ಸನಾತನ ಧರ್ಮನಿಂದನೆ ಆರೋಪ -ತಮಿಳುನಾಡು ಮುಖ್ಯಮಂತ್ರಿ ಪುತ್ರನ ವಿರುದ್ಧ ಪುತ್ತೂರು ಹಿಂಜಾವೆಯಿಂದ ದೂರು

0

ಪುತ್ತೂರು: ಸನಾತನ ಹಿಂದೂ ಧರ್ಮವನ್ನು ಡೆಂಘಿ ರೋಗಕ್ಕೆ ಹೋಲಿಸಿ ಉದ್ದೇಶಪೂರ್ವಕವಾಗಿ ದ್ವೇಷ ಪೂರಿತ ಮಾತುಗಳಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಪುತ್ರ ಉದಯನಿಧಿ ಸ್ಟಾಲೀನ್ ಅವರ ವಿರುದ್ಧ ಪುತ್ತೂರು ಹಿಂದು ಜಾಗರಣ ವೇದಿಕೆಯಿಂದ ಪುತ್ತೂರು ನಗರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.


ತಮಿಳುನಾಡು ಮುಖ್ಯಮಂತ್ರಿಯ ಪುತ್ರ ಉದಯನಿಧಿ ಸ್ಟಾಲಿನ್ ಅವರು ಸೆ.2ರಂದು ಹಿಂದೂ ಸನಾತನ ಧರ್ಮವನ್ನು ಉದ್ದೇಶಿಸಿ ಸನಾತನ ಧರ್ಮ ಡೆಂಗ್ಯೂ ಇದ್ದಂತೆ ಅದನ್ನು ವಿರೋಧಿಸಿದರೆ ಸಾಲದು ಅದನ್ನು ಸೊಳ್ಳೆಗಳು, ಡೆಂಗ್ಯೂ ಜ್ವರ, ಮಲೇರಿಯಾ, ಕೊರೋನಾ ರೋಗಗಳನ್ನು ನಿರ್ಮೂಲನೆ ಮಾಡಿದಂತೆ ಮಾಡಬೇಕೆಂದು ಉದ್ದೇಶಪೂರ್ವಕವಾಗಿ ದ್ವೇಷಪೂರಿತ ಮಾತುಗಳನ್ನಾಡಿ ಹಿಂದು ಧಾರ್ಮಿಕ ಭಾವನೆ, ಧಾರ್ಮಿಕ ನಂಬಿಕೆಯನ್ನು ಅವಮಾನಿಸಿದ್ದಾರೆ. ಧರ್ಮ ಜನಾಂಗ ನಂಬಿಕೆ ಇತ್ಯಾದಿಗಳ ಆದಾಯದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಮತ್ತು ಸಾಮರಸ್ಯವನ್ನು ಕದಡುವ ಪೂರ್ವಗ್ರಹ ಪೀಡಿಸುವಂತೆ ಮಾತನಾಡಿದ್ದಾರೆ. ಇದರಿಂದ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಇದು ಭಾರತೀಯ ದಂಡ ಸಂಹಿತೆ ಕಾಲಂ 153ಎ ಹಾಗು 295ಎ ಪ್ರಕಾರ ಅಪರಾಧವಾಗಿದ್ದು, ಈ ಹಿನ್ನೆಲೆಯಲ್ಲಿ ಆರೋಪಿ ಉದಯನಿಧಿ ಸ್ಟಾಲಿನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ದೂರಿನಲ್ಲಿ ತಿಳಿಸಿದ್ದಾರೆ. ಹಿಂದು ಜಾಗರಣ ವೇದಿಕೆ ತಾಲೂಕು ಸಂಚಾಲಕ ದಿನೇಶ್ ಪಂಜಿಗ, ಸಮಿತಿ ಸದಸ್ಯ ಮನೀಷ್ ಬನ್ನೂರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here