ಪುತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮರೀಲ್ ಇಎಸ್‌ಆರ್ ಪ್ರೆಸಿಡೆನ್ಸಿ ಸ್ಕೂಲ್‌ಗೆ ಹಲವು ಪ್ರಶಸ್ತಿ

0

ಪುತ್ತೂರು: ಮರೀಲ್ ಇಎಸ್‌ಆರ್ ಪ್ರೆಸಿಡೆನ್ಸಿ ಸ್ಕೂಲ್‌ನಲ್ಲಿ ಆ.31ರಂದು ನಡೆದ ಪುತ್ತೂರು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮರೀಲ್ ಇಎಸ್‌ಆರ್ ವಿದ್ಯಾಸಂಸ್ಥೆಯ ಅನೇಕ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ನೀಡಿ ಬಹುಮಾನ ಪಡೆದುಕೊಂಡಿದ್ದಾರೆ.


ಧಾರ್ಮಿಕ ಪಠಣ ಅರೇಬಿಕ್ ಹಿರಿಯ ವಿಭಾಗದಲ್ಲಿ ಮಹಮ್ಮದ್ ಹಾಶಿರ್ ಅವರು ಪ್ರಥಮ ಸ್ಥಾನ ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕಂಠಪಾಠ ಕನ್ನಡ ವಿಭಾಗದಲ್ಲಿ ಆರನೇ ತರಗತಿಯ ಆಯಿಶತ್ ಸಲ್ವಾ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಇಂಗ್ಲೀಷ್ ಕಂಠಪಾಠದಲ್ಲಿ ಆರನೇ ತರಗತಿಯ ಇಬ್ರಾಹಿಂ ಝಿಶಾನ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಧಾರ್ಮಿಕ ಪಠಣ ಅರೇಬಿಕ್ ಕಿರಿಯರ ವಿಭಾಗದಲ್ಲಿ ಎರಡನೇ ತರಗತಿಯ ಹಾದಿನ್ ಮುಬಶ್ಶಿರ್ ತೃತೀಯ ಸ್ಥಾನ ಪಡೆದಿದ್ದಾರೆ.

ಛದ್ಮವೇಷ ಸ್ಪರ್ದೆಯಲ್ಲಿ ನಾಲ್ಕನೇ ತರಗತಿಯ ಮಹಮ್ಮದ್ ನಿಯಾಸ್ ತೃತೀಯ ಸ್ಥಾನ ಪಡೆದಿದ್ದು ಇಂಗ್ಲೀಷ್ ಕಂಠಪಾಠದಲ್ಲಿ ನಾಲ್ಕನೇ ತರಗತಿಯ ಮಹಮ್ಮದ್ ಐಮಾನ್ ತೃತೀಯ ಸ್ಥಾನ ಪಡೆದಿದ್ದಾರೆ.

LEAVE A REPLY

Please enter your comment!
Please enter your name here