ಸೆ.6: ಪರ್ಪುಂಜದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಸಂಭ್ರಮ

0

ಸ್ನೇಹ ಯುವಕ, ಮಹಿಳಾ ಮಂಡಲ ಸಾರಥ್ಯ
ವಿವಿಧ ಆಟೋಟ ಸ್ಪರ್ಧೆಗಳು
ಕ್ರೀಡಾಪ್ರತಿಭೆಗಳಿಗೆ ಸನ್ಮಾನ

ಪುತ್ತೂರು: ಸ್ನೇಹ ಯುವಕ ಮಂಡಲ ಮತ್ತು ಸ್ನೇಹ ಮಹಿಳಾ ಮಂಡಲ ಪರ್ಪುಂಜ ಇದರ ಜಂಟಿ ಆಶ್ರಯದಲ್ಲಿ 19 ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಠಮಿ ಸೆ.06 ರಂದು ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದೆರ್ಕಳ ಗರಡಿ ವಠಾರದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ರಾಮಜಾಲು ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಉದ್ಘಾಟಿಸಲಿದ್ದು ಹಲವು ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಉದ್ಘಾಟನೆಯ ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದ್ದು ವಿಶೇಷವಾಗಿ ಪುರುಷರಿಗೆ ಕಂಬ ಏರುವುದು, ಮಡಿಕೆ ಹೊಡೆಯುವುದು, ಹಗ್ಗಜಗ್ಗಾಟ, ಗೋಣಿ ಚೀಲದ ಓಟ, ಕೋಲು ಓಟ, ವಾಲಿಬಾಲ್ ಪಂದ್ಯಾಟ ನಡೆಯಲಿದೆ. ಮಹಿಳೆಯರಿಗೆ ಮಡಿಕೆ ಹೊಡೆಯುವುದು, ಹಗ್ಗಜಗ್ಗಾಟ,ಲಕ್ಕಿ ಸರ್ಕಲ್, ಗುಂಡೆಸೆತ ಹಾಗೇ ಪುಟಾಣಿಗಳಿಗೆ ರಾಧಾಕೃಷ್ಣ ವೇಷಸ್ಪರ್ಧೆ, ಕಡ್ಲೆ ಹೆಕ್ಕುವುದು, 1ರಿಂದ 4 ನೇ ತರಗತಿ ಮಕ್ಕಳಿಗೆ ಛದ್ಮವೇಷ, ಲಿಂಬೆ ಚಮಚ ಓಟ, ಸೂಜಿದಾರ ಓಟ, 5ರಿಂದ 7 ನೇ ತರಗತಿ ಮಕ್ಕಳಿಗೆ ಲಿಂಬೆಚಮಚ ಓಟ, ಲಕ್ಕಿಸರ್ಕಲ್ ಹಾಗು 8 ರಿಂದ 10 ನೇ ತರಗತಿ ಮಕ್ಕಳಿಗೆ 100ಮೀ ಓಟ, ಗುಂಡೆಸೆತ ಹಾಗೂ ಇನ್ನಿತರ ಆಟಗಳು ನಡೆಯಲಿದೆ. ಕಂಬ ಏರುವುದರಲ್ಲಿ ಪ್ರಥಮ ನಗದು 2023, ಹಗ್ಗ ಜಗ್ಗಾಟದಲ್ಲಿ ಪ್ರಥಮ ನಗದು 2,222 ಮತ್ತು ದ್ವಿತೀಯ 1777 ಹಾಗೇ ಮಹಿಳೆಯರಿಗೆ ಹಗ್ಗ ಜಗ್ಗಾಟದಲ್ಲಿ ನಗದು 1666 ಮತ್ತು ದ್ವಿತೀಯ 1333 ಹಾಗೂ ಶಾಶ್ವತ ಫಲಕವಿದೆ. ಇದಲ್ಲದೆ ಇತರ ಎಲ್ಲಾ ಸ್ಪರ್ಧೆಗಳಲ್ಲೂ ವಿಜೇತರಾದವರಿಗೆ ಬಹುಮಾನಗಳಿವೆ. ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು ಶಾಸಕ ಅಶೋಕ್ ಕುಮಾರ್ ರೈ ಸಭಾಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕ ಸಂಜೀವ ಮಠಂದೂರು, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಸಹಿತ ಹಲವು ಮಂದಿ ಗಣ್ಯರು ಭಾಗವಹಿಸಲಿದ್ದಾರೆ. 10 ನೇ ತರಗತಿ ಹಾಗೂ ಕ್ರೀಡೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದ ಕ್ರೀಡಾಪಟುಗಳಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಸ್ನೇಹ ಯುವಕ ಮಂಡಲದ ಗೌರವ ಅಧ್ಯಕ್ಷ ಪ್ರೇಮ್‌ರಾಜ್ ರೈ ಪರ್ಪುಂಜ, ಅಧ್ಯಕ್ಷ ವಿಪಿನ್ ಶೆಟ್ಟಿ, ಕಾರ್ಯದರ್ಶಿ ನಿತಿನ್ ಗೌಡ, ಮಹಿಳಾ ಮಂಡಲದ ಗೌರವ ಅಧ್ಯಕ್ಷೆ ಬೇಬಿ ರೈ, ಅಧ್ಯಕ್ಷೆ ರೇಖಾ ರೈ, ಕಾರ್ಯದರ್ಶಿ ಪವಿತ್ರ ಹಾಗೂ ಸ್ನೇಹ ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಸರ್ವ ಪದಾಧಿಕಾರಿಗಳ, ಸದಸ್ಯರ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here