ವಿಟ್ಲ: ಇಲ್ಲಿನ ಸರಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ಎ) ಶಾಲೆಯ ತರಗತಿ ಕಿಟಕಿಗಳಿಗೆ ಯಾರೋ ಕಿಡಿಗೇಡಿಗಳು ಹಾನಿ ಮಾಡಿರುವ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೆ.4ರಂದು ಬೆಳಿಗ್ಗೆ ಶಾಲಾ ಶಿಕ್ಷಕರು, ಮಕ್ಕಳು ಎಂದಿನಂತೆ ಶಾಲೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಸೆ.3ರಂದು ಶಾಲಾ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾಟ ನಡೆದಿದ್ದು, ಬಳಿಕ ಯಾರೋ ಕಿಡಿಗೇಡಿಗಳು ದುಷ್ಕೃತ್ಯವೆಸಗಿರಬೇಕೆಂದು ಸಂಶಯಿಸಲಾಗಿದೆ.
ಕಿಟಕಿಗಳಿಗೆ ಹಾನಿ ಮಾಡಿ, ಶಾಲಾ ಗೋಡೆಗಳಲ್ಲಿ ಅಶ್ಲೀಲವಾಗಿ ಬರೆಯಲಾಗಿದೆ, ಶಾಲೆಯ ತರಗತಿ ಕೊಠಡಿಗಳ ಬಾಗಿಲಿಗೆ ಮೊಟ್ಟೆ ಎಸೆದು ದುಷ್ಕೃತ್ಯ ಎಸಗಲಾಗಿದೆ. ಈ ಬಗ್ಗೆ ಮಾಹಿತಿ ಅರಿತ ವಿಟ್ಲ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.