ಕಾವು:ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಕ್ರೀಡಾಕೂಟ ಹಾಗೂ ಗೆಳೆಯರ ಬಳಗ ಕಾವು ಇವರ ಪ್ರಾಯೋಜಕತ್ವದಲ್ಲಿ ಮುದ್ದು ಕೃಷ್ಣ ಸ್ಫರ್ಧೆ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸೆ 6 ರಂದು ನಡೆಯಲಿದ್ದು ,ಕ್ರೀಡಾಕೂಟದ ಉದ್ಘಾಟನೆಯನ್ನು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ನನ್ಯ ಅಚ್ಚುತ ಮೂಡೆತ್ತಾಯ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಉದ್ಘಾಟನಾ ಕಾರ್ಯಕ್ರಮದ ಬಳಿಕ ವಿವಿಧ ಅಟೋಟ ಕಾರ್ಯಕ್ರಮ ನಡೆಯಲಿದ್ದು ಪುರುಷರಿಗೆ ಕಬಡ್ಡಿ,ಹಗ್ಗ ಎಳೆಯುವುದು, ಚೆನ್ನಮಣೆ, ನಿಧಾನ ಬೈಕ್ ರೇಸ್,ಸೈಕಲ್ ರೇಸ್,ಲಗೋರಿ,ಮಡಕೆ ಒಡೆಯುವುದು,ರಸಪ್ರಶ್ನೆ ಹಾಗೂ ಮಹಿಳೆಯರಿಗೆ ಲಿಂಬೆ ಚಮಚ ಓಟ,ಮಡಿಕೆ ಒಡೆಯುವುದು,ಮೇಣದ ಬತ್ತಿ ಉರಿಸುವುದು,ಸುಗಮ ಸಂಗೀತ,ಹಗ್ಗ ಜಗ್ಗಾಟ,ಚೆನ್ನಮಣೆ, ಸ್ಟ್ರೋಹೆಡ್,ರಸಪ್ರಶ್ನೆ ಲಗೋರಿ,ಪ್ರಾಥಮಿಕ ಹಂತ ಹುಡುಗರಿಗೆ ಕಬಡ್ಡಿ,ಮಡಕೆ ಒಡೆಯುವುದು,ಗಣೇಶನ ಚಿತ್ರ ಬಿಡಿಸುವುದು, ರಸಪ್ರಶ್ನೆ ,ಪ್ರಾಥಮಿಕ ಹಂತದ ಹುಡುಗಿಯರಿಗೆ ಪಂಚಾಕ್ಷರಿ ಶ್ಲೋಕದ ಕಂಠಪಾಠ ಸ್ಪರ್ಧೆ, ಸುಗಮ ಸಂಗೀತ,ಮಡಕೆ ಒಡಿಯುವುದು,ಗಣೇಶನ ಚಿತ್ರ ಬಿಡಿಸುವುದು ಹಾಗೂ ಅಂಗನವಾಡಿ ಮಕ್ಕಳಿಗೆ, ಎಲ್ ಕೆಜಿ ಯು ಕೆ ಜಿ ಮಕ್ಕಳಿಗೆ, ಒಂದು ಮತ್ತು ಎರಡನೇ ತರಗತಿ ಮಕ್ಕಳಿಗೆ ಅದೃಷ್ಟ ಮಗು, ದೂರ ಜಿಗಿತ,ಅಭಿನಯ ಗೀತೆ,ರಸಪ್ರಶ್ನೆ ಹಾಗೂ ಮುದ್ದು ಕೃಷ್ಣ ಸ್ಪರ್ಧೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷರಾದ ನವೀನ್ ನನ್ಯ ಪಟ್ಟಾಜೆ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ಮಂಜಲ್ತಡ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ