಯ ಯುವಕರು ಸೇರಿಕೊಂಡು ಆರಂಭಿಸಿರುವ ಈ ಸ್ಕೀಮ್ ಜನರಿಗೆ ಅನುಕೂಲವಾಗಲಿ. ಬೇರೆ ಊರುಗಳಲ್ಲಿಯೂ ಬೆಳೆಯಲಿ ಎಂದರು.
ನೆಲ್ಯಾಡಿ ಬದ್ರಿಯಾ ಜುಮಾ ಮಸೀದಿ ಕಾರ್ಯದರ್ಶಿ ಮಹಮ್ಮದ್ ಹನೀಫ್ ಸಿಟಿ ಅವರು ಮಾತನಾಡಿ, ಯಾವುದೇ ಉದ್ಯಮ ಯಶಸ್ವಿಯಾಗಲು ಜನರ ವಿಶ್ವಾಸಗಳಿಸುವುದು ಮುಖ್ಯ. ಕೇವಲ ಲಾಭದ ಉದ್ದೇಶವಿಟ್ಟು ಉದ್ದಿಮೆ ನಡೆಸದೇ ಪ್ರಾಮಾಣಿಕ ವ್ಯವಹಾರದೊಂದಿಗೆ ಮುನ್ನಡೆಸಿಕೊಂಡು ಹೋಗಬೇಕು ಎಂದರು. ದುರ್ಗಾ ಶ್ರೀ ಟವರ್‌ನ ಮಾಲಕ ಸತೀಶ್ ಕೆ.ಎಸ್.ದುರ್ಗಾಶ್ರೀ ಮಾತನಾಡಿ, ಎಫ್ ಮ್ಯಾಕ್‌ನವರ ಈ ಯೋಜನೆಗೆ ನೆಲ್ಯಾಡಿಯ ಜನತೆ ಒಳ್ಳೆಯ ರೀತಿಯಲ್ಲಿ ಸ್ಪಂದನೆ ನೀಡಲಿದ್ದಾರೆ. ಸಂಸ್ಥೆಯವರು ಜನರಿಗೆ ಒಪ್ಪುವಂತಹ ರೀತಿಯಲ್ಲಿ ಸೇವೆ ನೀಡಬೇಕು. ಜನರ ವಿಶ್ವಾಸ ಉಳಿಸಿಕೊಂಡಲ್ಲಿ ಸಂಸ್ಥೆಯೂ ಮುಂದೆ ಬೆಳೆಯಲಿದೆ ಎಂದರು. ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಹನೀಫ್ ಕರಾವಳಿ, ಎಫ್‌ಮ್ಯಾಕ್ ಗ್ರೂಫ್‌ನ ಮೇನೇಜಿಂಗ್ ಡೈರೆಕ್ಟರ್ ಫರೀಝ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಾಲುದಾರರಾದ ಅಜರ್, ಮುಫೀಝ್ ಕೆ.ಎಂ., ಸಾದಿಕ್ ಕೆ.ಆರ್., ಫರೀಝ್ ರವರು ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ಹರಿಪ್ರಸಾದ್ ಸ್ವಾಗತಿಸಿ, ನಿರೂಪಿಸಿದರು. ಮರ್‌ಝೂಕ್ ವಂದಿಸಿದರು.
ಕಾರು, ಚಿನ್ನ ಗೆಲ್ಲುವ ಸುವರ್ಣಾವಕಾಶ
ಸ್ಕೀಮ್‌ನ ಕುರಿತು ಮಾಹಿತಿ ನೀಡಿದ ಎಫ್ ಮ್ಯಾಕ್ ಗ್ರೂಪ್‌ನ ಸದಸ್ಯ ಮರ್‌ಝೂಕ್‌ರವರು, ಇದೊಂದು ಬಡವರ ಕನಸು ನನಸು ಮಾಡುವ ಯೋಜನೆಯಾಗಿದೆ. ಬಡ ಕೂಲಿಕಾರ್ಮಿಕನಲ್ಲಿಯೂ ಚಿನ್ನ, ಕಾರು, ದ್ವಿಚಕ್ರ ವಾಹನ ಖರೀದಿಸುವ ಕನಸು ಇರುತ್ತದೆ. ಅ.10ರಿಂದ ಈ ಯೋಜನೆ ಆರಂಭಗೊಳ್ಳಲಿದ್ದು ಇದಕ್ಕೆ ಸೇರ್ಪಡೆಯಾಗುವ ಸದಸ್ಯರು ಪ್ರತಿ ತಿಂಗಳು ರೂ.1 ಸಾವಿರದಂತೆ 14 ಕಂತು ಹಾಗೂ 15ನೇ ಕಂತಿನಲ್ಲಿ ರೂ.೨ ಸಾವಿರ ಪಾವತಿಸಬೇಕು. ಪ್ರತಿ ತಿಂಗಳ 10ನೇ ತಾರೀಖಿನಂದು ಸಂಜೆ 5 ಗಂಟೆಗೆ ಡ್ರಾ ನಡೆಯಲಿದೆ. ವಿಜೇತರಿಗೆ ಚಿನ್ನ, ದ್ವಿಚಕ್ರ ವಾಹನ ಸೇರಿದಂತೆ ಬೆಲೆಬಾಳುವ ವಸ್ತುಗಳು ಸಿಗಲಿದ್ದು ಅವರು ಮುಂದಿನ ಕಂತು ಪಾವತಿಸಬೇಕಾಗಿಲ್ಲ. 15ನೇ ಡ್ರಾದಲ್ಲಿ 7 ಬಂಪರ್ ಬಹುಮಾನಗಳಿದ್ದು ಪ್ರಥಮ ವಿಜೇತರಿಗೆ 25 ಪವನ್ ಚಿನ್ನ, ದ್ವಿತೀಯ ವಿಜೇತರಿಗೆ ಹುಂಡೈ ಎಕ್ಸ್‌ಟರ್ ಕಾರು ಹಾಗೂ ಐವರಿಗೆ ಟಿವಿಎಸ್ ಎನ್‌ಟಾರ್‍ಕ್ ದ್ವಿಚಕ್ರ ವಾಹನ ಗೆಲ್ಲುವ ಅವಕಾಶವಿದೆ. ಉಳಿದ ಸದಸ್ಯರಿಗೆ ಅವರು ಆಯ್ಕೆಮಾಡಿದ ಬಹುಮಾನ ಸಿಗಲಿದೆ. ಹೆಚ್ಚಿನ ವಿವರಗಳಿಗೆ ಮೊಬೈಲ್ ನಂ.8050908606, 8050909606ಗೆ ಸಂಪರ್ಕಿಸುವಂತೆ ತಿಳಿಸಿ, ಜನರ ಸಹಕಾರ ಕೋರಿದರು.