ಕಬಡ್ಡಿ:ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲಾ ಬಾಲಕಿಯರ ತಂಡ ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಪುತ್ತೂರು:ಕರ್ನಾಟಕ ಸರಕಾರ, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಟ್ಟಣಿಗೆ ಮುಡ್ನೂರು ಆಶ್ರಯದಲ್ಲಿ ನೆಟ್ಟಣಿಗೆ ಮುಡ್ನೂರು ಹಿ.ಪ್ರಾ ಶಾಲೆಯಲ್ಲಿ ಸೆ.2ರಂದು ನಡೆದ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲಾ ಬಾಲಕಿಯರ ತಂಡ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದೆ.


ವಿದ್ಯಾರ್ಥಿಗಳಾದ ಜುವೆನ್ನ ಡ್ಯಾಜಲ್ ಕುಟಿನ್ಹಾ, ಸನ್ನಿಧಿ, ಜಸ್ಮಿತಾ, ಫಾತಿಮತ್ ಶೈಮ, ನಿಶ್ಮಿತಾ ಕೆ, ಹಾರ್ದಿಕ, ಘನಶ್ರೀ, ಆರಾಧನ, ದ್ರಿಶಾ, ಫಾತಿಮತ್ ಅಫ್ರ, ರಶ್ಮಿತಾ, ವೈಷ್ಣವಿ ರೈ, ಸಾಕ್ಷಿ, ಅನ್ವಿತಾ, ಸುಶ್ರಾವ್ಯ, ಪಲ್ಲವಿ,ಜೆನಿಟ ಸಿಂಧು ಪಸನ್ನ ತಂಡದಲ್ಲಿದ್ದರು. ಶಾಲಾ ಮುಖ್ಯಗುರು ವೆನಿಶಾ ಬಿ.ಎಸ್‌ರವರ ಮಾರ್ಗದರ್ಶನದಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಬಾಲಕೃಷ್ಣ ರೈ ಪೊರ್ದಾಲ್, ಹಬೀಬ್ ಮಾಣಿ, ಚಂದ್ರಶೇಖರ್ ರೈ ಹಾಗೂ ಸತೀಶ್ ರೈ ತರಬೇತಿ ನೀಡಿರುತ್ತಾರೆ. ಇವರು ಸೆ.16ರಂದು ದರ್ಬೆ ಲಿಟ್ಲ್ ಫ್ಲವರ್ ಹಿ.ಪ್ರಾ ಶಾಲೆಯಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಪಂದ್ಯಾಟದಲ್ಲಿ ಭಾಗವಹಿಸಲಿದ್ದಾರೆ.

LEAVE A REPLY

Please enter your comment!
Please enter your name here