ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ರಕ್ಷಾಬಂಧನ

0

ಪುತ್ತೂರು: ರಕ್ಷಾಬಂಧನ ಇದು ಭಾತೃತ್ವದ ಸಂದೇಶ ಸಾರುವ ಹಬ್ಬ ಈ ಸಂಭ್ರಮದ ಹಬ್ಬವನ್ನು ನಮ್ಮ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಯಾದಶ್ರೀ ಸಭಾಂಗಣದಲ್ಲಿ ಆ.30ರಂದು ಆಚರಿಸಲಾಯಿತು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ಜಿಲ್ಲಾ ಕಾರಿಣಿ ಸದಸ್ಯ ಪಾರ್ಥಸಾರಥಿ ಮೂಲ್ಕಿ ಇವರು ಆಗಮಿಸಿ ಭಾರತಮಾತಗೆ ಪುಷ್ಪಾರ್ಚನೆ ಗೈದು ರಕ್ಷೆಯನ್ನು ಕಟ್ಟಿ, ರಕ್ಷೆಯ ಮಹತ್ವ, ಮತ್ತು ರಕ್ಷಾ ಬಂಧನದ ಮಹತ್ವ ಅದರ ವಿಶೇಷತೆಯ ಬಗ್ಗೆ ವಿದ್ಯಾರ್ಥಿಗಳಿಗೆ ಪ್ರೇರಣಾದಾಯಕ ನುಡಿಗಳೊಂದಿಗೆ ಶುಭ ಹಾರೈಸಿದರು.

ಶಾಲಾ ಮುಖ್ಯಸ್ಥರು ಕಾರ್‍ಯಕ್ರಮದಲ್ಲಿ ಉಪಸ್ಥಿತರಿದ್ದು ವಿದ್ಯಾಸಂಸ್ಥೆಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯ ವಿದ್ಯಾರ್ಥಿಗಳು ದೇಶಭಕ್ತಿ ಗೀತೆ ಹಾಡಿದರು. ಕಾರ್‍ಯಕ್ರಮದ ಅಧ್ಯಕ್ಷರಾಗಿ ಸಾಯಿಗೀತಾ ರಾವ್ ಅಧ್ಯಕ್ಷೀಯ ನೆಲೆಯಲ್ಲಿ ಮಾತಾನಾಡಿದರು, ಭಾರತಿ. ಎಸ್.ಎ ಅತಿಥಿಗಳನ್ನು ಸ್ವಾಗತಿಸಿ, ಯಶೋಧ ಧನ್ಯವಾದಗೈದರು. ಆಶಾ.ಕೆ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಾಲೆಯ ಶಿಕ್ಷಕ ಶಿಕ್ಷಕೇತರ ಬಂಧುಗಳು ಸಹಕರಿಸಿದರು.

LEAVE A REPLY

Please enter your comment!
Please enter your name here